Blog

ಗೆಂಡೆ ಹಳ್ಳಿಗೆ ಶೇ. 100 ಫಲಿತಾಂಶ

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಗೆಂಡೆಹಳ್ಳಿ 2025 26 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಬಂದಿದೆ.

ಶ್ರೇಯ ಎಂಬ ವಿದ್ಯಾರ್ಥಿನಿ 625ಕ್ಕೆ 592 ಅಂಕ ಪಡೆದು 94.7 ಹಾಗೆ ತೇಜಸ್ವಿನಿ ಎ ಎಸ್ 625 ಕ್ಕೆ 571 ಅಂಕ ಪಡೆದು ಶೇಕಡ 91.36 ಅಂಕದೊಂದಿಗೆ ಅನ್ವಿತಾ 625 ಕ್ಕೆ 563 ಅಂಕದೊಂದಿಗೆ ಶೇಕಡ 90.08 ಅಂಕದೊಂದಿಗೆ ಹಾಗೂ ಶಾಲೆಯ ಒಟ್ಟು ಫಲಿತಾಂಶ ಉತ್ತಮವಾಗಿದ್ದು ಎ ಪ್ಲಸ್ ಮೂರು ಜನ ಎ ಆರು ಜನ ಬಿ ಪ್ಲಸ್ ಆರು ಜನ ಬಿ ಒಬ್ಬರು ಸಿ ಪ್ಲಸ್ ಆರು ಜನ ಪಡೆದುಕೊಂಡಿದ್ದು ಶ್ರೇಯ ಎಂಬ ವಿದ್ಯಾರ್ಥಿನಿ ತಾಲೂಕಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿರುತ್ತಾಳೆ.

ಈ ಒಂದು ಪಲಿತಾಂಶಕ್ಕೆ ಸಹಕರಿಸಿದ ಬೇಲೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದಂತಹ ಶ್ರೀಮತಿ ಭಾಗ್ಯಮ್ಮ ಹಾಗೂ ಶಾಲೆಯ ಮುಖ್ಯೋಪಾಧ್ಯರಾದಂತಹ ಶ್ರೀಯುತ ಕೆಂಚೇಗೌಡ ಎಸ್ ಡಿ ಎಂ ಸಿ ಅಧ್ಯಕ್ಷರಾದ ಧರ್ಮಯ್ಯನವರು ಹಾಗೂ ಶಾಲೆಯ ಎಲ್ಲಾ ಶಿಕ್ಷಕರಿಂದ ಎಸ್ ಡಿ ಎಂ ಸಿ ಸದಸ್ಯರುಗಳು ಊರಿನ ಪ್ರಮುಖರು ಸಲಹೆ ಮತ್ತು ಸಹಕಾರವನ್ನು ನೀಡಿ ಉತ್ತಮವಾದ ಪಲಿತಾಂಶ ಬರಲು ಸಹಕಾರ ಮತ್ತು ಪ್ರೋತ್ಸಾಹ ನೀಡಿರುತ್ತಾರೆ.

  ಈ ಶಾಲೆ ಕ್ರೀಡೆಯಲ್ಲಿ ಸಹ ಉತ್ತಮವಾದ ಸಾಧನೆಯನ್ನು ಮಾಡಿರುತ್ತಾರೆ ಇಲ್ಲಿಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಪ್ರವೇಶ ಮಾಡಿರುತ್ತಾರೆ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ರವೀಂದ್ರ ಕುಮಾರ್ ಜಿಡಿ ಅವರು ಮಕ್ಕಳಿಗೆ ಉತ್ತಮವಾದ ತರಬೇತಿ ನೀಡಿ ರಾಜ್ಯಮಟ್ಟಕ್ಕೆ ಕಳಿಸಿಕೊಟ್ಟಿರುತ್ತಾರೆ ಒಟ್ಟಾರೆ ಹೇಳುವುದಾದರೆ ಮಕ್ಕಳಿಗೆ ಎಲ್ಲಾ ರೀತಿಯಲ್ಲೂ ಉತ್ತಮವಾದ ಬೆಂಬಲ ಸಿಕ್ಕಿದ್ದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಸಹ ಶ್ರಮಿಸುತ್ತಿದ್ದಾರೆ

Related posts

ಬೀದಿ ನಾಯಿಗಳ ಸಂತಾನ ಹರಣ ಕೇಂದ್ರ ನಿರ್ಮಾಣ ಮಾಡದಂತೆ ಆಗ್ರಹ

Bimba Prakashana

ಬೊಬ್ಬನ ಹಳ್ಳಿ ಜಾತಾ ಹಳ್ಳಿ ಜಾತ್ರೆಗೆ ಆಗಮಿಸಿದ ಮಾಜಿ ಸಚಿವರು

Bimba Prakashana

ಬೆಳಗೋಡು ಬಳಿ ಹುಲ್ಲಿನ ಲಾರಿಗೆ ಬೆಂಕಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More