Blog

ಬಾಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ

ಬಾಗೆ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರಮೇಶ್ ಆಯ್ಕೆ

ಸಕಲೇಶಪುರ : ತಾಲೂಕಿನ ಬಾಗೆ ಗ್ರಾಮ ಪಂಚಾಯಿತಿಯಲ್ಲಿ ಉಪಾಧ್ಯಕ್ಷರ ಸ್ಥಾನ ತೆರವಾದ ಕಾರಣ 14/11/2025 ಶುಕ್ರವಾರದಂದು ಚುನಾವಣೆ ನಡೆಯಿತು.

ಚುನಾವಣಾ ಅಧಿಕಾರಿಯಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಗಂಗಾಧರ್ ಅವರ ನೇತತ್ವದಲ್ಲಿ   ಚುನಾವಣೆ ನಡೆಯಿತು.
ಒಪ್ಪಂದದ ಪ್ರಕಾರ ಮಾಜಿ ಉಪಾಧ್ಯಕ್ಷರಾದ ಸತೀಶ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ 12 ಸದಸ್ಯರುಗಳ ಒಪ್ಪಂದದ ಪ್ರಕಾರ ರಮೇಶ್ ಅವರನ್ನು ಅವಿರೋಧವಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ರೇಖಾ ಗೋಪಿನಾಥ್ , ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚಿನ್ನಸ್ವಾಮಿ , ಕಾರ್ಯದರ್ಶಿ ಜಯಪ್ರಕಾಶ್ , ಮಾಜಿ ಅಧ್ಯಕ್ಷರಾದ ರಾಮಕೃಷ್ಣ, ಸದಸ್ಯರುಗಳಾದ ಜೈ ಶಂಕರ್ , ರಾಕೇಶ್ , ಸತೀಶ್, ಚಾರ್ಲ್ಸ್ , ವನಜಾಕ್ಷಿ , ಶ್ರೀನಿವಾಸ್, ಪುಷ್ಪ , ಮೋಹಿನಿ, ಗಿರಿಜಮ್ಮ, ಸವಿತಾ ಜಗದೀಶ್,
ಪಂಚಾಯಿತಿ ಸಿಬ್ಬಂದಿಗಳಾದ ಕರ ವಸೂಲಿಗರಾದ ವೀರಭದ್ರ , ಅವಿನಾಶ್ , ವಿ ಆರ್ ಡಬ್ಲ್ಯೂ ಅರ್ಜುನ್ ಗೌಡ ಹಾಗೂ ಇತರರು ಉಪಸ್ಥಿತರಿದ್ದರು .

Related posts

ಬ್ಯಾಕರವಳ್ಳಿ ಗ್ರಾಮದಲ್ಲಿ ಕುಸಿದು ಬಿದ್ದ ಮನೆ

Bimba Prakashana

ಆಲೂರುನಲ್ಲಿ ಗ್ಯಾಸ್ ಅವ್ಯವಸ್ಥೆ

Bimba Prakashana

ಸಕಲೇಶಪುರದಲ್ಲಿ ಬಾಂಗ್ಲಾ ದೇಶಿಯರನ್ನು ಗಡೀ ಪಾರು ಮಾಡಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More