Blog

ವನಗೂರು ಗ್ರಾಮ ಸಭೆ



ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವನಗೂರು ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು

ಜ್ಯೋತಿ ಬೆಳಗಿಸುವ ಮೂಲಕ
ನಾಡಗೀತೆ ಮತ್ತು ರೈತ ಗೀತೆಗಳನ್ನು ಎದ್ದು ನಿಂತು ಗೌರವಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಿಸಿಲೆ  ಘಾಟ್  ರಸ್ತೆ ಯಲ್ಲಿ ಮದುವೆಗೆ ಹೊರಟ ಮಿನಿ ಬಸ್ ಪಲ್ಟಿ ಯಾಗಿ ದುರಂತಕ್ಕೀಡಾಗಿ ಮೃತರಾದ ಶಿವರಾಜ್ ರವರಿಗೆ ಒಂದು ನಿಮಿಷಗಳ ಕಾಲ ಮೌನಚರಣೆಯನ್ನು ಮಾಡಿದರು.

ಸುತ್ತಮುತ್ತಲ ಹಳ್ಳಿಗಳಿಂದ ಬಂದ ಸಾರ್ವಜನಿಕರು ದಿನನಿತ್ಯದ ಎಲ್ಲಾ ಕೆಲಸಗಳನ್ನು ಬಿಟ್ಟು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಅಧಿಕಾರಿಗಳು ಬರುತ್ತಾರೆ  ನಮ್ಮ ಹಳ್ಳಿಗಳಲ್ಲಿ ಆಗುತ್ತಿರುವ ಕೆಲವು ತೊಂದರೆಗಳ ಬಗ್ಗೆ ಅಧಿಕಾರಿಗಳಲ್ಲೇ ತಿಳಿಸಬಹುದು ಎಂಬ ಆಶಯದೊಂದಿಗೆ
ಬಂದ ಸಾರ್ವಜನಿಕರಿಗೆ  ಅಧಿಕಾರಿಗಳು ಬರದೇ ಇದ್ದಾಗ ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

ವನಗೂರು ಗ್ರಾಮ ಪಂಚಾಯತಿಯು  ಹೆತ್ತೂರು ಮತ್ತು ಯಸಳೂರು ಹೋಬಳಿಗಳನ್ನು ಹೊಂದಿಕೊಂಡಿದ್ದು
ಪ್ರತಿ  ವರ್ಷ ಗ್ರಾಮ ಸಭೆಗೆ ಸರಿಯಾದ ಅಧಿಕಾರಿಗಳು ಬರದೇ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಲು ಪಂಚಾಯಿತಿ ಆಡಳಿತ ವ್ಯವಸ್ಥೆ  ವಿಫಲವಾಗುತ್ತಿದ್ದಾರೆ  ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು

ಗ್ರಾಮ ಸಭೆಯ ಉದ್ದೇಶವಾದರೂ ಏನು?
ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿತ್ತು?

ಈ ಗ್ರಾಮ ಸಭೆಗೆ ಬಂದ ಅಧಿಕಾರಿಗಳು ಅವರಿಗೆ ತಿಳಿದ ಮಟ್ಟಕ್ಕೆ ಸಾರ್ವಜನಿಕರಿಗೆ ಮಾಹಿತಿ ಒದಗಿಸಿದರು. ಜೊತೆಗೆ ಸಾರ್ವಜನಿಕರ ಸಮಸ್ಯೆಗಳಿಗೆ
ಸಮಲೋಚನೆ  ನಡೆಸಿದರು.

ಕೆ ಇ ಬಿ ಇಲಾಖೆ ಇಂದ ಹೆತ್ತೂರು ಮತ್ತು ಯಶಳೂರಿನ
ಜೆ. ಇ, ರವರು ಅರಣ್ಯ ಇಲಾಖೆಯಿಂದ ಫಾರೆಸ್ಟ್ ಗಾರ್ಡ್ ರವರು ವನಗೂರು ಕೂಡ ರಸ್ತೆ  ಆಸ್ಪತ್ರೆಯ ಸಿಬ್ಬಂದಿ ನರ್ಸ್  ಆಶಾ ರವರು ನೋಡಲ್ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯ ಸಿ ಆರ್ ಪಿ   ಯವರು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪುಷ್ಪ ರವರು
ಮತ್ತು ಎಲ್ಲಾ ಸದಸ್ಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿರವರು ಎಲ್ಲಾ ಸಿಬ್ಬಂದಿ ವರ್ಗ 
ಮತ್ತು ಸಾರ್ವಜನಿಕರು ಈ
ಸಂದರ್ಭದಲ್ಲಿ ಭಾಗವಹಿಸಿದರು.

Related posts

ಮಲೆನಾಡು ರಕ್ಷಣಾ ಸೇನೆಯಿಂದ ಆಂಬುಲೆನ್ಸ್ ಸೇವೆ

Bimba Prakashana

ಜೆಡಿಎಸ್ ಬಲವರ್ಧನೆ – ಸೋಮವಾರ ಪೂರ್ವ ಭಾವಿ ಸಭೆ

Bimba Prakashana

ಚಂಗಡ ಹಳ್ಳಿಯಲ್ಲಿ ಕಾರ್ತೀಕ ಪೂಜಾ ಮಹೋತ್ಸವ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More