ವರದಿ ಅರುಣ್ ರಾಜಪುತ್
ಬೇಲೂರು ಪುರಸಭಾ ವ್ಯಾಪ್ತಿಯ ವಿಶ್ವವಿಖ್ಯಾತ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ದಿವ್ಯ ಬ್ರಹ್ಮ ರಥೋತ್ಸವದ ಜಾತ್ರೆಯು ದಿನಾಂಕ : 23/03/2026 ರಿಂದ ಪ್ರಾರಂಭಗೊಂಡು ದಿನಾಂಕ: 05/04/2026 ರವರೆಗೆ ನಡೆಯಲಿದ್ದು, ದಿನಾಂಕ :31/03/2026 ಮತ್ತು ದಿನಾಂಕ: 01/04/2026 ರಂದು ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ದಿವ್ಯ ಬ್ರಹ್ಮ ರಥೋತ್ಸವ ಕಾರ್ಯಕ್ರಮವಿದೆ.
, ದಿವ್ಯ ಬ್ರಹ್ಮ ರಥೋತ್ಸವ ಕಾರ್ಯಕ್ರಮಕ್ಕೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 70-80 ಸಾವಿರ ಜನ ಭಕ್ತಾಧಿಗಳು ಸೇರುವ ಸಾಧ್ಯತೆ ಇರುತ್ತದೆ.
ಆದ್ದರಿಂದ ದಿನಾಂಕ: 27/03/2026 ರಿಂದ ದಿನಾಂಕ: 02/04/2026 ರವರೆಗೆ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ಮುಖ್ಯ ರಸ್ತೆ, ವೈಕುಂಠ ಬೀದಿ, ಕೆರೆ ಬೀದಿ, ಮಸೀದಿ ರಸ್ತೆ, ದೇವಸ್ಥಾನದ ಮುಂಭಾಗದ ರಸ್ತೆ, ದೇವಸ್ಥಾನದ ಬಲಭಾಗದ ರಸ್ತೆ, ದೇವಸ್ಥಾನದ ಎಡಭಾಗದ ರಸ್ತೆ, ದೇವಸ್ಥಾನದ ಹಿಂಭಾಗದ ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳ ಸಂಚಾರವನ್ನು ನಿರ್ಬಂಧಿಸುವಂತೆ ಪೊಲೀಸ್ ಅಧೀಕ್ಷಕರು ಹಾಸನರವರು ಉಲ್ಲೇಖಿತ ಪತ್ರದಲ್ಲಿ ಕೋರಿರುತ್ತಾರೆ.
ಉಲ್ಲೇಖದ ಪತ್ರದಲ್ಲಿನ ಅಂಶಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗು ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ದಿನಾಂಕ:27/03/2026 ರಿಂದ ದಿನಾಂಕ:02/04/2026 ರವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸುವುದು ಸೂಕ್ತವೆಂದು ಮನಗಂಡು ಈ ಕೆಳಕಂಡಂತೆ ಆದೇಶ ನೀಡಿದ್ದಾರೆ .
ಬಗ್ಗೆ ಮಾಹಿತಿ ನೀಡಿರುವ , ಭಾ,ಆ,ಸೇ., ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಲತಾ ಕುಮಾರಿಯವರು , ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 115 ಹಾಗೂ 1989 ರ ನಿಯಮ 221ಎ(5) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬೇಲೂರು ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ಮುಖ್ಯ ರಸ್ತೆ, ವೈಕುಂಠ ಬೀದಿ, ಕೆರೆ ಬೀದಿ, ಮಸೀದಿ ರಸ್ತೆ, ದೇವಸ್ಥಾನದ ಮುಂಭಾಗದ ರಸ್ತೆ, ದೇವಸ್ಥಾನದ ಬಲಭಾಗದ ರಸ್ತೆ, ದೇವಸ್ಥಾನದ ಎಡಭಾಗದ ರಸ್ತೆ, ದೇವಸ್ಥಾನದ ಹಿಂಭಾಗದ ರಸ್ತೆಗಳಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ದಿನಾಂಕ:27/03/2026 ರಿಂದ ದಿನಾಂಕ:02/04/2026 ರವರೆಗೆ ಸಾರ್ವಜನಿಕರ ವಾಹನಗಳ ಸಂಚಾರ ನಿಷೇಧಿಸಿ ಆದೇಶಿಸಿದ್ದಾರೆ .
