Blog

ಬಿಳಿತಾಳು ಉದಯ ಕಾಂಗ್ರೆಸ್ ಪಕ್ಷಕ್ಕೆ

ಕುರುಬತ್ತೂರು ಗ್ರಾಮ ಪಂಚಾಯಿತಿಯ ಬಿಜೆಪಿ ಮುಖಂಡರಾದ  ಬಿಳುತಾಳು ಉದಯ್ ರವರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.

ಸಕಲೇಶಪುರ :- ಕಾಂಗ್ರೆಸ್ ಪಕ್ಷದ ನಿಷ್ಠೆ, ಪ್ರಾಮಾಣಿಕತೆ ಅಭಿವೃದ್ಧಿ ಕಾರ್ಯಗಳು ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದಂತ  ಮುರಳಿ ಮೋಹನ್  ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೈರಮುಡಿ ಚಂದ್ರಣ್ಣನವರ ನಾಯಕತ್ವ ಮೆಚ್ಚಿ ಇಂದು ಕುರುಬತ್ತೂರು ಗ್ರಾಮ ಪಂಚಾಯಿತಿಯ ಬಿಜೆಪಿ ಮುಖಂಡರಾದ  ಬಿಳುತಾಳು ಉದಯ್ ರವರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ನೂತನವಾಗಿ ಪಕ್ಷಕ್ಕೆ ಸೇರ್ಪಡೆಯಾದ  ಬಿಳುತಾಳು  ಉದಯ್ ಅವರಿಗೆ  ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಖಂಡರಾದಂತಹ ಬೆಳಿತಾಳು ಕಿರಣ್ ಹಾಗೂ ಶುಕ್ರವಾರ ಸಂತೆ ಮಂಜುನಾಥ್ ರವರ ನೇತೃತ್ವದಲ್ಲಿ   ಪಕ್ಷವನ್ನು ಬಲಪಡಿಸಿ ಕುರುಬತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವಂತೆ ಮುರುಳಿ ಮೋಹನ್ ತಿಳಿಸಿದರು.

ಈ ಸಂದರ್ಭದಲ್ಲಿ  ಕಾಂಗ್ರೆಸ್ ಮುಖಂಡರಾದ ಕೆ.ಪಿ ಕೃಷ್ಣೇಗೌಡ, ಹೆನ್ಲಿ ವಸಂತ್, ಬಿಳುತಾಳು ಆನಂದ್,ನವೀನ್, ಹಡ್ಲಹಳ್ಳಿ ಪ್ರಜ್ವಲ್  ಇದ್ದರು.

Related posts

ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಅವ್ಯವಹಾರ : ವರ್ತಕರ ಸಂಘ ಆಕ್ರೋಶ

Bimba Prakashana

ಸೋಮಪ್ಪ ನಿಧನ

Bimba Prakashana

ಹುಟ್ಟುಹಬ್ಬದ ಶುಭಾಶಯಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More