Blog

ಬೆಳಗೋಡು ಸರಕಾರಿ ಶಾಲೆಯಲ್ಲಿ ಇಂಗ್ಲಿಷ್ ಫೆಸ್ಟ್

ಬೆಳಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಇಂಗ್ಲಿಷ್ ಫೆಸ್ಟ್ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮ ದಲ್ಲಿ LKG ಯಿಂದ 7 ನೇ ತರಗತಿಯ 150 ಮಕ್ಕಳು ಎಲ್ಲರು ಇಂಗ್ಲಿಷ್ ನಲ್ಲೆ ಭಾಷಣ ಕವನಗಳು ಪದ್ಯಗಳನ್ನು ಹಾಡಿದರು.

ಪುಟಾಣಿ ಮಕ್ಕಳು ಸುಂದವಾದ ವೇಷ ತೊಟ್ಟು ನೃತ್ಯ ಮಾಡಿದರು ಇದೆ ವೇದಿಕೆಯಲ್ಲಿ ಈ ಶಾಲೆಗೆ 10 ಗ್ರೀನ್ ಬೋರ್ಡ್ ಹಾಗೂ ನೋಟ್ ಬುಕ್ ಗಳನ್ನು ಕೊಡುಗೆಯಾಗಿ ಕೊಟ್ಟ ಕಾಳಿಂಗಪ್ಪ ಟ್ರಸ್ಟ್ ನ ಮುಖ್ಯಸ್ಥರಾದ ಹಂಜಳಿಗೆ ಮಂಜುನಾಥ್  ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಇವರ ಜೊತೆಗೆ   ದೊಡ್ಡದಿಣ್ಣೆ ಜಯಪ್ರಕಾಶ್  ಪಾಳ್ಯ ರಘು,  ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭುವನಾಕ್ಷ ಹಾಗೂ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪೋಸ್ಟ್ ಮಂಜುನಾಥ್.ಇವರುಗಳನ್ನು ಸನ್ಮಾನಿಸಲಾಯಿತು.

  ಕಾರ್ಯಕ್ರಮದ ಮುಖ್ಯ ರೂವಾರಿ ರಾಜು  ರವರು ಕಾರ್ಯಕ್ರಮನ್ನು ಆಯೋಜನೆ ಮಾಡಿದ್ದರು ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರು ಕರವೇ ರವೀಶ್. ಹಾಗೂ ಸಮಿತಿಯ ಸದಸ್ಯರು ಹಾಗೂ ಮಕ್ಕಳ ಪೋಷಕರು ಬಾಗವಹಿಸಿ ಮಕ್ಕಳ ಕಲಿಕಾ ಸಾಮರ್ಥ್ಯ ವನ್ನು ಮೆಚ್ಚಿಕೊಂಡು ಮಕ್ಕಳಿಗೆ ಶುಭ ಕೋರಿದರು

Related posts

ರಾಯರ ಕೊಪ್ಪಲು ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ

Bimba Prakashana

ಪಟ್ಲ ಬೆಟ್ಟಕ್ಕೆ ಪ್ರವೇಶ ತಾತ್ಕಾಲಿಕ ನಿಷೇಧ

Bimba Prakashana

ತ್ವರಿತ ಕೆಲಸ ಮಾಡಿ – ಅಧಿಕಾರಿಗಳಿಗೆ ಶಾಸಕರ ಸೂಚನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More