Blog

ಚಂದ್ರುರಿಗೆ ಅಕ್ಕರೆಯ ಬೀಳ್ಕೊಡುಗೆ

.

ಆಲೂರು:ಕಣತೂರು ವ್ಯಾಪ್ತಿಯ ಪಶು ಚಿಕಿತ್ಸಾಲಯದ ಡಿ.ದರ್ಜೆ ನೌಕರರಾಗಿ ಕಾರ್ಯನಿರ್ವಹಿಸಿದ್ದ ಚಂದ್ರು ಅವರ ವಯೋನಿವೃತ್ತಿ ಸಲುವಾಗಿ ಇಂದು ಎಲ್ಲರ ಸಮ್ಮುಖದಲ್ಲಿ ಸನ್ಮಾನ ಮಾಡುವ ಮೂಲಕ ಬಿಳ್ಕೋಡಿಗೆ ನೀಡಿದರು.

ಪ್ರಥಮವಾಗಿ ರೇಷ್ಮೇ ಇಲಾಖೆಯಲ್ಲಿ 1985 ರಿಂದ ಹತ್ತು ವರ್ಷಗಳ ಸೇವೆ ಸಲ್ಲಿಸಿ ನಂತರ 1995 ರಲ್ಲಿ ಪಶು ಆಸ್ಪತ್ರೆ ಕಣತೂರಿನಲ್ಲಿ ಸುಮಾರು ಮೂವತ್ತಮೂರು ವರ್ಷಗಳಲ್ಲಿ ಯಾವುದೇ ಅಡಚಣೆಯಿಲ್ಲದೆ ಕಾರ್ಯನಿರ್ವಹಿಸಿ ಇಂದು ನಿವೃತ್ತಿ ಜೀವನಕ್ಕೆ ಪಾದಾರ್ಪಣೆಯನ್ನು ಮಾಡುತ್ತಿದ್ದಾರೆ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಸುಖ ಶಾಂತಿ ನೆಮ್ಮದಿಯನ್ನ ಭಗವಂತ ಕರುಣಿಸಲಿ ಎಂದು ಸಹಾಯಕ ನಿರ್ದೇಶಕರಾದ ಡಾಕ್ಟರ್ ಸೀತಾರಾಮಯ್ಯ ಅವರು ಆಶೀರ್ವದಿಸಿದರು.

ಡಾಕ್ಟರ್ ಚಂದನ್ ಅವರು ಮಾತನಾಡಿ ಚಂದ್ರು ಅವರು ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದರು ಕೂಡಾ ಸಹೋದರ ಭಾಂದವ್ಯದಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ,ಇದುವರೆಗೂ ಯಾವುದೇ ಒಂದು ಅಹೀತಕರ ಘಟನೆ ಮಾಡಿಲ್ಲ ಯಾರೋಂದಿಗೂ ಅಸಭ್ಯವಾಗಿ ನಡೆದುಕೊಂಡಿಲ್ಲ ಇಂತಹ ಸಿಬ್ಬಂದಿ ಮುಂದೆ ಸಿಗುವುದು ಕಷ್ಟಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿಬ್ಬಂದಿ ವರ್ಗದವರೆಲ್ಲಾ ಚಂದ್ರು ದಂಪತಿಗಳಿಗೆ ಸನ್ಮಾನ ಮಾಡುವ ಮೂಲಕ ಅಕ್ಕರೆಯಿಂದ ಬಿಳ್ಕೊಟ್ಟು ಅಭಿನಂದನೆ ಸಲ್ಲಿಸಿದರು.

ಸಹಾಯಕ ನಿರ್ದೇಶಕರಾದ ಸೀತಾರಾಮಯ್ಯ.ಡಾಕ್ಟರ್ ರವೀಂದ್ರ.ಡಾಕ್ಟರ್ ಚಂದನ್.ಡಾಕ್ಟರ್ ಅನೀಲ್.ಡಾಕ್ಟರ್ ಸೌಭಾಗ್ಯ ಲಕ್ಷ್ಮೀ.ಡಾಕ್ಟರ್ ಪ್ರೀತಮ್.ಡಾಕ್ಟರ್ ಸುನೀಲ್.ನಿರಿಕ್ಷಕರುಗಳಾದ ರಾಘವೇಂದ್ರ.ಮಹೇಂದ್ರ.ತಿಮ್ಮಪ್ಪ.ಶಿವಲಿಂಗ.ಖಜಾನೆ ಇಲಾಖೆ ಮಂಜುನಾಥ್.ಸಿಬ್ಬಂದಿಗಳಾದ ರಂಗಸ್ವಾಮಿ.ಸಂತೋಷ್.ಸೋಮಶೆಟ್ಟಿ.ಸ್ಟೀವನ್.ಮುಂತಾದವರು ಉಪಸ್ಥಿತರಿದ್ದರು.

Related posts

ಸಕಲೇಶಪುರಕ್ಕೆ ನೂತನ ಉಪ ವಿಭಾಗ ಅಧಿಕಾರಿಗಳು

Bimba Prakashana

ಬೀದಿ ಬದಿ ವ್ಯಾಪಾರಿಗಳ ಹಿತ ಕಾಪಾಡಲು ಬದ್ದ – ಶಾಸಕ ಸಿಮೆಂಟ್ ಮಂಜು

Bimba Prakashana

ಮಣಿ ಪುರ ಬಳಿ ಬಸ್ – ಬೈಕ್ ಡಿಕ್ಕಿ – ವ್ಯಕ್ತಿ ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More