ಆಲೂರು -29 ಭಾರತೀಯ ಸಂಸ್ಕೃತಿ ಉತ್ಕೃಷ್ಟವಾದುದು. ಬದುಕಿ ಬಾಳುವ ಮನುಷ್ಯನಿಗೆ ಸಂಸ್ಕಾರ ಮತ್ತು ಉತ್ತಮ ವಿಚಾರಗಳ ಚಿಂತನ ಅವಶ್ಯಕತೆವಾಗಿದೆ. ಸಂಸ್ಕಾರ ಮತ್ತು ಸಂಸ್ಕೃತಿ ಪರಿಪಾಲನೆಯಿಂದ ಮಾನವನ ಬಾಳು ಉಜ್ವಲಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಗುರುವಾರ ತಾಲೂಕಿನ ಸಿಂಧುವಳ್ಳಿ ಶ್ರೀ ವೀರಭದ್ರೇಶ್ವರ ನೂತನ ಶಿಲಾ ದೇವಸ್ಥಾನದ ಉದ್ಘಾಟನೆ – ಪ್ರಾಣ ಪ್ರತಿಷ್ಠಾಪನೆ – ಕಳಸಾರೋಹಣ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಹಗಲು ಸೂರ್ಯ ರಾತ್ರಿ ಚಂದ್ರ ಬೆಳಕನ್ನ ನೀಡಬಲ್ಲ. ಆದರೆ ಧರ್ಮ ಸರ್ವಕಾಲಕ್ಕೂ ಸರ್ವಸಮುದಾಯಕ್ಕೂ ಬೆಳಕಿನ ದಾರಿ ತೋರಬಲ್ಲದು. ಧರ್ಮವೆಂದರೆ ಆಡುವ ಮಾತು ಅಲ್ಲ. ಆಡಿದ ಮಾತಿನಂತೆ ನಡೆಯುವುದೇ ನಿಜವಾದ ಧರ್ಮ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವೀರಶೈವ ಧರ್ಮವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಭೂಮಂಡಲದಲ್ಲಿ ಸ್ಥಾಪಿಸಿ ಸಕಲರನ್ನು ಉದ್ದರಿಸಿದ್ದಾರೆ. ಅವರ ತತ್ವ ಸಂದೇಶಗಳು ಮತ್ತು ವಿಚಾರಧಾರೆಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿ ದೀಪ. ಶ್ರೀ ಜಗದ್ಗುರು ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಪೂಜೆ ಗೊಳ್ಳುವ ಶ್ರೀ ವೀರಭದ್ರ ಸ್ವಾಮಿ ಸಿಂಧು ವ ಳ್ಳಿಯಲ್ಲಿ ನೆಲೆಗೊಂಡಿರುವುದು ತಮ್ಮೆಲ್ಲರ ಸೌಭಾಗ್ಯವೇ ಆಗಿದೆ. ಅತ್ಯಂತ ಭವ್ಯವಾಗಿ ಸುಂದರವಾಗಿ ನಿರ್ಮಾಣಗೊಂಡಂತ ಶ್ರೀ ವೀರಭದ್ರೇಶ್ವರ ದೇವಾಲಯ ಭಕ್ತರ ಬಾಳಿಗೆ ಆಶಾಕಿರಣವಾಗಿದೆ. ದುಷ್ಟರ ಸಂಹಾರ ಮತ್ತು ಶಿಷ್ಟರ ಸಂರಕ್ಷಣೆಗಾಗಿ ಅವತರಿಸಿದ ಶಕ್ತಿಯೇ ಶ್ರೀ ವೀರಭದ್ರ ಸ್ವಾಮಿ. ಆತನ ಕೃಪ ಕಾರುಣ್ಯ ಸಕಲರ ಮೇಲು ಅನವರತಕಾಲ ಇರಲಿ ಎಂದು ಶುಭ ಹಾರೈಸಿದರು.
