Blog

ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ಚಡ್ಡಿ ಹಾಕಿ ಬರಲು ನಿಮಗೆ ಅನುಮತಿ ಕೊಟ್ಟೋರು ಯಾರು

(ಒಂದು ಅವಲೋಕನ)

ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳೆಂದರೆ ಬಹಳಷ್ಟು ಮಂದಿಗೆ ಅದು ನಮ್ಮೆಲ್ಲರ ಧರ್ಮ ಕೇಂದ್ರ, ಶ್ರದ್ದಾ ಕೇಂದ್ರ, ಧಾರ್ಮಿಕತೆಯ ಜೊತೆಗೆ ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸುವ ಆಸ್ತಿಕರ ನೆಲೆವೀಡು ಎಂಬುದು ಮರೆತೇ ಹೋಗಿದೆ.

ದೇವಸ್ಥಾನಕ್ಕೆ ಚಡ್ಡಿ ಹಾಕಿ ಹುಡುಗರು ಬರೋದು, ಜೀನ್ಸ್ ಹಾಕಿ ಯುವತಿಯರು ಬರೋದು ಹೀಗೆ ಮಲೆನಾಡಲ್ಲಿ ನಡೀತಿದೆ.

🔴ಆಧುನಿಕತೆಯ ಸೋಗಿನಲ್ಲಿ ಧರ್ಮ ನಿಂದನೆ 🔴


ಸಕಲೇಶಪುರದ ಬೆಟ್ಟದ ಭೈರವೇಶ್ವರನ ದೇವಸ್ಥಾನದಲ್ಲಿ ನಡೆದ ಹೊಡೆದಾಟದ ಘಟನೆ ಬಳಿಕ ಧರ್ಮವನ್ನು ನಶಿಸುವ ಪ್ರಯತ್ನಕ್ಕೆ ಆಧುನಿಕತೆ ಎಂಬ ಹಣೆ ಪಟ್ಟಿ ಹೆಸರಲ್ಲಿ ವಿದ್ಯಾವಂತರು ಮಾಡ ಹೊರಟಿರುವುದು ಅಧಪತನದ ಸಂಕೇತವಾಗಿದೆ.

ಛಾಯಾಚಿತ್ರಗ್ರಾಹಕರ ಮೇಲೆ ಕೈ ಮಾಡೋದು ತಪ್ಪೇ. ಹೊಡೆದವರ ಮೇಲೆ ಕೇಸು ದಾಖಲು ಮಾಡಿ ಜೈಲಿಗೆ ಕಳುಹಿಸಲಾಗಿದೆ.

ಆದರೆ ಈ ಪ್ರಕರಣ ಆರಂಭ ಆಗಿದ್ದು ಎಲ್ಲಿಂದ ಎಂದು ಅವಲೋಕನ ಮಾಡಿದಾಗ ನೂರಾರು ಪ್ರಶ್ನೆಗಳು ಎದ್ದೇಳುತ್ತವೆ.

ಚಡ್ಡಿ ಹಾಕಿ ಚಪ್ಪಲಿ ಹಾಕಿ ದೇವಸ್ಥಾನಗಳಲ್ಲಿ ಫೋಟೋ ಶೂಟ್ ಮಾಡಲು ಅದೇನು ಹೋಮ್ ಸ್ಟೇ ಯೋ ಅಥವಾ ರೆಸಾರ್ಟೊ. ಇದು ವಿಮರ್ಶೆಯ ವಿಶಯ.

🔴ದೇವಾಲಯಕ್ಕೆ ಮಜಾ ಮಾಡಲು ಬರಬೇಡಿ🔴

ಸಕಲೇಶಪುರಕ್ಕೆ ರಜಾ ದಿನಗಳಲ್ಲಿ ಬರುವ ಬೆಂಗಳೂರುನಂತಹ ದೊಡ್ಡ ಪೇಟೆಯ ಪ್ರವಾಸಿ ಮೂಡ್ ನ ಜನ ಬರೋದು ಮಜಾ ಮಾಡಲಿಕ್ಕಾಗಿ ಮಾತ್ರ. ಅವರಿಗೆ ಧರ್ಮ, ದೇವರು, ಭಕ್ತಿ ಇದರ ಅರಿವೇ ಇರೋಲ್ಲ.

ನಿನ್ನೆ ನಡೆದದ್ದು ಕೂಡಾ ಅದೇ. ಚಡ್ಡಿ ಹಾಕಿ ದೇವಸ್ಥಾನದಲ್ಲಿ ಕೂತು, ಮಲಗಿ ಫೋಟೋ ತೆಗೆದಾಗ ಸ್ಥಳೀಯರ ಧಾರ್ಮಿಕ ಭಾವನೆಗಳು ಕೆರಳಿವೆ.

