ದೇಶದ ವ್ಯವಸ್ಥೆಯನ್ನು ಬಲಗೊಳಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ತರವಾದದ್ದು ಎಂದು ಶಾಸಕ ಕೆಎಂ ಶಿವಲಿಂಗೇಗೌಡರು ಅಭಿಪ್ರಾಯಪಟ್ಟರು.
ಅರಸೀಕೆರೆಯಲ್ಲಿ ನಡೆದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ತಾಲೂಕು ಘಟಕ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರಸೀಕೆರೆ ತಾಲೂಕಿನಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರಾದ ಸದಸ್ಯರು ಸ್ವಯಂ ಪ್ರೇರಿತವಾಗಿ ಸಮಾಜದ ಸಮಸ್ಯೆಗಳನ್ನ ಪತ್ರಿಕೆಗಳನ್ನ ನಡೆಸುವಲ್ಲಿ ಮುನ್ನಡೆಯುತ್ತಿರುವುದು ಪತ್ರಕರ್ತರು ಸತ್ಯತೆ ಅರಿತು ಬರೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆಂದರು.
ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಕಳೆದ 10 – 15 ವರ್ಷಗಳಿಂದ ಸತತ ಪ್ರಯತ್ನ ಪಡುತ್ತಿದ್ದು ಎತ್ತಿನಹೊಳೆ ಭದ್ರಾ ಮೇಲ್ದಂಡೆ ಯೋಜನೆ ಹೇಮಾವತಿ ಯೋಜನೆ ಗಳ ಮೂಲಕ ತಾಲೂಕಿನ ನೂರಾರು ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಚಾಲನೆ ನೀಡಲಾಗಿದೆ.
ಪ್ರಮುಖ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ 539 ಹಳ್ಳಿಗಳಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ದೇವಾಲಯಗಳು ಸಮುದಾಯ ಭವನಗಳ ನಿರ್ಮಾಣ ಹೀಗೆ 10 ಹಲವು ಕಾರ್ಯಕ್ರಮಗಳ ಮೂಲಕ ನುಡಿದಂತೆ ನಡೆದಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ನಿವೇಶನಗಳನ್ನ ಹಂಚುವ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.
ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು ಮುಖ್ಯಮಂತ್ರಿಗಳಿಂದ ಪೂರಕ ಪ್ರತಿಕ್ರಿಯ ದೊರೆತಿದೆ ಎಂದರು. ಅರಸೀಕೆರೆಯಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದು ಭವನ ನಿರ್ಮಾಣ ಕೈಗೊಳ್ಳಲಾಗುವುದು ಎಂದರು.
ಸುದ್ದಿಗಳ ಅನಗತ್ಯ ವೈಭವ ನಡುವೆ ಸತ್ಯ ಉಸಿರುಗಟ್ಟ ಬಾರದು – ಜಿ ಎಂ. ರಾಜಶೇಖರ್
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಜಿಎಂ ರಾಜಶೇಖರ್ ಮಾತನಾಡಿ ಸಹಸ್ರಾರು ಸಂಖ್ಯೆಯ ಧೀಮಂತ ಪತ್ರಕರ್ತರು ಹಾಕಿ ಕೊಟ್ಟಿರುವ ದಾರಿಯಲ್ಲಿ ರಾಜ್ಯ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ನಡೆಯುತ್ತಾ ಬರುತ್ತಿದೆ 24 ಗಂಟೆಯ ಸುದ್ದಿಯ ಅನಗತ್ಯ ವೈಭವಿಕರಣ ಇವುಗಳ ನಡುವೆ ಸತ್ಯ ಉಸಿರುಗಟ್ಟಿ ಸಹಾಯದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಈಗ ಸಮಾಜ ಹಾಗು ಪತ್ರಕರ್ತರ ಮುಂದೆ ಸವಾಲಾಗಿದೆ.
