Blog

ಸಕಲೇಶಪುರ ಹಿಂದೂ ರುದ್ರ ಭೂಮಿಯಲ್ಲಿ ಸ್ವಚ್ಛತೆ

ಸಕಲೇಶಪುರ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಿದ – ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು.

ಸಕಲೇಶಪುರ – ಹಿಂದೂ ಸಂಪ್ರದಾಯದಲ್ಲಿ ಹುಟ್ಟಿನಷ್ಟೇ ಸಾವಿನ ನಂತರದ ಶವ ಸಂಸ್ಕಾರ ಪ್ರಕ್ರಿಯೆ ಅಷ್ಟೇ ಮಹತ್ವದ್ದು ಹಾಗಾಗಿ ಮುಕ್ತಿಧಾಮ ಸ್ವಚ್ಛತೆಯಿಂದ ಇರಬೇಕು. ಈ ನಿಟ್ಟಿನಲ್ಲಿ ಸೇವಾಭಾವದಿಂದ ಸ್ವಚ್ಛತೆ ಮಾಡಲಾಗಿದೆ ಎಂದು ಹಿಂದೂ ಹಿತರಕ್ಷಣಾ ವೇದಿಕೆಯ ಪದಾಧಿಕಾರಿ ಪ್ರದೀಪ್ ಪೂಜಾರಿ ತಿಳಿಸಿದ್ದಾರೆ.


            ಸಕಲೇಶಪುರ ಹಿಂದೂ ರುದ್ರ ಭೂಮಿಯನ್ನು ಸಂಪೂರ್ಣವಾಗಿ ನವೀಕರಣ ಮಾಡಿ ಶವಸಂಸ್ಕಾರ ಮಾಡುವ ವ್ಯವಸ್ಥೆಯನ್ನು ಸುಗಮ ಮತ್ತು ಅಚ್ಚುಕಟ್ಟಾಗಿ ಮಾಡಿ ಕೊಟ್ಟಿದ್ದ ಲಯನ್ಸ್ ಸಂಸ್ಥೆ ರಾಜ್ಯಪಾಲರಾಗಿದ್ದ ಸಂಜೀತ್ ಶೆಟ್ಟಿ ಅವರು ಸಹ ಸ್ವಚ್ಛತಾ ಕಾರ್ಯದಲ್ಲಿ ಇದ್ದು
ಹುಟ್ಟು ಸಹಜ ಸಾವು ಖಚಿತ ಎಂದು ನಾಳ್ನುಡಿಯಂತೆ ನಮ್ಮ ಬದುಕಲ್ಲಿ ನಮ್ಮ ಸಂಪ್ರದಾಯದಲ್ಲಿ ಶವಸಂಸ್ಕಾರ ಮತ್ತು ಸಂಸ್ಕಾರ ಪಿಂಡಪ್ರಧಾನ ಇವೆಲ್ಲವೂ ಮನುಷ್ಯ ಸತ್ತ ನಂತರ ಅವನಿಗೆ ಏನು ಅರಿವಿಲ್ಲದ ಸಮಯದಲ್ಲು ಅವನ ದೇಹವನ್ನು ಸುಟ್ಟು ಆತ್ಮಕ್ಕೆ ಶಾಂತಿ ಕೊಡುವ ಕಾರ್ಯವನ್ನ ಈ ಪುಣ್ಯ ಸ್ಥಳದಲ್ಲಿ ಮಾಡುತ್ತಾರೆ ಎಂದು ಲಯನ್ಸ್ ಸಂಜೀತ್ ಶೆಟ್ಟಿ ತಿಳಿಸಿದರು.


             ಈ ಸಮಯದಲ್ಲಿ 30’ಕ್ಕೂ ಹೆಚ್ಚು ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗ್ಗೆ 7 ಗಂಟೆಯಿಂದ 12 ಗಂಟೆವರೆಗೂ ನಿರಂತರವಾಗಿ ಸ್ವಚ್ಛತಾ ಕಾರ್ಯ ಮಾಡಿ ಶವ ಸುಡುವ ಜಾಗ ಸಂಪೂರ್ಣ ಅವ್ಯವಸ್ಥೆಯ ವಾಸನೆಯಿಂದ ಕೂಡಿದ್ದು ಅದನ್ನು ಬ್ಲೀಚಿಂಗ್ ಪೌಡರ್ ಫೆನಾಯ್ಲ್ ಹಾಕಿ ಸ್ವಚ್ಛತೆ ಮಾಡಲಾಯಿತು.


