ಇಂಜಿನಿಯರಿಂಗ್ ವಿದ್ಯಾರ್ಥಿಗೆ ಉಚಿತ ಲ್ಯಾಪ್ ಟಾಪ್ ಹಾಗೂ ಹೊಲಿಗೆ ಯಂತ್ರಗಳ ವಿತರಣೆ
ಅರಸೀಕೆರೆ ಪ್ರವಾಸಿ ಮಂದಿರದಲ್ಲಿ ಮಾರುತಿನಗರದ ವಾರ್ಡ್ ಸಂಖ್ಯೆ 31 ರ ನಗರಸಭೆ ಸದಸ್ಯರಾದ ಶ್ರೀಮತಿ ಸುಜಾತ ರಮೇಶ್ ಮತ್ತು ಸ್ನೇಹಿತರ ಬಳಗದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ವಾರ್ಡಿನ ವರುಣ್ ನಾಯಕ್ ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗೆ ವೈದ್ಯರಾದ ರಜತ್ ರವರು ಉಚಿತ ಲ್ಯಾಪ್ ಟಾಪ್ ವಿತರಣೆ ಮಾಡಿದರು ಮತ್ತು ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ದಿವ್ಯ , ಸುಧಾ ಮತ್ತು ಶಾರದಮ್ಮ ಈ ಮೂರು ಮಹಿಳೆಯರಿಗೆ ಸೆಲ್ ವರ್ಡ್ ಶಿವಣ್ಣವರು ಉಚಿತ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದ ಮೂಲಕ ವಿತರಣೆ ಮಾಡಿದರು. ಈ ಕಾರ್ಯಕರ್ಮದಲ್ಲಿ ಮಾಜಿ ನಗರಸಭೆ ಸದಸ್ಯರಾದ ಶ್ರೀಮತಿ ಸುಜಾತ, ವೈದ್ಯರಾದ ರಜತ್, ವೇಣಣ್ಣ , ಮಂಜೇಗೌಡರು,ಶಂಕರೇಗೌಡ್ರು,
ರೇಷ್ಮಾ, ರಮೇಶ್, ಕರವೇ ತಾಲೂಕು ಅಧ್ಯಕ್ಷರಾದ ಕಿರಣ್ ಕುಮಾರ್ ನಗರಾಧ್ಯಕ್ಷರಾದ ಸಂತೋಷ್ ಕುಮಾರ್ , ಶಿವಣ್ಣ, ನಯಾಜ್ ಅಹಮದ್, ತುಳಸಿ ಗೌಡ,ಮಂಜುನಾಥ ಹಾಗೂ ಬಳಗದ ಸ್ನೇಹಿತರು ಭಾಗವಹಿಸಿದ್ದರು.
ವರದಿ ಎಂ ಡಿ ನಾಸೀರ್ ಅರಸೀಕೆರೆ.
previous post
next post
