Blog

ಬೇಲೂರುನಲ್ಲಿ ಗ್ಯಾರಂಟಿ ಸಮಿತಿ ಸಭೆ

ಬೇಲೂರು :ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸದ್ಬಳಕೆಯಾಗಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅದ್ಯಕ್ಷ ಜಿ.ಬಿ.ಆನಂದ್ ಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ :

       ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗಳು ಸದ್ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳು ಸಲಹೆ ಸಹಕಾರ ನೀಡಬೇಕು ಎಂದು ಹೇಳಿದರು.


  ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಯುವನಿದಿ,ಗೃಹಲಕ್ಷ್ಮಿಯೋಜನೆ,ಆಹಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅದಿಕಾರಿಗಳಿಂದ ಮಾಹಿತಿ ಪಡೆದು ಚರ್ಚಿಸಲಾಯಿತು.ನ್ಯಾಯಬೆಲೆ ಅಂಗಡಿಗಲ್ಲಿ ಪಡಿತರ ಹಂಚಿಕೆ ಸೇರಿದಂತೆ ಗ್ಯಾರಂಟಿ ಯೋಜನೆಗಳಲ್ಲಿ ಯಾವುದೆ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.


     ತಾಲ್ಲೂಕಿನಲ್ಲಿ ಒಟ್ಟು 54123 ಬಿಪಿಎಲ್ ಕಾರ್ಡ್ ಗಳಿದ್ದು,ಬಿಪಿಎಲ್ 44701,ಅಂತ್ಯೋದಯ 2656 ಕಾರ್ಡ್ ಇದ್ದು ಅರ್ಹ ಫಲಾನುಭವಿಗಳಿಗೆ  ಯಾವುದೆ ನ್ಯಾಯಬೆಲೆ ಅಂಗಡಿಗಳಲ್ಲಿ ದಾಸ್ತಾನು ವಿತರಣೆಯಲ್ಲಿ ವ್ಯತ್ಯಾಸವಾಗಬಾರದು.ನ್ಯಾಯಬೆಲೆ ಅಂಗಡಿಗಳಲ್ಲಿ ವೃದ್ದರಿಗೆ ಹೆಬ್ಬೆಟ್ಟಿನ ಗುರುತು ಬರದಿದ್ದರೂ ಕೂಡ ದಾಸ್ತಾನು ವಿತರಣೆ ಮಾಡಬೇಕು.ಜೊತೆಗೆ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಸಮಸ್ಯೆಯಾಗಬಾರದು.ಯುವನಿಧಿ ಯೋಜನೆ ವಿದ್ಯಾವಂತರಿಗೆ ತಲುಪಬೇಕು.ಯುವನಿಧಿ ವಿಚಾರವಾಗಿ ಸಂಭಂದಪಟ್ಟ ಇಲಾಖೆಯವರು ತಾಲ್ಲೂಕು ಮಟ್ಟದಲ್ಲಿ ಉದ್ಯೋಗ ಮೇಳಗಳನ್ನು ನಡೆಸಬೇಕು.ಮುಂದಿನ ಏಪ್ರಿಲ್ 10 ರಂದು ಬಿಕ್ಕೋಡು ಗ್ರಾಮ ಪಂಚಾಯ್ತಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಮಾಡಲಾಗುವುದು.ಸರ್ಕಾರದ ಸುತ್ತೋಲೆಯಂತೆ ಪ್ರತಿ ತಿಂಗಳಿಗೆ ಎರಡು ಸಭೆ ಮಾಡುವಂತೆ,ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಛೇರಿಯಲ್ಲಿ ಒಂದು ಸಭೆ  ಹಾಗೂ ಗ್ರಾಮ ಪಂಚಾಯ್ತಿ ಕಛೇರಿಗಳಲ್ಲಿ ಒಂದು ಸಭೆ ಮಾಡಿ ಗ್ರಾಮೀಣ ಭಾಗಗಳಿಗೆ ಗ್ಯಾರಂಟಿ ಯೋಜನೆಗಳು ತಲುಪುವ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸಬೇಕು.ಮುಂದಿನ ಏಪ್ರಿಲ್ 10 ರಂದು ಬಿಕ್ಕೋಡು ಗ್ರಾಮ ಪಂಚಾಯ್ತಿಯಲ್ಲಿ ಸಭೆ ಆಯೋಜಿಸಲಾಗಿದ್ದು ಫಲಾನುಭವಿಗಳು ಯೋಜನೆಗಳ ಬಗ್ಗೆ ಸಲಹೆ ಹಾಗೂ ಕುಂದುಕೊರತೆಗಳ ಬಗ್ಗೆ ಚರ್ಚಿಸಬಹುದಾಗಿದೆ ಎಂದರು.


    ಇದೇ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಸದಸ್ಯ ಶರತ್ ಮಾತನಾಡಿ ಹಳೇಬೀಡು ಭಾಗಕ್ಕೆ ಕುಸುಮ ಗ್ಯಾಸ್ ಏಜೆನ್ಸಿಯಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ.