                ಶವಸಂಸ್ಕಾರ ಅದ ನಂತರ ಹೇಮಾವತಿ ನದಿಗೆ ಹೋಗಿ ಸ್ನಾನ ಮಾಡಿ ಹೊರಡುವ ಜಾಗ ಬೂದಿ ಹಾಗೂ ತ್ಯಾಜ್ಯದಿಂದ ಮುಚ್ಚಿ ಹೋಗಿದ್ದನ್ನು ತೆರವು ಮಾಡದೇ ಪಿಂಡ ಇಡುವಾಗ ಕಾಗೆ ಬರಲು ಇರುವ ಜಾಗ ಕಾಡು ಮುಚ್ಚಿ ಹೋಗಿದ್ದರು ಸಹ ಅದನ್ನು ಬಿಡಿಸದೆ ಜನರು ತೊಂದರೆ ಅನುಭವಿಸುವಂತಾಗಿದೆ. ಗಮನ ಹರಿಸದ ಸಮಿತಿ ವಿರುದ್ಧ ಜನರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು.
              ಹಿಂದೂ ರುದ್ರಭೂಮಿ ಸಮಿತಿ ಸರಿಯಾಗಿ ವ್ಯವಸ್ಥೆ ಮತ್ತು ಸ್ವಚ್ಛತೆ ಕಾಪಾಡಬೇಕು ದುಃಖದಿಂದ ಬರುವ ಜನರ ಹತ್ತಿರ ಹಣ ತೆಗೆದುಕೊಳ್ಳುವ ಜೊತೆಗೆ ಸೂಕ್ತವಾದ ವ್ಯವಸ್ಥೆ ಮಾಡಿ ಕೊಡಬೇಕೆಂದು ಹಿಂದೂ ಹಿತರಕ್ಷಣಾ ವೇದಿಕೆ ಸಂಚಾಲಕ ಶಿವು ಜಿಪ್ಪಿ ಆಗ್ರಹಿಸಿದ್ದಾರೆ.


              ಸ್ವಚ್ಛತಾ ಕಾರ್ಯದಲ್ಲಿ ಮಂಜುನಾಥ್ ಕಬ್ಬಿನಗದ್ದೆ. ಶೇಖರ್ ಸಿದ್ದಾಪುರ. ಸಂತೋಷ್ ಗೌಡ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಗಿರೀಶ್ ಮಂಜುನಾಥ, ಲಯನ್ಸ್ ಬಸವರಾಜ್, ಹಿಂದೂ ಮುಖಂಡರಾದ
ರಘು ಜೀ. ಯುವಸೇನೆ ಸದಸ್ಯರಾದ ಮೋಕ್ಷಿತ್, ನಿಶಾಂತ್ ಬಾಳೆಗದ್ದೆ, ಹಾಗೂ ದುಷ್ಯಂತ್ ಗೌಡ, ರವಿಗೌಡ, ರಂಜನ್, ರಾಹುಲ್ ಹಿಂದೂ ಹಿತರಕ್ಷಣಾ ವೇದಿಕೆ ಹಾನಬಾಳು ಹೋಬಳಿ ಸಂಯೋಜಕ ರವಿ ಹೆಬ್ಬಸಾಲೆ ಸ್ವಚ್ಛತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Related posts

ಕ್ಯಾಮನ ಹಳ್ಳಿಯಲ್ಲಿ ಸ್ವಚ್ಛತೆ

Bimba Prakashana

ಮದುವೆ ಮುಗಿಸಿ ಬರುತ್ತಿದ್ದವರಿಗೆ ಅಪಘಾತ – 3 ಮೃತ್ಯು

Bimba Prakashana

ಅಭಿನಂದನೆಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More