Blog

ಹಾನು ಬಾಳು ಹೆಸರನ್ನು ವಿಶ್ವ ಮಾನ್ಯವಾಗಿಸಿದ ಹಾನು ಬಾಳು ಚಿಕ್ಕಿ

ಕಳೆದ 7 ದಿನಗಳಿಂದ ಚಿಕ್ಕಿ ಹಬ್ಬವನ್ನು ಎಲ್ಲರ ಜೊತೆಗೂಡಿ ಆಚರಣೆ ಮಾಡಿದ ಸಕಲೇಶಪುರದ ಹಾನು ಬಾಳು ಚಿಕ್ಕಿ ವಿಶ್ವದ ಎಲ್ಲೆಡೆ ಇರುವ ಹಾಸನ ಜಿಲ್ಲೆಯ ಜನರ ಗಮನ ಸೆಳೆದಿದೆ.

ಮಹಿಳೆಯರಿಗೆ ಮೆಹಂದಿ ಹಾಕುವ ಸಾಂಪ್ರದಾಯಿಕ ಶೈಲಿಯ ಕಾರ್ಯವನ್ನು ಒಳಗೊಂಡಂತೆ ಹಲವಾರು ಕಾರ್ಯಕ್ರಮಗಳನ್ನು ಜನರಿಗಾಗಿ ಕಳೆದ 7 ದಿನಗಳಿಂದ ಆಚರಣೆ ಮಾಡುತ್ತಿದೆ ಈ ಸಂಸ್ಥೆ.



ಈ ಸಂಸ್ಥೆಯ ಅತಿಥಿ ದೇವೋಭವ ಎಂಬಂತಹ ವ್ಯವಹಾರ ಶೈಲಿಯು ಈ ಮಳಿಗೆಗೆ ಬಂದ ನೂರಾರು ಮಂದಿಗೆ ಸಂತಸ ತಂದಿದೆ ಎಂದು ತಿಳಿದು ಬಂದಿದೆ.

ಮಲ್ನಾಡ್ ಶಾಡೋದಲ್ಲಿ ಪ್ರಕಟ ಆಗುತ್ತಿರುವ ಈ ಮಳಿಗೆಯ ಚಿಕ್ಕಿ ಮಾಹಿತಿಯನ್ನು ಓದಿದ ಹಲವಾರು ಮಂದಿ ರಾಜ್ಯ, ಹೊರ ರಾಜ್ಯ ಹಾಗೂ ಹೊರ ದೇಶದಲ್ಲಿರುವ ಓದುಗರು ಈ ಸಂದರ್ಭದಲ್ಲಿ ನಮಗೆ ಆ ಮಳಿಗೆಗೆ ಬರಲಾಗಿಲ್ಲ ಎಂಬ ಮಾತುಗಳನ್ನು ಆಡಿದ್ದಾರೆ.



ಹಾನು ಬಾಳು ಎಂಬ ಗ್ರಾಮೀಣ ಪ್ರದೇಶದ ಹೆಸರಲ್ಲಿ ಉದ್ಯಮ ಆರಂಭಿಸಿ ಊರಿನ ಹೆಸರಿನ ಜೊತೆಗೆ ತಾನು ತಯಾರಿ ಮಾಡಿದ ಸ್ವಾದಿಷ್ಟ ಚಿಕ್ಕಿಯನ್ನು ಎಲ್ಲಾ ಕಡೆಗೂ ನೀಡುವ ಜೊತೆಗೆ, ವ್ಯವಹಾರದಲ್ಲೂ ಸೇವೆ ನೀಡುತ್ತಾ ಬಂದಿರುವ ಈ ಹಾನು ಬಾಳು ಚಿಕ್ಕಿ ಸಂಸ್ಥೆ ರಾಜ್ಯದಲ್ಲಿ ಆಹಾರ ಜೊತೆಗೆ ಉದ್ಯಮ ರಂಗದಲ್ಲೂ ಸದ್ದು ಮಾಡುತ್ತಿರುವುದು ಮಾತ್ರ ಸತ್ಯ……

Related posts

ಸಕಲೇಶಪುರ ಗುಲಗಳಲೆ ಬಳಿ ಅಪಘಾತ – ಓರ್ವ ಮೃತ್ಯು

Bimba Prakashana

ಪೊಲೀಸರೆ ಜೀವ ಉಳಿಸಿದರು

Bimba Prakashana

ಆಹಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದ ವೈದ್ಯರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More