Blog

ಹೊಸ ರೈಲು ಮಾರ್ಗ – ಕೇಂದ್ರ ಸಚಿವರಿಗೆ ಮನವಿ

ಆಲೂರು.ಚಿಕ್ಕಮಗಳೂರಿಂದ ಬೇಲೂರು ಮಾರ್ಗವಾಗಿ ಆಲೂರನ್ನು ಸಂಪರ್ಕಿಸುವ,ರೈಲ್ವೆ ಹೊಸ ಮಾರ್ಗಕ್ಕೆ ಹಳಿ ನಿರ್ಮಾಣಕ್ಕಾಗಿ ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದ್ದು,ಇದಕ್ಕಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಹೆಚ್ಚು ಬೆಲೆ ನೀಡಲು ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ತರುವಂತೆ ಒತ್ತಾಯಿಸಿ ತಾಲೂಕು ಹೆಚ್ ಡಿ ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ಸುದರ್ಶನ್ (ಪಾಣಿ ) ನೇತೃತ್ವದಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮ ನಿಮಿತ್ತ ಅರಕಲಗೂಡಿಗೆ ಆಗಮಿಸಿದ್ದ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ರೈತರು, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದ್ದು,
ಈ ಯೋಜನೆಗಾಗಿ ಜಮೀನು ಕಳೆದುಕೊಳ್ಳುತ್ತಿರುವ ತಾಲೂಕಿನ ರೈತರಿಗೆ ಬಿಡಿಗಾಸು ನೀಡಲಾಗುತ್ತಿದೆ.
ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಹೆಚ್ಚು ಹಣ ನೀಡಲಾಗುತ್ತಿದೆ, ಎಂಬುದನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಟ್ಟ ರೈತರು,ತಮ್ಮ ಭೂಮಿಗೆ ಹೆಚ್ಚುವರಿ ಹಣ ಕೊಡಿಸಿ ಕೊಡುವಂತೆ ಅವರನ್ನು ಕೋರಿದರು.

ಮನವಿ ಸ್ವೀಕರಿಸಿ ಮಾತನಾಡಿದ  ಕೇಂದ್ರ ಸಚಿವ ಕುಮಾರಸ್ವಾಮಿ ಮುಂದಿನ ತಿಂಗಳ 18ನೇ ತಾರೀಖಿನಂದು ದೆಹಲಿಗೆ ಆಗಮಿಸುವಂತೆ ತಿಳಿಸಿದ್ದು, ಆ ದಿನ
ರೈಲ್ವೆ ಸಚಿವರನ್ನು ಭೇಟಿ ಮಾಡಿಸಿ ಈ ಸಂಬಂಧವಾಗಿ ಅವರೊಂದಿಗೆ ಸಮಾಲೋಚನೆ ನಡೆಸಿ ರೈತರ ಭೂಮಿಗೆ ಸೂಕ್ತ ಬೆಲೆ ಕೊಡಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಸುದರ್ಶನ್, ರಕ್ಷಿತ್, ಗೋಪಾಲ್,ಪವನ್,ಯೋಗೀಶ್,ಗಿರಿ,ಮಂಜು ಮುಂತಾದವರು ಉಪಸ್ಥಿತರಿದ್ದರು.

Related posts

ಬೇಲೂರು ಇಬ್ಬಿಡು ಗ್ರಾಮದಲ್ಲಿ ಜಾತ್ರಾ ಮಹೋತ್ಸವ

Bimba Prakashana

ಆಲೂರುನಲ್ಲಿ ರೈತ ಆತ್ಮಹತ್ಯೆ

Bimba Prakashana

ಇಂದು ಸಕಲೇಶಪುರದಲ್ಲಿ ಕವಾಯತು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More