Blog

ಬಾಗೆ ಗ್ರಾಮ ಪಂಚಾಯತ್ ಅವ್ಯವಹಾರ – ಯಾರ ಜೋಬಿಗೆ ಹಾಗೂ ಖಾತೆಗೆ ಎಷ್ಟು

ಬಾಗೆ ಗ್ರಾಮ ಪಂಚಾಯತ್ ನಲ್ಲಿ ಲಕ್ಷಾಂತರ ಮೊತ್ತ ಅವ್ಯವಹಾರ ಆಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದ ಸಕಲೇಶಪುರ ತಾಲೂಕು ಪಂಚಾಯತ್ ನ ಕಾರ್ಯ ನಿರ್ವಹಣಾ ಅಧಿಕಾರಿಗಳು ಆ ಗ್ರಾಮ ಪಂಚಾಯತ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಭಿವೃದ್ಧಿ ಅಧಿಕಾರಿ ಚಿನ್ನ ಸ್ವಾಮಿಯನ್ನು ಅಮಾನತು ಮಾಡುವಂತೆ ಮಾರ್ಚ್ 18 ರಂದು ಜಿಲ್ಲಾ ಪಂಚಾಯತ್ ಗೆ ಪತ್ರ ಬರೆದಿದ್ದರು.

ಆದರೆ ಜಿಲ್ಲಾ ಪಂಚಾಯತವು ಅವರನ್ನು ಅಮಾನತು ಮಾಡದೇ ವರ್ಗಾವಣೆ ಮಾಡಿ ಆದೇಶ ನೀಡಿದೆ.

🔴ಟೆಂಡರ್ ಕರೆಯದೆ ಸಾಮಗ್ರಿ ಖರೀದಿ 🔴



ಬಾಗೆ ಗ್ರಾಮ ಪಂಚಾಯತ್ ಗೆ ಹಲವಾರು ಸಾಮಗ್ರಿಗಳನ್ನು ಖರೀದಿ ಮಾಡುವಾಗಲೂ ಸರಕಾರಿ ಆದೇಶ ಅನ್ವಯ ಟೆಂಡರ್ ಕರೆಯದೆ ಖರೀದಿ ಮಾಡಿ ಅವ್ಯವಹಾರ ಮಾಡಲಾಗಿದೆ ಎಂಬ ವಿಚಾರಕ್ಕೆ ಪುಷ್ಟಿ ಸಿಗುವಂತೆ ಮಾಹಿತಿಗಳು ಲಭ್ಯ ಆಗಿದೆ.

🔴ಯಾರಿಗೆಲ್ಲ ಸಂದಾಯ🔴

ಸ್ಥಳೀಯ ಮಾಹಿತಿ ಪ್ರಕಾರ ಆ ಗ್ರಾಮ ಪಂಚಾಯತ್ ನಲ್ಲಿದ್ದ ಜನ ಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳ ಖಾತೆಗೆ  ಹಾಗೂ ಜೋಬಿಗೆ ಕೂಡಾ ಲಕ್ಷಗಟ್ಟಲೆ ಮೊತ್ತ ಜಮಾ ಆಗಿರುವುದಾಗಿ ತಿಳಿದು ಬಂದಿದೆ.

2 ಅವಧಿಯಲ್ಲಿ ಕೂಡಾ ಈ ಭ್ರಷ್ಟಾಚಾರ ಆಗಿದೆ ಎನ್ನಲಾಗಿದ್ದು ಈ ಬಗ್ಗೆ ಕೂಡಾ ತನಿಖೆ ಆಗಬೇಕಿದೆ.

🔴ಯಾರಿಗೆಲ್ಲ ಎಷ್ಟು – ಶೀಘ್ರದಲ್ಲಿ ಬಹಿರಂಗ🔴



ಅಂತೂ ಕಳೆದ ಸುಮಾರು 10 ವರ್ಷಗಳಿಂದ ಅವ್ಯವಹಾರ ನಡೆಯುತ್ತಿದ್ದರು ಈ ಬಗ್ಗೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಣ ಮೌನ ವಹಿಸಿರುವುದು ಅವ್ಯವಹಾರಕ್ಕೆ ತಮ್ಮ ಪಾಲು ಕೂಡಾ ನೀಡಿದಂತೆ ಇರುವುದು ಕಂಡು ಬಂದಿದೆ.

ಹಣ ಸಂದಾಯ ಆದ ವಿವರ ಶೀಘ್ರದಲ್ಲಿ ಪ್ರಕಟಣೆ ಆಗಲಿದೆ

Related posts

ಮಾಗೇರಿಯಲ್ಲಿ ಕತ್ತಲೆ ಜೀವನ

Bimba Prakashana

ಬೈಕ್ ಅಪಘಾತದಲ್ಲಿ ಮೃತ ಪಟ್ಟ ರಘು – ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಿಮೆಂಟ್ ಮಂಜುನಾಥ್

Bimba Prakashana

ಆಲೂರು ಬಳಿ ರೈಲ್ವೆ ಹಳಿಯಲ್ಲಿ ಮೃತ ವ್ಯಕ್ತಿ ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More