ಸರಿಯಾಗಿ ಸಿಲಿಂಡರ್ ವಿತರಣೆ ಮಾಡುವುದಿಲ್ಲ ಉಢಾಫೆಯಿಂದ ವರ್ತಿಸುತ್ತಾರೆ.ಇಂತಹ ಗ್ಯಾಸ್ ಏಜೆನ್ಸಿಗಳಿಗೆ ನೋಟೀಸ್ ನೀಡಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸತೀಶ್ ಮಾತನಾಡಿ,ತಾಲ್ಲೂಕಿನ ಮಾದಿಹಳ್ಳಿ ಹೋಬಳಿ ಹಗರೆಯಲ್ಲಿ ಬೆಳಿಗ್ಗೆ 8ರಿಂದ 10 ಗಂಟೆವರೆಗೆ ಯಾವ ಬಸ್ ಗಳನ್ನು ನಿಲ್ಲಿಸುವುದಿಲ್ಲ.ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ 9 ಗಂಟೆಗೆ ತರಗತಿಗಳು ಆರಂಭವಾಗುವುದರಿಂದ ಬಸ್ ಗಳ ವ್ಯವಸ್ಥೆ ಮಾಡಬೇಕು.ಕಳೆದ ಕೆಲ ದಿನಗಳ ಹಿಂದೆ ಪ್ರತಿಭಟನೆ ಮಾಡಿದ್ದೆವು.ಒಂದು ವಾರ ನಿಲ್ಲಿಸಿದರು. ಚಾಲಕರು ಪುನಹಃ  ಅದೇ ಚಾಳಿ ಆರಂಬಿಸಿದ್ದಾರೆ ಎಂದರು.


ಸತೀಶ್ ಮಾತನಾಡಿ,ಹಳೇಬೀಡು ಭಾಗದಲ್ಲಿ ವಿದ್ಯುತ್ ಸಮಸ್ಯೆ ಇದ್ದು,ಅಲ್ಲಿನ ಜೆಇ ಚಿಕ್ಕವರದಯ್ಯ ಎಂಬುವರು ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ.ರೈತರು ಬೆಳೆ ಮಾಡಿರುತ್ತಾರೆ.ಭ್ರೋಕರ್ ಗಳು ಫೋನ್ ಮಾಡಿದರೆ ಮಾತನಾಡುತ್ತಾರೆ.ಆದರೆ ರೈತರು ಪೋನ್ ಮಾಡಿದರೆ ಕ್ಯಾರೆ ಎನ್ನುವುದಿಲ್ಲ.ಪೋನ್ ಮಾಡಿದರೆ ಉಢಾಫೆ ಉತ್ತರ ನೀಡುತ್ತಾರೆ ಎಂದರು.ಸದಸ್ಯರ ಮಾತಿಗೆ ಪ್ರತಿಕ್ರಿಯೆ ನೀಡಿದ ಅದ್ಯಕ್ಷ ಆನಂದಮೂರ್ತಿ,ಹಗರೆಯಲ್ಲಿ ಬಸ್ ಖಾಲಿ ಇದ್ದರೂ ಬಸ್ ನಿಲ್ಲಿಸದಿದ್ದರೆ ಅಂತಹ ಬಸ್ ಗಳನ್ನು ಫೋಟೋ ತೆಗೆದು ನನಗೆ ಕಳಿಸಿ ಅಂತಹ ಚಾಲಕರು ನಿರ್ವಾಹಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದರು.
ಹಳೇಬೀಡು ಸಬ್ ಡಿವಿಜನ್ ಆಗಿದೆ ಮುಂದಿನ ದಿನಗಳಲ್ಲಿ ಯಾವ ಸಮಸ್ಯೆ ಇರುವುದಿಲ್ಲ ಮುಂದಿನ ದಿನಗಳಲ್ಲಿ ಯಾವ ಸಮಸ್ಯೆ ಬರುವುದಿಲ್ಲ ಎಂದರು.


    ಸದಸ್ಯ ನಿಶ್ಚಲ್,ಶರತ್ ಮಾತನಾಡಿ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸದುಪಯೋಗವಾಗಬೇಕು.ಯಾವುದೆ ದೂರು ಬಂದರೂ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು         
  ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರಾದ ನಿಶ್ಚಲ್.ಅಶೋಕ್.ಶರತ್.ಇಂದ್ರೇಶ್.ಅಬೀಬ್.ಆಹಾರ ಶಿರಸ್ಥೆದಾರ್ ಗೀತಾಂಜಲಿ.ಪುರುಷೋತ್ತಮ್.ವಿದ್ಯುತ್ ಇಲಾಖೆ ಇಂಜಿನಿಯರ್ ರೇವಣ್ಣ. .ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ಇಂಪಾ. ಆಶಾ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಇದ್ದರು.

Related posts

ಬೇಲೂರುನಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಣೆ

Bimba Prakashana

ಪೊಲೀಸ್ ಠಾಣೆ ಸ್ವಚ್ಛತೆ ಮಾಡುವಂತೆ ಆದೇಶ ನೀಡಿದ ನ್ಯಾಯಾಲಯ

Bimba Prakashana

ಮಾಗೇರಿ ರಸ್ತೆಯಲ್ಲಿ ರಸ್ತೆಗೆ ಮಣ್ಣು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More