Blog

ಮಾಗೇರಿ ಅಂಗನವಾಡಿ ಸುತ್ತ ಬೆಳೆದ ಹಳ



ಸಕಲೇಶಪುರ ತಾಲೂಕು ಯಶಳೂರು ಹೋಬಳಿ ಯ ಮಾಗೇರಿ ಗ್ರಾಮದಲ್ಲಿ ಇರುವ ಅಂಗನವಾಡಿ ಸುತ್ತ ಹಳ ಬೆಳೆದು ಕಾಡು ಕೊಂಪೆ ಆಗಿದೆ,

ಈ ಬಗ್ಗೆ ಸಿಡಿಪಿಐ  ದಿನೇಶ್ ರವರಿಗೆ  ನವಂಬರ್ 3 ರಂದು ವಿಡೀಯೋ ಮಾಡಿ ಹಾಕಿ  ಕಚೇರಿಗೂ ಭೇಟಿ ಕೊಟ್ಟು ಬಂದಿರುತ್ತೇವೆ. ಆದರೆ ಸಿ ಡಿ ಪಿ ಓ ಅವರು ಯಾವುದೊ ಕಾರ್ಯಕ್ರಮದಲ್ಲಿ ಇರುವುದರಿಂದ ಕಾಲ್ ಮಾಡಿ ಮಾಹಿತಿ ಕೊಟ್ಟೀರುತ್ತೇವೆ  ಆದರೇ ಇಲ್ಲಿಯ ವರಗೆ ಯಾವುದೇ ಪ್ರಯೋಜನ ಆಗಿರುವುದಿಲ್ಲ.

ಕಳೆದ ಎರಡು ವರ್ಷದ ಹಿಂದೆ   ಯಶಳೂರು ಹೋಬಳಿ ಕಲ್ಲೂರು
ಗ್ರಾಮದ  ಅಂಗನವಾಡಿ ಯಲ್ಲಿ ಹಾವು ಕಡಿದು  ಮಗು ಸಾವನಪ್ಪಿರುವ ಘಟನೆ ಕಣ್ಮುಂದೆ ಇದೆ.


ಆದರೂ ಸಿಡಿಪಿಒ ಯಾವುದೇ ಕ್ರಮ ವಹಿಸದೆ ಇರುವುದು ಬೇಸರ ಸಂಗತಿ.
ಜೊತೆಗೆ ಸಿಡಿಪಿಒ ರವರ  ಬೇಜವಾಬ್ದಾರಿತನ
ಜೊತೆಗೆ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಸಾರ್ವಜನಿಕರಿಗೆ  ಎದ್ದು ಕಾಣುತ್ತಿದೆ.
ಅಂಗನವಾಡಿ ಕೇಂದ್ರ ಸುತ್ತ ಕಳೆ ಬೆಳೆದು ಯಾವುದೇ ಜನ ತಿರುಗಾಡುವ ಹಾಗೆ ಇಲ್ಲಾ.
ಶೌಚಾಲಯಕ್ಕೆ ಮಕ್ಕಳು ಹೋಗಲು ಭಯ ಪಡುವ ರೀತಿ ಆಗಿದೆ.

ಇದಕ್ಕೆ ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು 
ಮಕ್ಕಳ ಪೋಷಕರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


🔴ನನಗೆ ಇರುವುದು ಒಬ್ಬಳೆ ಮಗಳು
ಇದು ನನ್ನ ಮನೆಯ ಬೆಳಕು
ಸುಮಾರು 10  ವರ್ಷದ ನಂತರ ಹುಟ್ಟಿದ ಮಗಳು.
ನನ್ನ ಮಗಳನ್ನ ಅಂಗನವಾಡಿಗೆ
ಕಳಿಸುತ್ತೀರುವ ಉದ್ದೇಶ ಯಾವುದೇ  ಪಠ್ಯ ಕ್ರಮಕ್ಕೆ ಅಲ್ಲ?
ನ್ನನ್ನ ಮಗಳಿಗೆ ಸಾಮಾನ್ಯ ಜ್ಞಾನ ಹೇಳಿಕೊಡುವಷ್ಟು ನಮ್ಮ ಮನೆಯಲ್ಲಿ ಸದೃಢ.
ಆದರೇ ನನ್ನ ಮಗಳು ಎಲ್ಲ ಮಕ್ಕಳಾ ಜೊತೆ ಬೆರೆತು ಆಟವಾಡಲಿ  ಎಂದು ಕಲಿಸುತ್ತ ಇದ್ದೇನೆ. ದಯವಿಟ್ಟು ನಮ್ಮ ಮಗಳನ್ನು ಕಳೆದು ಕೊಳ್ಳಲು ಸಾಧ್ಯವಿಲ್ಲ.

ಕಲ್ಲೂರಿನಲ್ಲಿ  ಅಂಗನವಾಡಿ ಕೇಂದ್ರ ದಲ್ಲಿ ಮಗು ಸಾವನಪ್ಪಿ
ತಂದೆ ತಾಯಿ ಮತ್ತು ಕುಟುಂಬಸ್ಥರ
ಕಣ್ಣೀರನ್ನುನಾನು ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಕಣ್ಣಾರೆ ನೋಡಿದ್ದೇನೆ.
ನಾವು ಗ್ರಾಮ ಪಂಚಾಯತಿ ಸದಸ್ಯರು ಮತ್ತು ಅಧ್ಯಕ್ಸರ ಗಮನಕ್ಕೂ ತಂದಿದ್ದೇವೆ ಯಾವುದೇ ಪ್ರಯೋಜನ ಆಗಿಲ್ಲ.

ಮಾನ್ಯ ಶಾಸಕರು ಸಿಮೆಂಟ್ ಮಂಜುರವರು ಕಲ್ಲೂರು ಅಂಗನವಾಡಿ ಕೇಂದ್ರ ದಲ್ಲಿ ಮೃತ ಪಟ್ಟ ಮಗುವಿನ ಬಗ್ಗೆ ಸದನದಲ್ಲಿ ಕೂಡ ಚರ್ಚೆ  ಮಾಡಿದ್ದರು


ನಾಗೇಶ್ ಎಂ ಹೆಚ್ ಮಾಗೇರಿ.
ಪತ್ರಕರ್ತರು ಮತ್ತು ಸಾಮಾಜಿಕ       ಹೋರಾಟಗಾರ.
9482982630.
8762847321.

Related posts

ಸಕಲೇಶಪುರದಲ್ಲಿ ಗಣಪತಿ ವಿಸರ್ಜನೆ

Bimba Prakashana

ಆಲೂರು ಶಿಕ್ಷಕ ಚಂದ್ರ ಕುಮಾರ್ ರಿಗೆ ಪ್ರಶಸ್ತಿ

Bimba Prakashana

ಸರ್ಕಾರಿ ಮಹಿಳಾ ಅಧಿಕಾರಿಗಳಿಗೆ ಬಾಗಿನ ಸಮರ್ಪಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More