Blog

ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಫೋಟೋ ಶೂಟ್ ನಿಷೇಧ ಮಾಡಿ

ಐತಿಹಾಸಿಕ ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪೋಟೋಶೂಟ್ ನಿಷೇಧಿಸಿ – ಹಿಂದೂ ಹಿತರಕ್ಷಣಾ ವೇದಿಕೆ

ಸಕಲೇಶಪುರ – ಸಕಲೇಶಪುರ ನಗರದ ಕೆಂಪೇಗೌಡ ಪುತ್ತಳಿ ವೃತ್ತದಿಂದ ಜಾತಾ ಮಾಡಿ ಬೆಟ್ಟದ ಭೈರವೇಶ್ವರ ದೇವಾಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೆಟ್ಟದ ಭೈರವೇಶ್ವರ ದೇವಾಸ್ಥಾನದಲ್ಲಿ ಛಾಯಾಗ್ರಹರು ನಡೆಸುವ ಪ್ರೀ ವೆಡ್ಡಿಂಗ್ ಪೋಟೋಶೂಟ್ ನಿಷೇಧಿಸಿ ವಸ್ತ್ರ ಸಂಹಿತೆ ಜಾರಿಗೆ ಮಾಡುವಂತೆ ಹಿಂದೂ ಹಿತ ರಕ್ಷಣಾ ವೇದಿಕೆಯ  ಕಾರ್ಯಕರ್ತರು ಆಗ್ರಹಿಸಿದ್ದಾರೆ.


              ಸಕಲೇಶಪುರದಿಂದ ಸುಮಾರು 35 ಕಿಲೋ. ಮೀಟರ್‌ ದೂರದಲ್ಲಿರುವ ಪಾಂಡವರ ಗುಡ್ಡ ಎಂಬ ಬೆಟ್ಟದ ಮೇಲೆ ಹೊಯ್ಸಳರು ನಿರ್ಮಿಸಿರುವ ಐತಿಹಾಸಿಕ ಹಾಗೂ ಪುರಾತನ ಬೆಟ್ಟದ ಭೈರವೇಶ್ವರ ದೇವಸ್ಥಾನವಿದೆ.


             ಒಂದಲ್ಲ ಒಂದು ವಿಭಿನ್ನ ವಿವಾದದಲ್ಲಿರುವ ಈ ದೇವಾಲಯವು ಸುಮಾರು 700 ವರ್ಷಗಳಷ್ಟು ಪುರಾತನವಾಗಿದ್ದು ಸಂಪೂರ್ಣವಾಗಿ ಕರಿಶಿಲೆಯಿಂದ ಪಾಂಡವರು ನಿರ್ಮಿಸಿದ ಈ ಮೂಲ ದೇವಾಲಯವನ್ನು ಸುಮಾರು ವರ್ಷಗಳ ಹಿಂದೆ ಹೊಯ್ಸಳರು ಮರು ನಿರ್ಮಾಣ ಮಾಡಿದ್ದಾರೆ ಎಂಬ ಪುರಾಣಗಳಿವೆ


             ಪಾಶ್ಚಿಮಾತ್ಯ ಸಂಸ್ಕೃತಿಯ ಮೇಲೆ ಅವಲಂಬಿತವಾಗಿರುವ ನಮ್ಮ ಜನ ಪೋಟೊಶೂಟ್ ಹೆಸರಲ್ಲಿ ದೇವಸ್ಥಾನದ ಮುಂಭಾಗ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದಾರೆ. ಹಾಗೂ ಪ್ರಶ್ನಿಸಲು ಬರುವ ಸ್ಥಳಿಯ ಸಾರ್ವಜನಿಕರೊಂದಿಗೆ ಮಾತಿಗೆ ಮಾತು ಬೆಳೆದು ಕೈ ಮಿಲಾಯಿಸುವ ಪೋಲಿಸ್ ಠಾಣೆ ಮೆಟ್ಟಿಲೇರಿದ ಅನೇಕ ಪ್ರಕರಣಗಳು ಇವೆ ಎಂದು ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ತಿಳಿಸಿದ್ದಾರೆ.


               ಹಿಂದೂ ಧರ್ಮದ ಅಸ್ತಿತ್ವಕ್ಕೆ ದಕ್ಕೆ ತರುವ ಪ್ರಯತ್ನ ಯಾರು ಮಾಡಬಾರದು. ದೇವಾಲಯಗಳು ಪೋಟೋಶೂಟ್ ನಡೆಸುವ ಪ್ರವಾಸಿ ತಾಣಗಳಲ್ಲ ಅವುಗಳು ನಮ್ಮ ಧಾರ್ಮಿಕ ಭಾವನಾತ್ಮಕ ಸಂಬಂಧ ಹೊಂದಿರುವ ಸ್ಥಳಗಳು ಎಂದಿದ್ದಾರೆ.
             ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ರಘು ಸಕಲೇಶಪುರ. ಸ್ಥಳೀಯರಾದ ವಿನೋದ್ ಕಣಚೂರು. ಲೋಕೇಶ್ ದೇವಾಲಕೆರೆ. ಪರಿಸರ ಪ್ರೇಮಿ ವಿಕ್ರಂ ಹುರುಡಿ. ಸಂತೋಷ್ ಮೆಕನಗದ್ದೆ‌. ಬೆಳ್ಳಿ. ಭರತ್ ಮಾಜಿ ಅಧ್ಯಕ್ಷರು ದೇವಾಲಕೆರೆ .
ಸಂಜಯ್ ಕೊಟ್ಟಿಗೆಹಾರ.
ಅಜಿತ್ ಭಟ್. ತಾರೇಶ್. ರಾಷ್ಟ್ರೀಯ ಸ್ವಯಂಸೇವಕ ಸಂಘದ ಆನಂದ್. ಹಿಂದೂ ಹಿತರಕ್ಷಣಾ ವೇದಿಕೆಯ ಶಿವು ಜಿಪ್ಪಿ. ಎಸ್.ಎಲ್ ದರ್ಮೆಶ್. ಕೌಶಿಕ್ ಹೆಚ್.ಎಂ. ದುಶ್ಯಾಂತ್ ಗೌಡ. ಜತಿನ್ ಕುಮಾರ್. ಸಂತೋಷ್. ಶ್ರಿಜಿತ್ ಗೌಡ. ವಿಜಿತ್ ಗೌಡ. ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು.

Related posts

ಬೋರ್ಡ್ ತೆರವುಗೊಳಿಸಲು ಮಲೆನಾಡು ರಕ್ಷಣಾ ಸೇನೆ ಮನವಿ

Bimba Prakashana

ಹಳೆಯ ನೆನಪುಗಳು

Bimba Prakashana

ಆಲೂರು ಬಳಿ ರೈಲ್ವೆ ಹಳಿಯಲ್ಲಿ ಮೃತ ವ್ಯಕ್ತಿ ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More