Blog

ಚರಂಡಿಯಲ್ಲಿ ನೀರು ನಿಂತು ಹೆಚ್ಚಾದ ವಾಸನೆ

ತಿಂಗಳಗಟ್ಟಲೆ  ಚರಂಡಿ ನೀರು ನಿಂತಲ್ಲಿಯೇ  ನಿಂತು  ಕೆಟ್ಟ ವಾಸನೆಯಿಂದ ಸಾರ್ವಜನಿಕರಿಗೆ ಅನಾನುಕೂಲ. ಪುರಸಭೆ ಅಧಿಕಾರಿಗಳು ಇದರತ್ತ  ಗಮನಹರಿಸಿ :- ಕರವೇ ( ಪ್ರವೀಣ್ ಶೆಟ್ಟಿ ಬಣ )

ಸಕಲೇಶಪುರದ ವಾರ್ಡ್ ನಂಬರ್ 20 ನೇ ಮಲ್ಲಮ್ಮನ ಬೀದಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ನಿಂತಲ್ಲಿಯೆ ನಿಂತು ದುರ್ವಾಸನೆ ಬೀರುತ್ತಿದೆ. ಇದರಿಂದ ಸಾರ್ವಜನಿಕರು ಈ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಸೊಳ್ಳೆಗಳು ಹೆಚ್ಚಾಗುತ್ತಿವೆ.

ಕೂಡಲೇ ಪುರಸಭೆ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಚರಂಡಿಯಲ್ಲಿ ನಿಂತಿರುವ ಕೊಳಚೆ  ನೀರು ಸರಾಗವಾಗಿ ಚಲಿಸುವಂತೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯದರ್ಶಿ ಪುರುಷೋತ್ತಮ್ ಆಗ್ರಹಿಸಿದ್ದಾರೆ.

Related posts

ಕೆ ಹೊಸಕೋಟೆ ಲಯನ್ಸ್ ಕ್ಲಬ್ ನಿಂದ ಅಂಗನವಾಡಿ ಮಕ್ಕಳಿಗೆ ಕೊಡುಗೆ

Bimba Prakashana

ಭತ್ತದ ಬಿತ್ತದ ಬಗ್ಗೆ ಕೃಷಿ ಮಾಹಿತಿ

Bimba Prakashana

ಸಕಲೇಶಪುರದಲ್ಲಿ ಈದ್ ಮಿಲಾದ್ ಆಚರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More