ಆರಂಭದಲ್ಲಿ ಈ ಬಗ್ಗೆ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ. ಆದರೆ ಮನವಿ ಕೇಳದೆ ಹೋದಾಗ ಮಾರಾ ಮಾರಿ ನಡೆದಿದೆ.

🔴ಎರಡೂ ಕಡೆಯ ವಿಡಿಯೋ ವೈರಲ್🔴

ಮಾರಾ ಮಾರಿ ನಡೆದಾಗ ಆರಂಭದಲ್ಲಿ ಅಲ್ಲಿನ ಸ್ಥಳೀಯರು ಛಾಯಾಚಿತ್ರಗ್ರಾಹಕರಿಗೆ ಹೊಡೆದ ವಿಡಿಯೋಗಳು ಮಾಧ್ಯಮಕ್ಕೆ ತಲುಪಿದೆ. ಎಲ್ಲರೂ ವಿಡಿಯೋ ಪ್ರಸಾರ ಮಾಡಿ ವರದಿ ಮಾಡಿದ್ದಾರೆ.

ಆದರೆ ಇಂದು ಇನ್ನೊಂದು ವಿಡಿಯೋದಲ್ಲಿ ಆ ಛಾಯಾಚಿತ್ರಗ್ರಾಹಕರಿಗೆ ಸ್ಥಳೀಯರು ಮನವಿ ಮಾಡೋ ಬಗೆಗಿನ ಮಾಹಿತಿ ವೈರಲ್ ಆಗಿದೆ.

ಪ್ರತಿ ಒಬ್ಬ ಹಿಂದೂ ಕೂಡಾ ಅವಲೋಕನ ಮಾಡಬೇಕಾದ ಪರಿಸ್ಥಿತಿ ನಿಜವಾಗ್ಲೂ ನಮ್ಮ ಮುಂದಿದೆ.

ದೈಹಿಕ ಹಲ್ಲೆ ಮಾಡೋದು ತಪ್ಪೇ ಇದರಲ್ಲಿ ಎರಡು ಮಾತಿಲ್ಲ. ಆದರೆ ಚಡ್ಡಿ ಹಾಕಿ, ಚಪ್ಪಲಿ ಹಾಕಿ ದೇವಸ್ಥಾನ ಆವರಣದಲ್ಲಿ ಗಂಡು ಹೆಣ್ಣನ್ನು ಮಲಗಿಸಿ ಫೋಟೋ ಶೂಟ್ ಮಾಡುವವರು ಹಿಂದೂ ಧರ್ಮದ ಅವನತಿಗೆ ಹೊರಟಿದ್ದಾರೋ. ಇದು ಸಾವಿರ ಮಂದಿ, ಲಕ್ಷ ಮಂದಿ ಕೇಳೋ ಪ್ರಶ್ನೆ.

🔴ಸಂಸ್ಕೃತಿ ನಾಶ ಮಾಡಬೇಡಿ🔴

ನೀವು ಬೆಂಗಳೂರುನಿಂದ ಗ್ರಾಮೀಣ ಪ್ರದೇಶಕ್ಕೆ ಧರ್ಮ ಸಂಸ್ಕೃತಿ ನಾಶ ಮಾಡಲು ಬರುತ್ತಿದ್ದೀರೋ. ಉತ್ತರ ಬೇಕಿದೆ.

🔴ಆಡಳಿತ ವ್ಯವಸ್ಥೆ ಕ್ರಮ ಕೈ ಗೊಳ್ಳಲಿ🔴

ಪ್ರವಾಸಿಗರು ಹೆಚ್ಚಾಗಿ ದೇವಸ್ಥಾನಗಳಿಗೆ ಬರೋ ಕಡೆ ಧಾರ್ಮಿಕ ಕಟ್ಟಳೆಗಳ ನಾಮ ಫಲಕ ಹಾಗೂ ಅಲ್ಲಿ ಸುವ್ಯವಸ್ಥೆ ಕಾಪಾಡಲು ಆಡಳಿತ ವ್ಯವಸ್ಥೆ ಕ್ರಮ ಕೈ ಗೊಳ್ಳಬೇಕು

Related posts

ಹಾನು ಬಾಳು ಚಿಕ್ಕಿ 6 ನೇ ದಿನದ ವಿಶೇಷ

Bimba Prakashana

ಹೊಸೂರು ಕಳಲೆ ರಸ್ತೆ ಅಭಿವೃದ್ಧಿಗೆ ಆಗ್ರಹ

Bimba Prakashana

ಕಳ್ಳತನವಾಗಿ ಒಂದು ಗಂಟೆಯೊಳಗೆ ಆರೋಪಿಗಳನ್ನು ಬಂಧನ ಮಾಡಿದ ಸಕಲೇಶಪುರ ನಗರ ಪೊಲೀಸರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More