Blog

ಅರಸೀಕೆರೆಯಲ್ಲಿ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು

ನಗರದ ನೂತನ ಬಸ್ ನಿಲ್ದಾಣದ ಕಾಮಗಾರಿಗೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಿದ ಶಾಸಕರಾದ ಕೆ ಎಂ ಶಿವಲಿಂಗೇಗೌಡರು

ಅರಸೀಕೆರೆ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ 30 ಕೋಟಿ ರೂ ವೆಚ್ಚದ ಸರ್ಕಾರಿ ಬಸ್ ನಿಲ್ದಾಣಕ್ಕೆ  ಶಾಸ್ತ್ರೋಕ್ತವಾಗಿ  ಶಾಸಕರಾದ ಕೆಎಂ ಶಿವಲಿಂಗೇಗೌಡರು  ಚಾಲನೆ ನೀಡಿದರು.
ಈ ಬಸ್ ನಿಲ್ದಾಣವು ಗ್ರಾಮೀಣ ಹಳ್ಳಿಗಳಿಗೆ ಒಂದು ವಿಭಾಗ ಹೈವೇ ರಸ್ತೆಗೆ ಹಾದು ಹೋಗುವ ಬಸ್ಸುಗಳಿಗೆ ಒಂದು ವಿಭಾಗ ಇತರ ಎರಡು ವಿಭಾಗಗಳು ಮಾಡಿ ಸಾರ್ವಜನಿಕರಿಗೆ ವ್ಯವಸ್ಥೆ ಆಗುವ ರೀತಿ ಅರಸೀಕೆರೆ ನಗರಕ್ಕೆ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಶಿವಲಿಂಗೇಗೌಡರು ಮಾತನಾಡಿ ಅರಸಿಕೆರೆ ತಾಲೂಕಿಗೆ ಕುಡಿಯುವ ನೀರು. ಹೊಸ ಬಸ್ ನಿಲ್ದಾಣ ಇಂಜಿನಿಯರಿಂಗ್ ಕಾಲೇಜ್ ಕ್ರೀಡಾಂಗಣ ಹಳ್ಳಿ ಹಳ್ಳಿಗೂ ನೀರು ಇಂತಹ ಹಲವಾರು ಯೋಜನೆಗಳು ಅರಸೀಕೆರೆಗೆ ತಂದು ಮಾಡುತ್ತಿರುವುದನ್ನು ಜೆಡಿಎಸ್ ಹಾಗೂ ಬಿಜೆಪಿ ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಾನು ವಿಧಾನಸಭೆಯಲ್ಲಿ ಮಾತನಾಡಲು ನಿಂತರೆ ಮಾತನಾಡಲು ಬಿಡುವುದಿಲ್ಲ. ನನ್ನ ಕ್ಷೇತ್ರಕ್ಕೆ ನಾನು ಅಭಿವೃದ್ಧಿ ಮಾಡಲು ಹೋರಾಡುತ್ತಿದ್ದೇನೆ ಹಾಗೂ ನರೇಗಾ ಯೋಜನೆಯಲ್ಲಿ ಮಹಾತ್ಮ ಗಾಂಧಿಜೀ ರವರ ಹೆಸರು ತೆಗೆದಿರುವ ವಿಷಯ ಪ್ರಸ್ತಾಪ ಮಾಡಿದ್ದ ಕಾರಣ ವಿಚಾರವನ್ನು ಬದಲಾಯಿಸಲು ನನ್ನನ್ನು ತೇಜೋವದೆ ಮಾಡಿದ್ದಾರೆ   ಇಂತಹ ಎಲ್ಲಾ ಬೆದರಿಕೆಗೆ ನಾನು ಹೆದರುವವನಲ್ಲ.


ನಾನು ಪಕ್ಷ ಬದಲಾಯಿಸಿದ ಕಾರಣ ದ್ರೋಹ ಮಾಡಿದ್ದೇನೆ ಎಂದು ಹೇಳುತ್ತಾರೆ ನಾನು ಪಕ್ಷ ಬದಲಾಯಿಸಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದೇನೆ ಹೊರತು ಜೆಡಿಎಸ್ ಮುಖಂಡರ ತರ  ಬಿಜೆಪಿಯವರ ಜೊತೆ ಕುಣಿಯುತ್ತಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ಒಂದು ಕರೆ ನೀಡಿದ ಅವರು ನಿಮ್ಮ ಶಾಸಕರಿಗೆ ಸುಳ್ಳು ಆರೋಪಗಳು ಹೇಳಿದರೆ ಕೂಡಲೇ ಅದಕ್ಕೆ ಅವರಿಗೆ ಪ್ರತಿ ಉತ್ತರ ನೀಡಬೇಕು. ಸತ್ಯ ಇದ್ದರೆ ಸಾಬೀತುಪಡಿಸಲಿ ಎಂದು ಸವಾಲ್ ಮಾಡಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಹಲವಾರು ಮುಖಂಡರುಗಳು ಮಾತನಾಡಿ ಶಾಸಕರ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಶಂಸೆ ಪಟ್ಟು ನಿಮ್ಮ ಬೆಂಬಲಕ್ಕೆ ನಾವೆಲ್ಲ ಇದ್ದೀವಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಅರುಣಕುಮಾರ್, ನಗರಸಭೆ ನಿಕಟ ಪೂರ್ವ ಅಧ್ಯಕ್ಷರಾದ ಸಮಿಉಲ್ಲಾ, ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷರಾದ ಧರ್ಮಶೇಖರ್, ಕೆಪಿಸಿಸಿ ಸದಸ್ಯರಾದ ಶಶಿಧರ್, ಅಲ್ಪಸಂಖ್ಯಾತರ ಘಟಕದ ತಾಲೂಕು ಉಪಾಧ್ಯಕ್ಷರು ಗೌಸ್ ಖಾನ್ ನಗರಸಭೆ ನಿಕಟಪೂರ್ವ ಸದಸ್ಯರುಗಳು, ನಾಮ ನಿರ್ದೇಶಿತ ಸದಸ್ಯರು ಗಳು, ಗುತ್ತಿಗೆದಾರರು ಹಾಗೂ  ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇನ್ನಿತರ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಎಂ ಡಿ ನಾಸೀರ್
ಪ್ರಜಾ ಶಕ್ತಿ ಟಿವಿ ಅರಸೀಕೆರೆ

Related posts

ಟಿ ಎ ಪಿ ಸಿ ಎಂ ಮಹಾಸಭೆ

Bimba Prakashana

ಮರಳು ಮಾಫಿಯಾ – ತಹಸೀಲ್ದಾರ್ ಪೊಲೀಸ್ ಜಂಟಿ ದಾಳಿ

Bimba Prakashana

ಆಲೂರುನಲ್ಲಿ ಆರ್ ಎಸ್ ಎಸ್ ಪಥ ಸಂಚಲನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More