Blog

ಅಂಬುಗ ಗ್ರಾಮದಲ್ಲಿ ಜಾತ್ರೆ

ವರದಿ :ರಂಜಿತ್ ಕುಮಾರ್ ಅಂಬುಗ

ಅಂಬುಗ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಸೌಮ್ಯಕೇಶವ ಸ್ವಾಮಿ ಜಾತ್ರಾ ಮಹೋತ್ಸವ ಮತ್ತು  ಬ್ರಹ್ಮ ರಥೋತ್ಸವ.

ಹಾಸನ : ತಾಲೂಕಿನ ಶಾಂತಿ ಗ್ರಾಮ ಹೋಬಳಿಯ ಅಂಬುಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬುಗ ಗ್ರಾಮದಲ್ಲಿ ಇಂದು ಶ್ರೀ ಸೌಮ್ಯಕೇಶವ ಸ್ವಾಮಿಯವರ ಬ್ರಹ್ಮರಥೋತ್ಸವವು  ಜರುಗಿತು ಗ್ರಾಮದ ಬೀದಿ ಬೀದಿಯಲ್ಲಿ ಸಾವಿರಾರು ಭಕ್ತರ ನಡುವೆ ಅದ್ದೂರಿಯಾಗಿ ನೆರವೇರಿತು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ  ಪ್ರಧಾನ ಅರ್ಚಕರು  ಶ್ರೀ ಸೌಮ್ಯಕೇಶವ ಸ್ವಾಮಿಯವರ ಕಾರ್ಯಕ್ಕೆ ಅತಿ ಹೆಚ್ಚಿನ ರೀತಿಯಲ್ಲಿ ಭಕ್ತರು ಬಂದು ಸೇರುತ್ತಾರೆ ಮತ್ತು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ ಎಂದರು.
12ನೇ ಶತಮಾನದಲ್ಲಿ ಭಗವಾನ್ ರಾಮಾನುಜರು ಇಲ್ಲಿಗೆ ಬಂದು ಶ್ರೀ ಸೌಮ್ಯಕೇಶವ ಸ್ವಾಮಿಯವರನ್ನು ಪ್ರತಿಷ್ಠಾಪನೆ ಮಾಡಿದರು ಎಂಬ ಪ್ರತೀತಿ ಇದೆ ಎಂದರು. ಆದ್ದರಿಂದ ಹೆಚ್ಚಿನ ಸಂಖೆಯಲ್ಲಿ ಜನರು ಬಂದು  ಶ್ರೀ ಸೌಮ್ಯಕೇಶವ ಸ್ವಾಮಿ ಅವರ ಸೇವೆ ಮಾಡುತ್ತಾರೆ ಎಂದರು.ನಂತರ ಊರಿನ ಗ್ರಾಮಸ್ಥರು ಮಾತನಾಡಿ ಪ್ರತಿವರ್ಷವೂ ಇಗೆ ಎಲ್ಲಾ ಗ್ರಾಮಸ್ತರು ಸೇರಿ ಅದ್ದೂರಿಯಾಗಿ ನೆಡೆಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.ನಂತರದಲ್ಲಿ  ದೇವರ ಆಶೀರ್ವಾದ ಪಡೆಯಲು ಬಂದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು..
ಈ ಕಾರ್ಯಕ್ರಮಕ್ಕೆ ಊರಿನ ಗ್ರಾಮಸ್ಥರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜಾತ್ರೆಯನ್ನು ಯಶಸ್ವಿಗೊಳಿಸಿದರು..

Related posts

ವರ್ಧಮಾನ್ ಎಲೆಕ್ಟ್ರಾನಿಕ್ ನಲ್ಲಿ ಆಫರೋ ಆಫರ್

Bimba Prakashana

ಗ್ರಾಮೀಣ ಭಾಗದ ಬಸ್ ಸಮಸ್ಯೆ ಪರಿಹಾರಕ್ಕೆ ಹೆಚ್ ಡಿ ಕುಮಾರ ಸ್ವಾಮಿ ಸ್ಪಂದನೆ

Bimba Prakashana

ಪ್ರತಿಭಾ ಕಾರಂಜಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More