Blog

ಹಿಂದೂ ಜಾಗರಣ ವೇದಿಕೆಯಿಂದ ಸಕಲೇಶಪುರದಲ್ಲಿ ಪ್ರತಿಭಟನೆ

ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ.

ಸಕಲೇಶಪುರ: ಪಟ್ಟಣದ ಹಳೆ ಬಸ್ ಸ್ಟಾಂಡ್ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಭಯೋತ್ಪಾದಕರ ವಿರುದ್ಧ ಪ್ರತಿಭಟಿಸಿದ ಹಿಂದೂ ಜಾಗರಣ ವೇದಿಕೆ.

ದೆಹಲಿ ಸೇರಿದಂತೆ ದೇಶದ ಬೇರೆ ಬೇರೆ ಕಡೆ ಭಯೋತ್ಪಾದಕರು ನಡೆಯುತ್ತಿರುವ ಬಾಂಬ್ ಬ್ಲಾಸ್ಟ್ ಅನ್ನು ಖಂಡಿಸಿ ತಾಲೂಕು ಹಿಂದೂ ಜಾಗರಣ ವೇದಿಕೆಯ ಸಂಯೋಜಕ ಮಂಜುನಾಥ್ ಸಂಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಂತರ ಮಾತನಾಡಿದ ಮಂಜುನಾಥ್ ಸಂಗಿ ದೇಶದಲ್ಲಿ ಇಂತಹ ಹೀನ ಕೃತ್ಯ ನಡೆಸುತ್ತಿರುವ ಭಯೋತ್ಪಾದಕರ ವಿರುದ್ಧ ಸಮಾಜವು ಜಾಗೃತಗೊಂಡು , ಇವರ ವಿರುದ್ಧ ಆರ್ಥಿಕ ಹಾಗೂ ಸಾಮಾಜಿಕ ಸಮರ ಸಾರಬೇಕು. ಜೀವ ಉಳಿಸುವ ಡಾಕ್ಟರ್ ಗಳೇ ಭಯೋತ್ಪಾದಕರಾದರೆ ದೇಶಕ್ಕೆ ಕಂಟಕ.. ಭಯೋತ್ಪಾದನೆಯ ಕೃತ್ಯದಲ್ಲಿ ತೊಡಗಿರುವ ವ್ಯಕ್ತಿಗಳ ಹಾಗೂ ಅವರ ಸಂಬಂಧಿಕರ ಆಸ್ತಿ, ಪಾಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು..  ದೆಹಲಿಯಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ದೇವರು ಸದ್ಗತಿಯನ್ನು ನೀಡಲಿ ಹಾಗೂ ಅವರ ಕುಟುಂಬದವರ ಜೊತೆ ಇಂದು ಜಾಗಣ ವೇದಿಕೆ ಸದಾ ಇರುತ್ತದೆ ಎಂದು ಪ್ರತಿಭಟನೆಯಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಅಶ್ವಥ್, ಜಿಲ್ಲಾ  ಬಿಜೆಪಿ ವೆಂಕಟಪೂರ್ವ ಕಾರ್ಯಾಧ್ಯಕ್ಷ ಲೋಹಿತ್ ಜಂಬರಡಿ, ಸನಾತನ ಸೇವಾ ಟ್ರಸ್ಟ್ ಅಧ್ಯಕ್ಷ ಬಾಲರಾಜ್, ಹಿಂದೂ ಜಾಗರಣ ವೇದಿಕೆಯ ನಗರ ಸಂಯೋಜಕದ ಜಿಮ್ ಹರೀಶ್ ಹಾಗೂ ತಾಲೂಕು ಸಹ ಸಂಯೋಜಕ ಕರಡಿಗಲ್ ಹರೀಶ್ ಸೇರಿದಂತ  ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಕೆ ಎಸ್ ಆರ್ ಟಿ ಸಿ ಬಸ್ ಅಪಘಾತ

Bimba Prakashana

ಸಕಲೇಶಪುರದಲ್ಲಿ ಜನ ಸ್ಪಂದನ – ಸಚಿವ ಕೃಷ್ಣ ಬೈರೇ ಗೌಡ ಸಕಲೇಶಪುರಕ್ಕೆ

Bimba Prakashana

ಗೆಂಡೆ ಹಳ್ಳಿಗೆ ಶೇ. 100 ಫಲಿತಾಂಶ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More