ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ – ದೀಪಾವಳಿ ಚಿಕ್ಕಿ ಹಬ್ಬ – 7ನೆಯ ದಿನದ ವಿಶೇಷತೆ.
ಸ್ಥಳ: ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ+ಮಳಿಗೆ,
ಗುಲಗಳಲೆ, ಸಕಲೇಶಪುರ.
ದಿನಾಂಕ: 17-27 ಅಕ್ಟೋಬರ್ 2025.
ವಿಶೇಷ ಆಕರ್ಷಣೆ:
ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಚಿತ ಮದರಂಗಿ (ಮೆಹಂದಿ).
ಎಲ್ಲಾ ಉತ್ಪನ್ನಗಳ ಮೇಲೆ ನೇರ 15% ದರ ಕಡಿತ ಮಾರಾಟ.
*7ನೆಯ ದಿನದ ವಿಶೇಷತೆ:*
*”ಇಷ್ಟು ವೆರೈಟಿ ಚಿಕ್ಕಿನಾ? ” ಗ್ರಾಹಕರ ಅಚ್ಚರಿ*
*ಲೈಫ್ ನಲ್ಲಿ ಫಸ್ಟ್ ಟೈಮ್ ಚಿಕ್ಕಿ ತಯಾರಿಸುವುದನ್ನು ಲೈವ್ ನೋಡ್ತಾ ಇದ್ದೀವಿ*
*ಇನ್ನು ಕೇವಲ 4 ದಿನಗಳು ಮಾತ್ರ*
*7ನೆಯ ದಿನದ ವಿಶೇಷತೆ:*
ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿಯಲ್ಲಿ ಗ್ರಾಹಕರಿಂದ ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆ ” *”ಇಷ್ಟು ವೆರೈಟಿ ಚಿಕ್ಕಿನಾ? “. ಹೌದು, ಮೊದಲ ಬಾರಿ ಭೇಟಿ ಮಾಡಿದ ಪ್ರತಿಯೊಬ್ಬ ಗ್ರಾಹಕರ ಸಾಮಾನ್ಯ ಪ್ರಶ್ನೆ.
40ಕ್ಕೂ ಅಧಿಕ ವಿಧದ ಕಡಲೇ ಮಿಠಾಯಿ ಸಿಗುವುದು ಕೇವಲ ನಮ್ಮ ಸಕಲೇಶಪುರದ ಹಾನ್ ಬಾಳ್ ಚಿಕ್ಕಿ ಯಲ್ಲಿ ಮಾತ್ರ. ಇದು ನಮ್ಮ ದೇಶದಲ್ಲೇ ಪ್ರಥಮ. ಅತೀ ಹೆಚ್ಚು ಪ್ರೋಟೀನ್ ಹೊಂದಿರುವ ಕಡಲೇ ಬೀಜ, ಆರೋಗ್ಯ ವರ್ಧನೆಗೆ ಬೆಲ್ಲ – ಇವೆರಡನ್ನು ಬೆರೆಸಿ ಸಾಂಪ್ರದಾಯಿಕವಾಗಿ ಚಿಕ್ಕಿಯನ್ನು ಈ ಮೊದಲು ತಯಾರಿಸಲಾಗುತ್ತಿತ್ತು.
ಆದರೆ ಮಲ್ಟಿ ನ್ಯಾಷನಲ್ ಕಂಪನಿಗಳ ಅತಿಯಾದ ಜಂಕ್ ಫುಡ್, ಚಾಕೊಲೇಟ್ ಪ್ರಚಾರಗಳಿಗೆ ಮಾರುಹೋದ ಜನರಿಗೆ ಆರೋಗ್ಯಕರ ಸ್ನ್ಯಾಕ್ ಗಳನ್ನ ಮರೆತು ಹೋಗುವಂತಾಯಿತು. ಇನ್ನು, ಮುಂದಿನ ಪೀಳಿಗೆಗಂತೂ ಚಿಕ್ಕಿಗಳು ದುರ್ಲಭವಾಗುವ ಸಂಭವವೇ ಹೆಚ್ಚು. ಇದನ್ನು ಅರಿತ ಹಾನ್ ಬಾಳ್ ಚಿಕ್ಕಿ 2018 ರಲ್ಲಿ ತನ್ನ ಸಾಂಪ್ರದಾಯಿಕ ಚಿಕ್ಕಿಗಳನ್ನು ಪ್ರಾಯೋಗಿಕವಾಗಿ 5 ಹೊಸ ರುಚಿಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಿತು. ಗ್ರಾಹಕರ ಉತ್ತೇಜನ ಮತ್ತು ಪ್ರೋತ್ಸಾಹದ ಸಲುವಾಗಿ ಇಂದು 40 ಕ್ಕೂ ಅಧಿಕ ಕಡಲೇ ಚಿಕ್ಕಿಗಳನ್ನು ತಯಾರಿಸುತ್ತದೆ. ನಮ್ಮೂರ ಸ್ಪೆಷಲ್ ಕಾಫಿ ಚಿಕ್ಕಿ, ಮಿತವಾದ ಖಾರದ ಪೆಪ್ಪರ್ ಚಿಕ್ಕಿ, ಶುಂಠಿ ಚಿಕ್ಕಿ, ಹಲಸಿನ ಚಿಕ್ಕಿ, ಕಿತ್ತಳೆ ಚಿಕ್ಕಿ ಇತ್ಯಾದಿ 40ಕ್ಕೂ ಅಧಿಕ ಚಿಕ್ಕಿಗಳು ಲಭ್ಯವಿದ್ದರೂ, ಸೀಸನ್ ಗೆ ಅನುಗುಣವಾಗಿ ಲಭ್ಯವಿರುವಂತೆ ಕನಿಷ್ಠ 20 ವಿಧಗಳು ಸದಾಕಾಲ ಲಭ್ಯವಿರುತ್ತದೆ.
ಸ್ಯಾಂಪಲ್ ಕೌಂಟರ್ ನಲ್ಲಿ ಟೇಸ್ಟ್ ನೋಡಿ ತಮಗೆ ಇಷ್ಟವಾದ ಕಡಲೇ ಚಿಕ್ಕಿ ಗಳನ್ನು ಸಕಲೇಶಪುರದ ಗುಲಗಳಲೆಯ ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿಯಲ್ಲಿ ಕೊಳ್ಳಬಹುದು.