ದಿನನಿತ್ಯ ಪತ್ರಿಕೆಗಳು ಆಹಾರದಷ್ಟೇ ಮುಖ್ಯವಾಗಿದೆ ಜೀವನದ ಅವಿಭಾಜ್ಯ ಅಂಗವಾಗಿದೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ಕಾನೂನಾತ್ಮಕವಾಗಿ ಸರ್ಕಾರದಲ್ಲಿ ನೊಂದಾಯಿತ ಸಂಸ್ಥೆಯಾಗಿದೆ ಇದರ ಕಾರ್ಯವೈಖರಿ ರಾಜ್ಯ ವ್ಯಾಪಿಯಾಗಿ ವಿಸ್ತರಣೆಯಾಗಿದೆ ರಾಜ್ಯ ಸಂಘವು ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ಸಚಿವರಾದ ಈಶ್ವರ್ ಕಂಡ್ರೆ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯುಷ ಕಾನಂ ಮುಖ್ಯಮಂತ್ರಿ, ಮಾಧ್ಯಮ ಸಲಹೆಗಾರರಾದ ಪ್ರಭಾಕರ್, ಒಳಗೊಂಡು ಮಠಾಧೀಶರು ಗಣ್ಯರ ನೇತೃತ್ವದಲ್ಲಿ ಉದ್ಘಾಟನೆ ಆಯ್ತು ಕಳೆದ ಒಂದು ವರ್ಷದಲ್ಲಿ ರಾಜ್ಯಾದ್ಯಂತ ಸುಮಾರು 3000 ಪತ್ರಕರ್ತಗಳನ್ನು ಒಳಗೊಂಡ ಈ ಸಂಸ್ಥೆಯು ಈಗಾಗಲೇ ನೇತ್ರದಾನ ಸಸಿ ನೆಡುವ ಕಾರ್ಯಕ್ರಮ ಪತ್ರಕರ್ತರಿಗೆ ಆರೋಗ್ಯ ಭದ್ರತೆ ವಿಮಾ ಸೌಲಭ್ಯ ಕ್ಷೇಮ ನಿಧಿ ಸ್ಥಾಪನೆ ಹೀಗೆ 10 ಹಲವು ಕಾರ್ಯಕ್ರಮಗಳನ್ನ ಮಾಡುತ್ತಾ ಮುಂದೆ ಸಾಗುತ್ತಿದೆ ಇಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಘಟಕ ಉದ್ಘಾಟನೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ಅರಸೀಕೆರೆಕ ತಾಲೂಕ್ ಘಟಕದಲ್ಲಿ ಇಲ್ಲಿನ ಪತ್ರಕರ್ತರಿಗೆ ಪತ್ರಿಕ ಭವನ ನಿವೇಶನ ರಹಿತ ಪತ್ರಕರ್ತರಿಗೆ ನಿವೇಶನ ಹೀಗೆ ಸರ್ಕಾರದ ಸೌಲಭ್ಯಗಳನ್ನ ಒದಗಿಸಿಕೊಡಬೇಕು ಎಂದು ಶಾಸಕರಿಗೆ ತಿಳಿಸಿದರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರವಣಿಗೆ ಮೂಲಕ ಸಮಾಜದ ಸಮಸ್ಯೆಗಳನ್ನ ಎತ್ತಿ ಹಿಡಿಯುವ ಕೆಲಸವನ್ನು ನಮ್ಮ ಪತ್ರಕರ್ತರು ಮಾಡಲಿದ್ದಾರೆ ಎಂದು ಆಶಿಸಿದರು .
