ಸಕಲೇಶಪುರ ತಾಲೂಕು ಮಾಧ್ಯಮ ಪತ್ರಕರ್ತರ ಸಂಘದ ವತಿಯಿಂದ 2026ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಸಕಲೇಶಪುರ ಶಾಖೆ ಕಚೇರಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ರಾಜ್ಯಾಧ್ಯಕ್ಷರಾದ ಜಿ.ಎಂ ರಾಜಶೇಖರ್ ರಾಜ್ಯ ಉಪಾಧ್ಯಕ್ಷರಾದ ಟಿಪಿ ಕೃಷ್ಣನ್ ರಾಜ್ಯ ಕಾರ್ಯದರ್ಶಿಗಳಾದ ಮಲ್ನಾಡ್ ಶಾಡೋ ವಸಂತ್ ಕುಮಾರ್ ಮಂಜುನಾಥ್ ರವರ ನೇತೃತ್ವದಲ್ಲಿ ನೆರವೇರಿಸಲಾಯಿತು.
ನಂತರ ರಾಜ್ಯಾಧ್ಯಕ್ಷರು ಮಾತನಾಡಿ
ಗಣರಾಜ್ಯೋತ್ಸವದ ಅಂಗವಾಗಿ ಸಮಸ್ತ ಜನತೆಗೆ ಶುಭಾಶಯ ಕೋರುತ್ತಾ ಪತ್ರಕರ್ತರಾಗಲು ಇಚ್ಚಿಸುವವರು ಅವರಿಗೆ ತರಬೇತಿ ಕಾರ್ಯಗಾರ ನೀಡಿ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಸ್ಟುಡಿಯೋ ಪ್ರಕಾಶ್, ಜಿಲ್ಲಾ ಸಂಚಾಲಕರಾದ ದಿನೇಶ್ ಕುಮಾರ್ ಜೈನ್ ಮತ್ತು ಕಾನೂನು ಸಲಹೆಗಾರರಾದ ಅಡ್ವಕೇಟ್ ಜಗದೀಶ್ ಆಲೂರು ತಾಲೂಕು ಅಧ್ಯಕ್ಷರಾದ ಶಾಂತಕುಮಾರ್ ಬೇಲೂರು ತಾಲೂಕು ಅಧ್ಯಕ್ಷರಾದ ಬಸವರಾಜು ಇತರರು ಭಾಗವಹಿಸಿದ್ದರು.

