Blog

ಬಸ್ ಸೌಲಭ್ಯ ಕಲ್ಪಿಸಿ



ಸಕಲೇಶಪುರ :- ತಾಲ್ಲೂಕಿನ ಹೆತ್ತೂರು ಹೋಬಳಿಯ ವ್ಯಾಪ್ತಿಯ ಸಾರ್ವಜನಿಕರಿಗೆ ಧರ್ಮಸ್ಥಳ, ಸುಬ್ರಹ್ಮಣ್ಯ ಹೋಗುವ ಭಕ್ತಾಧಿಗಳಿಗೂ ಹಾಗೂ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗುವ ಸಾರ್ವಜನಿಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ  ಅರಕಲಗೂಡುನಿಂದ ಬೆಳಿಗ್ಗೆ : 4.30 ಕ್ಕೆ ಬಸ್ ಹೊರಟು ಮಲ್ಲಿಪಟ್ಟಣ-ಶನಿವಾರಸಂತೆ – ಕೂಡುರಸ್ತೆ- ಹೆತ್ತೂರು-ಹಿರಿಯೂರು ಕೂಡಿಗೆ – ವಳಲಹಳ್ಳಿ, ಹಿರಿದನಹಳ್ಳಿ-ಕಡಗರಹಳ್ಳಿ-ಹೆಗ್ಗದೆ ಮಾರನಹಳ್ಳಿ – ಉಪ್ಪಿನಂಗಡಿ ಮಂಗಳೂರು ತಲುಪಿ ಹಾಗೇಯೇ ಸಂಜೆ  5.30 ಕ್ಕೆ ಮಂಗಳೂರಿನಿಂದ ಹೊರಟು ಪುನಃ ಇದೆ ಮಾರ್ಗದಲ್ಲಿ ಅರಕಲಗೂಡು ತಲುಪುವ ಬಸ್ ವ್ಯವಸ್ಥೆ ಮಾಡಿಕೊಡುವುದರಿಂದ ಅನುಕೂಲವಾಗುತ್ತದೆ ಎಂದು  ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದವರು ಸಂಸದರಾದ ಶ್ರೇಯಸ್ ಪಟೇಲ್ ಅವರ  ಶಿಫಾರಸಿನ ಪತ್ರದೊಂದಿಗೆ ಹಾಸನ ಜಿಲ್ಲಾ  ಕೆ ಎಸ್ ಆರ್ ಟಿ ಸಿ   ಉಪ ವಿಭಾಗಿಯ ನಿಯಂತ್ರಣಾಧಿಕಾರಿ   ದಿಲೀಪ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಚ್. ಡಿ.ಪಿ.ಏ  ಮಾಜಿ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ,ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ ಅಧ್ಯಕ್ಷರಾದ ದರ್ಶನ್,ಉಪಾಧ್ಯಕ್ಷರು ರುದ್ರೇಶ್,ಕಾರ್ಯದರ್ಶಿ ಅರುಣ್ ಗೌಡ ಕರಡಿಗಾಲ,ಖಾಜಾಂಚಿಗಳಾದ ಹೂವಣ್ಣ ಗೌಡ, ಸಂಘಟನಾ ಕಾರ್ಯದರ್ಶಿ ಜಾತಹಳ್ಳಿ ಅನಿಲ್, ಚಿನ್ನಹಳ್ಳಿ ಗಿರೀಶ್, ನಿರ್ದೇಶಕರಾದ ಕರಡಿಗಾಲ ಪರಮೇಶ್, ಹಿರದನಳ್ಳಿ ಮೋಹನ್ ಇದ್ದರು.

Related posts

ಮಲೆನಾಡು ರಕ್ಷಣೆ ಸೇನೆಯ ಹೋರಾಟ

Bimba Prakashana

ಆಲೂರುನಲ್ಲಿ ರಾಧಮ್ಮ ಜನ ಸ್ಪಂದನೆ ವತಿಯಿಂದ ವಾಕ್ಸಿನೇಷನ್

Bimba Prakashana

ಆಲೂರುನಲ್ಲಿ ಸಂತ ಸೇವಾ ಲಾಲ್ ಜಯಂತಿ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More