ಸಕಲೇಶಪುರ ತಾಲ್ಲೂಕಿನ ಬಾಗೆಯ ಸರ್ಕಾರಿ ಶಾಲೆಗೆ ಅಂಟಿಕೊಂಡಿರುವ ಮರಕ್ಕೆ ವಿದ್ಯುತ್ ತಂತಿ ತಗುಲುತ್ತಿದೆ.
ಇದರಿಂದಾಗಿ ಮರದಲ್ಲಿ ವಿದ್ಯುತ್ ಪ್ರವಹಿಸಿ ಬೆಂಕಿ ಕಾಣಿಸಿಕೊಳ್ಳುತ್ತಿದೆ.
ಇದರ ಪಕ್ಕವೇ ದಿನನಿತ್ಯ ನೂರಾರು ವಿಧ್ಯಾರ್ಥಿಗಳು ಆಟವಾಡುವುದು ಹಾಗೆಯೇ ಓಡಾಟ ಮಾಡುವುದರಿಂದ ಅವಘಡ ಸಂಭವಿಸುವ ಅವಕಾಶವಿರುವುದರಿಂದ ಯಾವುದೇ ಅವಘಡ ಸಂಭವಿಸುವುದಕ್ಕಿಂತ ಮೊದಲು ಸಂಬಂಧಪಟ್ಟ ವಿದ್ಯುತ್ ಇಲಾಖೆ ಹಾಗೂ ಅರಣ್ಯ ಇಲಾಖೆಯವರು ಇತ್ತ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಮಲೆನಾಡು ರಕ್ಷಣಾ ಸೇನೆಯ ಸಕಲೇಶಪುರ ತಾ.ಅಧ್ಯಕ್ಷರಾದ ಮಂಜುದೇವ್ ಹುಲ್ಲಹಳ್ಳಿ,ಉಪಾಧ್ಯಕ್ಷರಾದ ರುತೇಶ್ ಹಾಗೂ ಬಾಗೆ ಘಟಕದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ
previous post
next post
