Blog

ಬಿಜೆಪಿ ಪ್ರತಿಭಟನೆ

ವರದಿ ರಾಣಿ prasanna

ಮುಖ್ಯಮಂತ್ರಿ   ಸಿದ್ದರಾಮಯ್ಯ ರಾಜೀನಾಮೆಗೆ ಶಾಸಕರಾದ ಸಿಮೆಂಟ್ ಮಂಜು ಒತ್ತಾಯ.

ಸಕಲೇಶಪುರ : ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಭಂಧಿಸಿದಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಹೊರಡಿಸಿದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದರಿಂದ ಮುಖ್ಯ ಮಂತ್ರಿ ರಾಜೀನಾಮೆ ನೀಡುವಂತೆ ಇಂದು ಹಳೆ ಬಸ್ ಸ್ಟ್ಯಾಂಡ್ ನಿಲ್ದಾಣದ ಸಮೀಪ  ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ  ನೆಡೆಸಿದರು .

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಸಿಮೆಂಟ್ ಮಂಜು ”  ತಮ್ಮ ವಿರುದ್ಧ ತನಿಖೆಗೆ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಈಗಲಾದರೂ  ನೈತಿಕತೆಯಿಂದ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.  ಇಲ್ಲವಾದರೆ ಇನ್ನು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ. “ಎಂದರು.

ಈ ಸಂಧರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ವಳಲಹಳ್ಳಿ ಅಶ್ವಥ್,  ಪ್ರಧಾನ ಕಾರ್ಯದರ್ಶಿ ಮಧು ಹಾಗೂ ಸೋಮಶೇಖರ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು.

Related posts

ವರ್ಧಮಾನ ಇಲೆಕ್ಟ್ರಾನಿಕ್ ಸಕಲೇಶಪುರ

Bimba Prakashana

ಎನ್ ಕೋಮಲೇಶ್ ನಿಧನ

Bimba Prakashana

ನಾಗರತ್ನಮ್ಮ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More