Blog

ಬೇಲೂರುನಲ್ಲಿ ಮಳಿಗೆಗಳ ಹರಾಜು ಪ್ರಕ್ರಿಯೆ

ಮುಂದಿನ ವಾರದಲ್ಲಿ ತಾಲ್ಲೂಕು ಪಂಚಾಯ್ತಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲಾಗುವುದು :ಇಓ ಸತೀಶ್ ಕುಮಾರ್ ಸ್ಪಷ್ಟನೆ:


ಬೇಲೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ಬರುವ 20 ವಾಣಿಜ್ಯ ಮಳಿಗೆಗಳಿಗೆ ಮುಂದಿನ ವಾರದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಸತೀಶ್ ಕುಮಾರ್ ಹೇಳಿದರು.


  ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತಾಲ್ಲೂಕು ಪಂಚಾಯ್ತಿಗೆ ಸೇರಿದ 20 ವಾಣಿಜ್ಯ ಮಳಿಗೆಗಳಿದ್ದು,ಅವುಗಳ ಅವಧಿ ಮುಗಿದರೂ ಸಹ ಸಮರ್ಪಕವಾಗಿ ಬಾಡಿಗೆ ಕಟ್ಟದ ಕಾರಣಕ್ಕೆ ನೋಟೀಸ್ ನೀಡಿ ಕಳೆದ ಒಂದೂವರೆ ತಿಂಗಳ ಹಿಂದೆ ಮಳಿಗೆಗಳನ್ನು ಖಾಲಿ ಮಾಡಿಸಲಾಗಿತ್ತು.20 ಮಳಿಗೆಗಳ ಪೈಕಿ 4 ಮಳಿಗೆಗಳ ವಿವಾದ ನ್ಯಾಯಾಲಯದಲ್ಲಿದ್ದು ಉಳಿದ 16 ಮಳಿಗೆಗಳನ್ನು ಮುಂದಿನ ವಾರದಲ್ಲಿ ಹರಾಜು ಮಾಡಲಾಗುವುದು.ಉಳಿದ 4 ಮಳಿಗೆಗಳನ್ನು ಶೀಘ್ರವಾಗಿ ಬಗೆಹರಿಸಿ ಬಾಡಿಗೆ ಹರಾಜಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


   16 ಮಳಿಗೆಗಳ ಪೈಕಿ ಚನ್ನೇಗೌಡರ ಬೀದಿಯ 6 ಮಳಿಗೆ,ಸಾಮಾರ್ಥ್ಯ ಸೌಧದ 4 ಮಳಿಗೆ,ತಾಲ್ಲೂಕು ಪಂಚಾಯ್ತಿ ಮುಂಭಾಗದ 1 ಮಳಿಗೆ ಸಾರಿಗೆ ಬಸ್ ನಿಲ್ದಾಣದ ಮುಂಭಾಗದ 4 ಮಳಿಗೆಗಳನ್ನು ಹರಾಜು ಮಾಡಲಾಗಿದ್ದು ಪರಿಶಿಷ್ಟ ಜಾತಿಗೆ 3, ಪರಿಶಿಷ್ಟ ಪಂಗಡಕ್ಕೆ 1 ಅಂಗವಿಕಲರಿಗೆ 1 ಉಳಿದ 11 ಮಳಿಗೆಗಳು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿದ್ದು  ಸರ್ಕಾರದ ಆದೇಶದ ಮೇರೆಗೆ ಈ ಟೆಂಡರ್ ಹರಾಜು ಮಾಡಲಾಗಿದ್ದು,ಬಿಡ್ ದಾರರಿಗೆ ಕೆಲ ಮಾನದಂಢಗಳನ್ನು ಅಳವಡಿಸಲಾಗಿದೆ ಎಂದರು.


   ಮಳಿಗೆಗಳ ಅಳತೆ ಆಧಾರದ ಮೇಲೆ ಪ್ರತಿ ಚ.ಅಡಿಗೆ 100ರೂ ನಂತೆ EMD ಹಣ ಕಟ್ಟಬೇಕಾಗುತ್ತದೆ.ಯಾವುದೆ ಮಳಿಗೆಗೆ ಮೂರು ಜನರ ಮೇಲೆ ಟೆಂಡರ್ ಹಾಕಿರಬೇಕು.ಇಲ್ಲದಿದ್ದಲ್ಲಿ ಮರು ಹರಾಜು ಮಾಡಲಾಗುವುದು ಹೆಚ್ಚು ಮೊತ್ತಕ್ಕೆ ಕೂಗಿದವರ ಹೆಸರು ಬಹಿರಂಗಪಡಿಸದೆ ಕೂಗಿರುವ ಮೊತ್ತ ಮಾತ್ರ ಇ- ಟೆಂಡರ್ ನಲ್ಲಿ ಅಳವಡಿಸಲಾಗಿದೆ.ತಾಲ್ಲೂಕು ಪಂಚಾಯ್ತಿ ಮಳಿಗೆಗಳ ಬಾಡಿಗೆ ಸುಮಾರು 54 ಲಕ್ಷ ಬಾಕಿ ಇತ್ತು.ಆದರೆ ನಾನು ಬಂದ ಮೇಲೆ 16 ಲಕ್ಷದಷ್ಟು ವಸೂಲಿ ಮಾಡಿ ಉಳಿದ 38 ಲಕ್ಷ ಬಾಕಿ ಉಳಿದು ಕೊಂಡಿದೆ.ಕಟ್ಟದೆ ಉಳಿದ ಹಣ ವಸೂಲಿಗೆ ದಾವೆ ಹೂಡಲಾಗಿದೆ.

ಬಾಕಿ ಇರುವ ಹಣ ಕಟ್ಟದೆ ಮಳಿಗೆ ಹರಾಜು ಕೂಗುವಂತಿಲ್ಲ.ಒಂದು ವೇಳೆ ಕೂಗುವುದಾದರೆ ಬಾಕಿ ಇರುವ ಹಣ ಕಟ್ಟಿ ಹರಾಜಿನಲ್ಲಿ ಭಾಗವಹಿಸಬಹುದು ಹರಾಜು ಪ್ರಕ್ರಿಯೆಯಲ್ಲಿ ಯಾವುದೆ ಒತ್ತಡವಿಲ್ಲದೆ ಕೆಲವು ನಿಬಂಧನೆಗಳ ಆಧಾರದ ಮೇಲೆ ನಿಶ್ಪಕ್ಷಪಾತವಾಗಿ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

Related posts

ಹೊಯ್ಸಳ ಕನ್ನಡ ಸೇನೆಯಿಂದ ಬೆಳ ಗೋಡುನಲ್ಲಿ ವಾಹನ ಮೆರವಣಿಗೆ

Bimba Prakashana

ಪ್ರಶಸ್ತಿಗೆ ಅರ್ಜಿ ಆಹ್ವಾನ

Bimba Prakashana

ಪೊಲೀಸ್ ಸಹಕಾರ ಸಂಘದ ಚುನಾವಣೆ – ಪ್ರಥ್ವಿ ಜಯಭೇರಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More