ಪವಿತ್ರ ಧರ್ಮ ಸಮಾರಂಭವನ್ನು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸಿದ್ದೇಶ ನಾಗೇಂದ್ರ ಮತ್ತು ಮಾಜಿ ಸಚಿವ ಎಚ್ ಕೆ ಕುಮಾರಸ್ವಾಮಿ ಸಯುಕ್ತವಾಗಿ ಉದ್ಘಾಟಿಸಿ ಸಿಂಧೂ ಹಳ್ಳಿ ಗ್ರಾಮಸ್ಥರ ಅದ್ಭುತ ಸಾಧನೆಯನ್ನು ಕಂಡು ಹರುಷ ವ್ಯಕ್ತಪಡಿಸಿದರು. ವಾಗ್ಮಿ ಕುಮಾರಿ ಹಾ ರಿಕ ಮಂಜುನಾಥ್ ಮಾತನಾಡಿ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಏನೆಲ್ಲ ಆಧ್ಯಾತ್ಮ ಸಂಪತ್ತು ಅಡಗಿದೆ. ಅದನ್ನು ಅ ರಿಯುವ ಮತ್ತು ಆಚರಣೆಯಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಎಲ್ಲರೂ ಮಾಡಬೇಕಾಗಿದೆ. ವೈಚಾರಿಕತೆ ಮತ್ತು ಆಧುನಿಕತೆ ಹೆಸರಿನಲ್ಲಿ ಸಂಸ್ಕೃತಿ ಸಭ್ಯತೆ ನಾಶವಾಗಬಾರದು. ಪ್ರತಿಯೊಬ್ಬರಲ್ಲಿ ಹಿಂದೂ ಸಂಸ್ಕೃತಿಯ ಆದರ್ಶ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕೆಂದರು.
ನೇತೃತ್ವ ವಹಿಸಿದ ಯಸಳೂರು ತೆಂಕಲಗೂಡು ಮಠದ ಶ್ರೀ ಷ. ಬ್ರ. ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಎಲ್ಲ ಧರ್ಮಗಳಲ್ಲಿ ಮಾನವೀಯ ಆದರ್ಶ ಮೌಲ್ಯಗಳು ಇರುತ್ತವೆ. ವೀರಶೈವ ಧರ್ಮದಲ್ಲಿ ಗಂಡು-ಹೆಣ್ಣು ಮೇಲು ಕೀಳು ಬಡವ ಶ್ರೀಮಂತ ಬೇದ ಭಾವವಿಲ್ಲದೆ ಎಲ್ಲರಿಗೂ ಸಮಾನ ಅವಕಾಶವನ್ನು ಒದಗಿಸಿಕೊಟ್ಟಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರಧಾರೆಗಳು ಅಂದು ಇಂದಿಗಷ್ಟೇ ಅಲ್ಲ ಎಂದೆಂದಿಗೂ ಎಲ್ಲರ ಬದುಕಿಗೆ ಆದರ್ಶ ದಾರಿ ತೋರಿಸಿದ್ದನ್ನು ಮರೆಯುವಂತಿಲ್ಲ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ನವಿಲೇ ಪರಮೇಶ್ವರ ಮಂಜಣ್ಣ ಹರೀಶ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಧನ್ಯ ಶ್ರೀ ಪ್ರಾರ್ಥನೆಯೊಂದಿಗೆ ಭರತನಾಟ್ಯ ಅಭಿನಯಿಸಿದರು. ಶಿಕ್ಷಕ ಶಿವಕುಮಾರ್ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಗ್ರಾಮದ ಹೊರವಲಯದಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಸಾರೋಟ ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು ಆರತಿ ಹಿಡಿದ ಸುಮಂಗಲೆಯರು ವೀರಗಾಸೆಯ ಕಲಾವಿದರು ಉತ್ಸವಕ್ಕೆ ಶೋಭೆ ತಂದಿತು. ಸಮಾರಂಭದ ನಂತರ ಅನ್ನದಾಸೋಹ ಜರುಗಿತು.
previous post
next post
