ಆಲೂರು ತಾಲೂಕಿನ ಜನತೆಯ ಬಹು ದಶಕಗಳ ಬೇಡಿಕೆಯಾಗಿದ್ದ ವಿದ್ಯುತ್ ವಿತರಣಾ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಆಲೂರು ಸಕಲೇಶಪುರ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಆಲೂರು ತಾಲೂಕಿನಲ್ಲಿ ಪ್ರಸ್ತುತ ಇಡೀ ತಾಲೂಕಿನಲ್ಲಿ ಕೇವಲ ಒಂದು ವಿತರಣಾ ಉಪ ಕೇಂದ್ರವಿದ್ದು ರೈತರು ವಿದ್ಯುತ್ ಸಮಸ್ಯೆ ಅನುಭವಿಸುತ್ತಿದ್ದನ್ನು ನಾನು ಕಣ್ಣಾರೆ ಕಂಡು ಸಚಿವರಾದ ಜಾರ್ಜ್ ಅವರ ಬಳಿ ಹೋಗಿ ಸಮಸ್ಯೆಯ ಹೇಳಿ ಮನವಿ ಪತ್ರವನ್ನು ಸಲ್ಲಿಸಿದ್ದೆ.
ಈ ಪರಿಶ್ರಮದ ಫಲವಾಗಿ ನಮ್ಮ ಆಲೂರು ತಾಲೂಕಿಗೆ ಸುಮಾರು 20 ಕೋಟಿ ವೆಚ್ಚದಲ್ಲಿ ಇಂದು ನೂತನವಾಗಿ ವಿದ್ಯುತ್ ವಿತರಣಾ ಉಪ ಕೇಂದ್ರವನ್ನು ಆಲೂರು ತಾಲೂಕಿನ ದಾನಿ ಹಳ್ಳಿ ಗ್ರಾಮದ ಬಳಿ ಮಂಜೂರು ಮಾಡಿಸಿ ನಮ್ಮ ಭಾಗದ ರೈತರಿಗೆ ಅನುವು ಮಾಡಿಕೊಟ್ಟಿದ್ದೇನೆ.
ರೈತರು ಈ ದೇಶದ ಬೆನ್ನೆಲುಬು. ಇದನ್ನು ಅರಿತು ನಮ್ಮ ಆಲೂರು ತಾಲೂಕಿಗೆ ವಿದ್ಯುತ್ ಉಪ ಕೇಂದ್ರವನ್ನು ಮಾಡಿದ್ದೇವೆ ಎಂದು ಮಾತನಾಡಿದರು. ಅದಲ್ಲದೆ ಮುಂದಿನ ದಿನಗಳಲ್ಲಿ ಪಾಳ್ಯ ಹೋಬಳಿಯಲ್ಲಿರುವ ಕೊಡಿಗೆಹಳ್ಳಿಯಲ್ಲೂ ಕೂಡ ವಿದ್ಯುತ್ ಉಪ ಕೇಂದ್ರಗಳನ್ನು ಮಾಡುತ್ತೇನೆ ಎಂದು ಮಾತನಾಡಿ ನಮ್ಮ ಆಲೂರು ಭಾಗದ ರೈತರೆಲ್ಲರೂ ಉತ್ತಮ ಬೆಳೆ ಬೆಳೆದು ಉತ್ತಮ ಜೀವನ ನಡೆಸುವುದೇ ನಮ್ಮ ಕರ್ತವ್ಯವಾಗಿದೆ. ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಮುಖಂಡ ಸುದರ್ಶನ್ ಕಳೆದ 20 ವರ್ಷಗಳಿಂದ ನಮ್ಮ ಭಾಗದಲ್ಲಿ ರೈತರು ಸಮರ್ಪಕವಾಗಿ ವಿದ್ಯುತ್ ಇಲ್ಲದೆ ತುಂಬಾ ತೊಂದರೆಗೆ ಒಳಗಾಗಿ ರೈತರು ಯಾವುದೇ ಬೆಳೆ ಬೆಳೆಯಲಾರದೆ ವಿದ್ಯುತ್ ಇಲ್ಲದೆ ಪರಿತಪಿಸುತ್ತಿದ್ದರು ಇದನ್ನು ಮನಗಂಡ ಜನಪ್ರಿಯ ಶಾಸಕರು ಕೇವಲ ಮೂರು ವರ್ಷಗಳಲ್ಲಿ ವಿದ್ಯುತ್ ಕೇಂದ್ರದ ಗುದ್ದಲಿ ಪೂಜೆ ನೆರವೇರಿಸಿರುವುದು ನಮ್ಮ ತಾಲೂಕಿನ ಒಂದು ಸೌಭಾಗ್ಯ ಎಂದು ಮಾತನಾಡಿದಲ್ಲದೆ ಅವರಿಗೆ ಸನ್ಮಾನ ಮಾಡಿ ಗೌರವಿಸಿ ಅವರು ಮುಂದಿನ ದಿನಗಳಲ್ಲಿ ಇವರು ಸಚಿವರಾಗಿ ನಮ್ಮ ತಾಲೂಕಿಗೆ ಇನ್ನೂ ಉತ್ತಮವಾದ ಕೆಲಸಗಳನ್ನು ಮಾಡಲಿ ಎಂದು ಮಾತನಾಡಿದರು.
ನಂತರ ಮಾತನಾಡಿದ ಕಾರ್ಯಪಾಲಕ ಇಂಜಿನಿಯರ್ ಆದ ಶಿವಾನಂದ್ ನಮ್ಮಲ್ಲಿ ಕಂದಲಿ ಹಾಗೂ ಮಗ್ಗೆ ಯಿಂದ ಪವರ್ ಸರಬರಾಜು ಆಗುತ್ತಿದ್ದು ಇದರಿಂದ ಪಾಳ್ಯ ಹೋಬಳಿ ಕಸಬಾ ಹೋಬಳಿಗೆ ವಿದ್ಯುತ್
ವ್ಯತ್ಯಯ ವಾಗುತ್ತಿತ್ತು. ಇದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗುತ್ತಿತ್ತು ಈ ಸಮಸ್ಯೆಯನ್ನು ಜನಪ್ರಿಯ ಶಾಸಕರಾದ ಸಿಮೆಂಟ್ ಮಂಜು ಪ್ರಸ್ತಾವನೆಯನ್ನು ಸಲ್ಲಿಸಿದ್ದೇವು ಇದನ್ನು ಮನಗಂಡು ಶಾಸಕರು ವಿದ್ಯುತ್ ಉಪಕರಣ ಕೇಂದ್ರಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುಬ್ರಮಣ್ಯ ಶರ್ಮ. ಇಂಜಿನಿಯರ್ ಗಳಾದ ಶಿವಾನಂದ್, ಕೃಷಿ ಇಲಾಖೆ ಅಧಿಕಾರಿ ರಮೇಶ್, ತಾಲೂಕು ಬಿಜೆಪಿ ಅಧ್ಯಕ್ಷರಾದ ರವಿಪ್ರಕಾಶ್. ಕಾರ್ಯದರ್ಶಿ ಕೃಷ್ಣಮೂರ್ತಿ, ಹಿರಿಯ ಮುಖಂಡರುಗಳಾದ ರಮೇಶ್ ಹಳೆಆಲೂರು. ಪಾಳ್ಯ ಭಾಗದ ಮುಖಂಡರುಗಳಾದ ವಿಜಯ್ ರೈಸ್ ಮಿಲ್, ಬರನ್ ಸುದರ್ಶನ್ ದೇವರಾಜು, ಮುಖಂಡರುಗಳಾದ ದಯಾನಂದ್ ದೊರೆಗೌಡ, ಹರೀಶ್ ಸ್ಥಳೀಯ ಗ್ರಾಮಸ್ಥರು ಅಧಿಕಾರಿಗಳು ಉಪಸ್ಥಿತರಿದ್ದರು.