ಶಾಸಕರು ಗೃಹ ಮಂಡಳಿಯ ಅಧ್ಯಕ್ಷರಾದ ಸನ್ಮಾನ್ಯ ಕೆಎಮ್ ಶಿವಲಿಂಗೇಗೌಡರು ಮಾತನಾಡಿ ದೇಶದ ವ್ಯವಸ್ಥೆಯನ್ನು ಬಲಗೊಳಿಸುವ ಪ್ರಮುಖ ಅಸ್ತ್ರ ಮಾಧ್ಯಮವಾಗಿದೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪತ್ರಿಕೆಗಳ ಪಾತ್ರ ಅಪಾರ.ಸದ್ಯ ಅರಸೀಕೆರೆ ತಾಲೂಕಿನಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಸ್ವಯಂ ಪ್ರೇರಿತವಾಗಿ ಸಮಾಜದ ಸಮಸ್ಯೆಗಳನ್ನು ಅಭಿವೃದ್ಧಿ ಕಾರ್ಯಗಳನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಶ್ಲಾಘಿಸಿದರು.ಪತ್ರಕರ್ತರು ಸಮಾಜದ ಸತ್ಯಾಸತ್ಯತೆ ಗಳನ್ನು ಅರಿತು ಬರೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು.ಸಂಘದ ಉದ್ದೇಶಗಳು ಸಾಕಾರಾತ್ಮಕವಾಗಿದ್ದು ಸಂಘದ ಬೆಳವಣಿಗೆಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು ಈಗಾಗಲೇ ತಾಲೂಕಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ಆದಷ್ಟು ಬೇಗ ಭವನ ನಿರ್ಮಾಣವಾಗಲಿದೆ ಎಂದರು ಪ್ರತಿಯೊಬ್ಬ ಪತ್ರಕರ್ತ ವೃತ್ತಿ ಗೌರವನ್ನು ಉಳಿಸಿಕೊಂಡು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿದ್ದು ಕಳೆದ 10 -15 ವರ್ಷಗಳ ಇತ್ತೀಚಿಗೆ ತಾಲೂಕಿನಾದ್ಯಂತ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಭದ್ರಾ ಮೇಲ್ದಂಡೆ ಯೋಜನೆ ಹೇಮಾವತಿ ಎತ್ತಿನಹೊಳೆ ಯೋಜನೆ ಮೂಲಕ ಸಾಕಷ್ಟು ಕೆರೆಗಳಿಗೆ ನೀರು ತುಂಬಿಸುವ ಕಾರ್ಯಾ ಕೈಗೊಳ್ಳಲಾಗಿದೆ ತಾಲೂಕಿನಾದ್ಯಂತ ಫ್ಲೋರೈಡ್ ಯುಕ್ತ ನೀರಿನಿಂದ ಆರೋಗ್ಯ ಸಮಸ್ಯೆಗಳು ಎದುರಾಗಿದ್ದು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದರು. ತಾಲೂಕಿನಾದ್ಯಂತ ದೇವಾಲಯಗಳು ಸಮುದಾಯ ಭವನಗಳು ಸೇರಿದಂತೆ 10 ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು, ತನ್ನ ಅಧಿಕಾರಾವಧಿಯಲ್ಲಿ ನುಡಿದಂತೆ ನಡೆದಿದ್ದೇನೆ ಎಂದರು.
ನಗರ ಸಭೆ ಮಾಜಿ ಅಧ್ಯಕ್ಷರಾದ ಗಿರೀಶ್ ಮಾತನಾಡಿ ಪತ್ರಿಕಾ ಮಾಧ್ಯಮ ಅತ್ಯಂತ ಶ್ರೇಷ್ಠವಾಗಿದ್ದು ಉತ್ತಮ ಸಮಾಜ ನಿರ್ಮಿಸುವಲ್ಲಿ ಅವುಗಳ ಪಾತ್ರ ಮಹತ್ತರವಾಗಿದೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಸಮಾಜಮುಖಿ ಕಾರ್ಯಗಳು ಅತ್ಯಂತ ಸಂಘದ ಬೆಳವಣಿಗೆಗೆ ತಮ್ಮೆಲ್ಲರ ಸಹಕಾರವಿರುತ್ತದೆ ಎಂದರು. ನಗರ ಸಭೆ ನಿಕಟ ಪೂರ್ವ ಅದ್ಯಕ್ಷರದ ಸಮಿವುಲ್ಲಾ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಪತ್ರಿಕೆಗಳು ನೈಜ ಶುದ್ಧಿ ತಿಳಿಸುವಲ್ಲಿ ಹಿಂದೇಟು ಹಾಕುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು ನ್ಯಾಯಯುತವಾಗಿ ಸಮಾಜವನ್ನು ತಿದ್ದುವ ಕಾರ್ಯವಾಗಬೇಕೆಂದರು ಸ್ವಾರ್ಥ ರಹಿತ ರಾಜಕಾರಣವಾದಾಗ ದೇಶದ ಅಭಿವೃದ್ಧಿ ಸಾಧ್ಯ ಈ ಹಿನ್ನೆಲೆಯಲ್ಲಿ ಪತ್ರಿಕೆಗಳು ವಸ್ತುನಿಷ್ಠ ವರದಿ ಮಾಡುವಲ್ಲಿ ಗಮನ ಹರಿಸಬೇಕು ಎಂದರು.
