ವರದಿ ನವೀನ್ ಬೈರಾಪುರ
ಆಲೂರು: ತಾಲೂಕಿನ ಪಾಳ್ಯ ಹೋಬಳಿ ತಾಳೂರು ಗ್ರಾಮ ಪಂಚಾಯಿತಿಯ ಕುಪ್ಪೆ ಗ್ರಾಮದಬಳಿ ಸಾರ್ವಜನಿಕರ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ನಿಟ್ಟಿನಲ್ಲಿ ನಿರ್ಮಿಸಿರುವ ನೂತನ ಬಸ್ ತಂಗುದಾಣವನ್ನು ಶಾಸಕ ಸಿಮೆಂಟ್ ಮಂಜು ಶನಿವಾರ ಲೋಕಾರ್ಪಣೆ ಗೊಳಿಸಿದರು.
2024-25 ನೇ ಸಾಲಿನ ಶಾಸಕರಾದ ಸಿಮೆಂಟ್ ಮಂಜುರವರ ಸ್ಥಳೀಯ ಪ್ರಾದೇಶಾಭಿವೃದ್ಧಿ ಯೋಜನೆಯ ಸುಮಾರು 2.50 ಲಕ್ಷ ರೂಗಳ ಅನುದಾನದಲ್ಲಿ ನಿರ್ಮಿಸಿರುವ ತಂಗುದಾಣ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡದರು. ದಶಕದ ಕನಸು ಇಂದು ನನಸಾಗುತ್ತಿದೆ. ಗಾಳಿ-ಮಳೆ, ಬಿಸಿಲಿಗೆ ಪ್ರಯಾಣಿಕರು ರಸ್ತೆ ಬದಿಯಲ್ಲಿ ನಿಂತು ಬಸ್‌ಗಾಗಿ ಕಾಯುವ ಪರಿಸ್ಥಿತಿ ಇತ್ತು. ಈಗ ಇಲ್ಲಿನ ನಿವಾಸಿಗಳ ಬಹುದಿನದ ಬೇಡಿಕೆ ಈಡೇರುತ್ತಿದ್ದು ಸಂತಸ ತಂದಿದೆ. ಈ ಬಸ್ ತಂಗುದಾಣವನ್ನು ಸಾರ್ವಜನಿಕರ ಶಾಲಾ ವಿದ್ಯಾರ್ಥಿಗಳು ಗಾಳಿ, ಮಳೆ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ನಿರ್ಮಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಳೂರು ಗ್ರಾಮ ಪಂಚಾಯಿತಿ ಸದಸ್ಯ ಅಣ್ಣಪ್ಪ, ಸ್ವಾಮಿ, ತಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹರೀಶ್, ಕುಪ್ಪೆ ಗ್ರಾಮಸ್ಥರಾದ ಗೊವಿಂದರಾಜು, ರಂಗಸ್ವಾಮಿ, ಪಾಲಾಕ್ಷ, ಕುಮಾರ್, ಪಾಲಾಕ್ಷ, ರಾಮಯ್ಯ, ಚಂದ್ರು, ದೇವರಾಜು, ತಮ್ಮಯ್ಯ, ಮಂಜೇಶ್, ಗೌಡಯ್ಯ, ರವಿ, ಯೋಗೇಶ್, ಚಿಕ್ಕಕಣಗಾಲು ಹಾಲಿನ ಡೈರಿ ಅಧ್ಯಕ್ಷ ರವಿಪ್ರಕಾಶ್, ತಾಳೂರು ಹಾಲಿನ ಡೈರಿ ಕಾರ್ಯದರ್ಶಿ ಧರ್ಮ, ಬಿಜೆಪಿ ಮುಖಂಡರಾದ ಜಿಕೆ ವೆಂಕಟೇಶ್, ಭದ್ರಪ್ಪ, ಚಿಕ್ಕಕಣಗಾಲು ಗ್ರಾಮದ ಹಿರಿಯ ಮುಖಂಡರಾದ ಲಿಂಗರಾಜು, ಜೋಸೆಫ್ ನಗರದ ಮರಿಯಪ್ಪ, ರಾಯಪ್ಪ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಮೇಶ್, ಆಲೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮೋಹನ್ ರೆಡ್ಡಿ, ಸೇರಿದಂತೆ ಮುಂತಾದವರು ಹಾಜರಿದ್ದರು.
previous post
next post
