Blog

ಹಿರಿಯೂರು ಕೂಡಿಗೆಯಲ್ಲಿ ನೀರಿನ ಯಂತ್ರ ಸಮಸ್ಯೆ

ವಳಲಹಳ್ಳಿ ಗ್ರಾಮಪಂಚಾಯಿತಿ ಹಿರಿಯೂರು ಕೂಡಿಗೆಯಲ್ಲಿ ಕುಡಿಯುವ ನೀರಿನ ಯಂತ್ರ ದುರಸ್ಥಿ ಮಾಡಿಕೊಡುವಂತೆ ಕರವೇ ಮನವಿ.



ಸಕಲೇಶಪುರ ಸಕಲೇಶಪುರ :- ತಾಲ್ಲೂಕು ಹೆತ್ತೂರು ಹೋಬಳಿ ವಳಲಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಿರಿಯೂರು  ಕೂಡಿಗೆಯಲ್ಲಿ  ಕಳೆದ ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಯಂತ್ರ (RO Machine) ಸಂಪೂರ್ಣವಾಗಿ ಕಾರ್ಯನಿರತವಿಲ್ಲದೆ ನಿಂತಿದ್ದು, ಈ ವೃತ್ತದಲ್ಲಿ ಗ್ರಾಮದ ಸಾವಿರಾರು ನಿವಾಸಿಗಳಿಗೆ, ಪ್ರವಾಸಿಗರಿಗೆ, ಕೂಲಿ ಕಾರ್ಮಿಕರಿಗೆ, ಅಂಗಡಿ, ಹೋಟೆಲ್ ವ್ಯಾಪಾರಿಗಳಿಗೆ ಕುಡಿಯುವ ನೀರಿನ ತೀವ್ರ ಅಸೌಕರ್ಯ ಉಂಟಾಗಿದೆ. ಕೂಡಲೆ ಕುಡಿಯುವ ನೀರಿನ ಯಂತ್ರ ದುರಸ್ಥಿ ಮಾಡಿಕೊಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸಕಲೇಶಪುರ ಘಟವತಿಯಿಂದ ವಳಲಹಳ್ಳಿ ಗ್ರಾಮಪಂಚಾಯಿತಿ ಅಭಿರುದ್ದಿ ಅಧಿಕಾರಿ ದರ್ಶನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಘಟಕವು ಈ ಹಿಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ನಿತ್ಯ ಶುದ್ಧ ಕುಡಿಯುವ ನೀರಿನ ಪ್ರಮುಖ ಮೂಲವಾಗಿತ್ತು. ಆದರೆ ಕಳೆದ ಒಂದು ವರ್ಷದಿಂದ  ನಿರ್ಲಕ್ಷದಿಂದ ಗ್ರಾಮಸ್ಥರು ಬೇರೆಯ ಕಡೆಗಳಿಂದ ನೀರು ತರಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಆರೋಗ್ಯ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಗಮನಾರ್ಹ ವಿಷಯವಾಗಿದೆ.ದಯಮಾಡಿ ನಿಮ್ಮ ಇಲಾಖೆ ಅಥವಾ ಸಂಬಂಧಪಟ್ಟ ತಾಂತ್ರಿಕ ಇಲಾಖೆಯ ಮೂಲಕ ತಕ್ಷಣವೇ ಈ ಯಂತ್ರದ ದುರಸ್ತಿ ಹಾಗೂ ನಿರ್ವಹಣೆಗೆ ಕ್ರಮ ಜರುಗಿಸಬೇಕೆಂದು ಕ.ರ.ವೇ ರೈತ ಘಟಕದ ತಾಲ್ಲೂಕು ಅಧ್ಯಕ್ಷರಾದ ವಸಂತ್ ಬೊಮ್ಮನಕೆರೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಾದ ಮೋಹನ್, ಚಂದ್ರಶೇಖರ್, ದಿನೇಶ್, ಮಧುನ ಇದ್ದರು.

Related posts

ಬಿಜೆಪಿ ಪದಾಧಿಕಾರಿಗಳು

Bimba Prakashana

ಬಕ್ರೀದ್ ಕುರ್ಬಾನಿಗೆ ಕೂಡಿಟ್ಟಿದ್ದ ನಂದಿ – ರಕ್ಷಣೆ ಕಾರ್ಯಾಚರಣೆ ಮಾಡುವಾಗ ಮೃತ್ಯು

Bimba Prakashana

ಬೇಲೂರುನಲ್ಲಿ ಉಚಿತ ಆರೋಗ್ಯ ತಪಾಸಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More