Blog

ಆಲೂರುನಲ್ಲಿ ರಾಧಮ್ಮ ಜನ ಸ್ಪಂದನೆ ವತಿಯಿಂದ ವಾಕ್ಸಿನೇಷನ್

ಆಲೂರಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಈ ಶುಕ್ರವಾರ ಮಧ್ಯಾಹ್ನ 2 ಗಂಟೆ 30 ನಿಮಿಷಕ್ಕೆ ಪ್ರಾರಂಭವಾಗಿ 4.15 ನಿಮಿಷದವರೆಗೂ ವ್ಯಾಕ್ಸಿನೇಷನ್ ಹೆಣ್ಣು ಮಕ್ಕಳಿಗೆ ರಾದಮ್ಮ ಜನಸ್ಪಂದನ ಸಂಸ್ಥೆ ವತಿಯಿಂದ ಹಾಕಲಾಗುವುದು ಎಂದು ತಿಳಿದು ಬಂದಿದೆ.

ಈ ಶಿಬಿರದಲ್ಲಿ ವ್ಯಾಕ್ಸಿನೇಷನ್ ಹಾಕಲು ಮಲೆನಾಡು ನರ್ಸಿಂಗ್ ಹೋಮ್ ವೈದ್ಯರಾದ ಡಾ. ಸಾವಿತ್ರಿ ಮತ್ತು ಅವರೊಂದಿಗೆ ಪ್ರಸ್ತುತಿ ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷರಾಗಿರುವ ಡಾ. ಪ್ರೇಮಲತಾ  ಹಾಗೂ ಡಾಕ್ಟರ್ ಇಂಪನರು ಸಹ ಹಾಜರಿದ್ದು ಮಕ್ಕಳ ಮುಂದಿನ ಆರೋಗ್ಯ ಭವಿಷ್ಯಕ್ಕಾಗಿ ಗರ್ಭ ಕೊರಳ ಕ್ಯಾನ್ಸರ್ ಈ ವ್ಯಾಕ್ಸಿನ್ ಎಚ್ ಪಿ ವಿ ಹಾಕುವುದರ ಮುಖಾಂತರ ತಡೆಗಟ್ಟಬಹುದಾಗಿದೆ.


ವೈದ್ಯರ ಬಳಿ ವ್ಯಾಕ್ಸಿನೇಷನ್ ಬಗ್ಗೆ  ಪೋಷಕರು ವಿವರವನ್ನು ಸಹ ಪಡೆಯಬಹುದು ಮುಂದಿನ ದಿನಗಳಲ್ಲಿ ಇಂತಹ ಲಸಿಕೆಯಿಂದ ನಿಮ್ಮ ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ ಎಂಬುದು ವೈದ್ಯರು ಸ್ಪಷ್ಟಪಡಿಸುತ್ತಾರೆ… ಶಿಬಿರಕ್ಕೆ ಎಲ್ಲರೂ ಸಹ ಸರಿಯಾದ ಸಮಯಕ್ಕೆ ಹಾಜರಾಗಿ ಸಹಕರಿಸಬೇಕೆಂದು ರಾಧಮ್ಮ ಜನಸ್ಪಂದನ ಸಂಸ್ಥೆಯ ಅಧ್ಯಕ್ಷರಾಗಿರುವ ಹೇಮಂತ್ ಕುಮಾರ್ ರವರು ಮನವಿ ಮಾಡಿರುತ್ತಾರೆ…

ಮಗ್ಗೆ ರಾಯರ ಕೊಪ್ಪಲು ಭಾಗದಿಂದ ಬರುವವರೆಗೆ ಉಚಿತವಾಗಿ ಇನ್ಸ್ಪೈರ್ ಇಂಟರ್ನ್ಯಾಷನಲ್ ಶಾಲೆಯ ಬಸ್ಸನ್ನು ಸಹ ವ್ಯವಸ್ಥೆ ಮಾಡಿಕೊಳ್ಳಲಾಗಿದೆ 2 ಗಂಟೆ ಒಳಗೆ ಇನ್ಸ್ಪೈರ್ ಶಾಲೆ ಬಳಿ ಹೋದರೆ ಅಲ್ಲಿಯ ಶಾಲಾ ಬಸ್ 2 ಗಂಟೆಗೆ 15 ನಿಮಿಷಕ್ಕೆ ಹೊರಡುತ್ತದೆ ಈ ಸಾರಿಗೆ ಸೌಲಭ್ಯವನ್ನು  ಉಪಯೋಗಿಸಿಕೊಳ್ಳಿ ಎಂದು  ಹೇಮಂತ್ ಕುಮಾರ್ ಅವರು ತಿಳಿಸಿರುತ್ತಾರೆ … ಹೆಚ್ಚಿನ ಮಾಹಿತಿಗಾಗಿ ಹೇಮಂತ್  ರಾಧಮ್ಮ ಜನಸ್ಪಂದನ ಸಂಪರ್ಕಿಸಿ 9986222868

Related posts

ಮದುವೆ ಮುಗಿಸಿ ಬರುತ್ತಿದ್ದವರಿಗೆ ಅಪಘಾತ – 3 ಮೃತ್ಯು

Bimba Prakashana

ಸಕಲೇಶಪುರ ಬಾಗೆ ಬಳಿ ಕೆರೆಯ ಜಾಗ ಒತ್ತುವರಿ – ಕಂದಾಯ ಇಲಾಖೆಯ ಗಮನಕ್ಕೆ ಬಂದಿಲ್ಲವೇ?

Bimba Prakashana

ಕಾರ್ಜುವಳ್ಳಿ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ವಿಶ್ವರತ್ನ ಕ್ರಿಕೆಟ್ ಪಂದ್ಯಾಟ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More