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ವಿಶುಕುಮಾರ್ ಮಾತನಾಡಿ ನಮ್ಮ ಸಂಘದ ಎಲ್ಲಾ ಪತ್ರಕರ್ತರು ವಸ್ತು ನಿಷ್ಠ ವರದಿಗಳನ್ನು ಮಾಡುವ ಮೂಲಕ ಸಮಸ್ಯೆಗಳನ್ನು ಎತ್ತಿ ಹಿಡಿಯುವಲ್ಲಿ ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಜನಪ್ರತಿನಿಧಿಗಳ ಗಮನಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳ ಮೂಲಕ ಸಂಘವು ಯಶಸ್ವಿಯಾಗಿ ಮುನ್ನಡೆಯಲ್ಲಿದೆ ಎಂದರು. ಸಂಘದ ಸದಸ್ಯರಾದ ಕೃಷ್ಣೋಜುರಾವ್ ವಾಸ್ತವ ಕನ್ನಡಿ ಮಾತನಾಡಿದರು ಸಂಚಾಲಕರಾದ ಎಂ ಆರ್ ರವಿ ನಿರೂಪಣೆ ಮಾಡಿದರು. ಸಂಘದ ಕಾರ್ಯದರ್ಶಿಗಳಾದ ರಾಜಾ ಬೋವಿಯವರು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು ಬಂದಂತಹ ಹಿರಿಯ ಕಿರಿಯ ಪತ್ರಕರ್ತರು ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡರು. ವಿಶೇಷವಾಗಿ ಕಾರ್ಯಕ್ರಮದಲ್ಲಿ ಆರೋಗ್ಯ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ಜನ್ನಾವರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರನ್ನ ಗೌರವಿಸಲಾಯಿತು. ಡಿವೈಎಸ್ಪಿ ಬಿ ಆರ್ ಗೋಪಿರವರು ಸಂಘದ ಸದಸ್ಯರಿಗೆ ಆರೋಗ್ಯ ಭದ್ರತಾ ವಿಮೆ ಬಾಂಡುಗಳನ್ನು ವಿತರಿಸಿದರೂ.ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಕಾರ್ಯದರ್ಶಿಗಳಾದ ಮಂಜು ಎಂ ಹೊಸಳ್ಳಿ, ವಸಂತ್ ಕುಮಾರ್. ರಕ್ಷಣಾ ವೇದಿಕೆ ತಾಲ್ಲೂಕ್ ಅಧ್ಯಕ್ಷರದ ಕಿರಣ್ ಕುಮಾರ.ತನ್ವೀರ್ ಕಾನ್.ಡಾ.ಶಿವಕುಮಾರ್.ಸಮಾಜ ಸೇವಕರಾದ ಮುನ್ನಾ. ವಕೀಲರಾದ ಪ್ರವೀಣ್ ಕುಮಾರ್.ನಾಟಿವೈದ್ಯರಾದ್ ಎಂ.ಕೃಷ್ಣಮೂರ್ತಿ. ಕಾರ್ಯಕಾರಿ ಸದಸ್ಯರಾದ ದಿನೇಶ್ ಜೈನ್ ಉಪಾಧ್ಯಕ್ಷರಾದ ಕೃಷ್ಣನ್. ಬೇಲೂರು ಹಾಗೂ ಸಕಲೇಶಪುರ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಕುಮಾರ್, ಸದಸ್ಯರಾದ ಪುರುಷೋತ್ತಮ್ ಸೇರಿದಂತೆ ಅರಸೀಕೆರೆ ತಾಲೂಕ್ ಘಟಕದ ಸರ್ವ ಸದಸ್ಯರು ನಾಗರಿಕರು ಮುಖಂಡರು ಉಪಸ್ಥಿತರಿದ್ದರು.

