Blog

ಬಿಜೆಪಿ ಜಯಭೇರಿ – ಆಲೂರುನಲ್ಲಿ ಬಿಜೆಪಿ ಸಂಭ್ರಮ



ಆಲೂರು: ಪಟ್ಟಣದ ಹೃದಯ ಭಾಗದಲ್ಲಿ ಇಂದು ಮಧ್ಯಾಹ್ನ ಬಿಹಾರ ರಾಜ್ಯದ ಫಲಿತಾಂಶ ಪ್ರಕಟವಾದ ಹಿನ್ನಲೆ ಬಿಜೆಪಿ ಪಕ್ಷದ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.


ನಂತರ ಬಿಜೆಪಿ ಮಂಡಲ ಅಧ್ಯಕ್ಷರಾದ ಉಮಾ ರವಿಪ್ರಕಾಶ್ ಅವರು ಮಾತನಾಡಿ ಬಿಹಾರದ ಪ್ರತಿಯೊಬ್ಬ ಮತದಾರರಿಗೂ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ,ಬಿಹಾರದ ಜನರು ಜಂಗಲ್ ರಾಜ್,ಭ್ರಷ್ಟಾಚಾರ ಮತ್ತು ಅರಾಜಕತೆಯನ್ನು ಬಯಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಆಧಾರದ ಮೇಲೆ ಜನರು ಮತ ಹಾಕಿದ್ದಾರೆ.ಯುವಕರು,ಮಹಿಳೆಯರು,ರೈತರು ಮತ್ತು ಶಾಂತಿಯುತ ಹಾಗೂ ಅಭಿವೃದ್ಧಿ ಹೊಂದಿದ ಬಿಹಾರವನ್ನು ಬಯಸುವ ಎಲ್ಲರಿಗೂ ಈ ಗೆಲುವು ಸಿಕ್ಕಿದೆ ಎಂದು ತಿಳಿಸಿದರು.


ಈ ಸಂಧರ್ಭದಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿಯಾದ ಕೃಷ್ಣಮೂರ್ತಿ.ಮುಖಂಡರಾದ ಗಣೇಶ್ ಭೈರಾಪುರ.ದೊರೆಗೌಡ ಹೊಸೂರು.ನಂಜುಡಪ್ಪ.ಕಿರಣ್.ಲಕ್ಷ್ಮಣ್.ನಾಗರಾಜ್.ಪಟೇಲ.ಲೊಕೇಶ್.ಗಜೇಂದ್ರ.ದೇವರಾಜ್.ಕರಿಯಯ್ಯ.ಶ್ರೀನಿವಾಸ್.ನಿತೀನ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Related posts

ಸಕಲೇಶಪುರದ ಸತ್ತಿಗಾಲ್ ನಲ್ಲಿ ನಾಳೆ ಪ್ರತಿಭಾ ಕಾರಂಜಿ

Bimba Prakashana

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರಸಿದ್ಧಿ ವಿನಾಯಕ ದೇವಸ್ಥಾನದ ಪ್ರತಿಷ್ಠ ವರ್ಧಂತಿ

Bimba Prakashana

ಈ ಬಾರಿ ಕೂಡಾ ಅದ್ದೂರಿ ಸಕಲೇಶ್ವರ ಸ್ವಾಮಿ ರಥೋತ್ಸವ ಹಾಗೂ ಜಾತ್ರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More