ಜೆ.ಎಂ .ಎಫ್.ಸಿ.ನ್ಯಾಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ.
ಸಕಲೇಶಪುರ;-
ಇಲ್ಲಿನ ಜೆ.ಎಂ.ಎಫ್. ಸಿ. ನ್ಯಾಯಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ
ಅದ್ದೂರಿಯಾಗಿ ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ರವರ 135 ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ನ್ಯಾಯಾಲಯದ ಆವರಣದಲ್ಲಿ
ಏರ್ಪಡಿಸಿದ್ದ ಸಮಾರಂಭದಲ್ಲಿ
ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ಭಾವ ಚಿತ್ರಕ್ಕೆ ನ್ಯಾಯಾದೀಶರಾದ ಲಕ್ಮಿನರಸಿಂಹ ರವರು ಪುಷ್ಪ ನಮನವನ್ನು ಸಲ್ಲಿಸಿದರು.
ಈ ಸಂಧರ್ಭದಲ್ಲಿ ವಕೀಲರಾದ ಯಶ್ವಂತ್ , ಎ. ಪಿ.ಮಹೇಶ್, ವೇಣು, ಇ. ಇ. ದಿನೇಶ್ ರವರು, ಅಂಬೇಡ್ಕರ್ ರವರು ದೇಶಕ್ಕೆ ನೀಡಿದ ಕೊಡುಗೆ ಬಗ್ಗೆ ಮಾತನಾಡಿದರು.
ನಂತರ ಮಾತನಾಡಿದ ನ್ಯಾಯಾದೀಶರಾದ ಲಕ್ಷ್ಮಿ ನರಸಿಂಹರವರು ಅಂಬೇಡ್ಕರ್ ಬಾಲ್ಯ ಜೀವನದಿಂದ ಪ್ರಾರಂಭಗೊಂಡು ತಮ್ಮ ವಿದ್ಯಾಬ್ಯಾಸದ ಸಮಯದಲ್ಲಿ ಕಷ್ಟದ ದಿನಗಳಲ್ಲೂ ಕೂಡ ತಮ್ಮ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ ಗಳನ್ನು ನೀಡಿ ಹೆಚ್ಚು ಪದವಿಯನ್ನು ಗಳಿಸಿದ ಏಕೈಕ ವ್ಯೆಕ್ತಿಯಾಗಿದ್ದು ನಂತರ ಪ್ರಪಂಚದಲ್ಲೇ ದೊಡ್ಡ ಸಂವಿಧಾನ ಹೊಂದಿದ ಭಾರತಕ್ಕೆ ತಮ್ಮದೇ ಆದ
ವಿಷೇಶವಾದ ಶ್ರಮ ವಹಿಸಿ ಪ್ರಪಂಚದ ಹಲವು ದೇಶಗಳ ಸಂವಿಧಾನವನ್ನು ಅದ್ಯಯನ ಮಾಡಿ
ನಮ್ಮ ಭಾರತಕ್ಕೆ
ವಿಷೇಶ ಸಂವಿಧಾನವನ್ನು ಕೊಡುಗೆ ಆಗಿ ನೀಡಿದರು. ಕೇವಲ ಸಂವಿಧಾನ ನೀಡಿದ್ದಲ್ಲದೇ, ದೇಶದ ಆರ್ಥಿಕತೆ,
ನೆಲ ಜಲದ ರಕ್ಷಣೆ, ದೀನ ದಲಿತರಿಗೆ ಮೀಸಲಾತಿ ವ್ಯವಸ್ಥೆ, ವಿದ್ಯಾಭ್ಯಾಸದ ಹಕ್ಕು ಹಾಗೂ ದೇಶದ ರಾಜಕೀಯ ವ್ಯವಸ್ಥೆಗೆ ಸಾಮಾನ್ಯ ನಾಗರೀಕನಿಗೂ ಆಡಳಿತ ಚುಕ್ಕಾಣಿ
ಹಿಡಿಯುವಂತೆ ಸಂವಿಧಾನದಲ್ಲಿ
ಅವಕಾಶ ಕಲ್ಪಿಸಿದರು. ಮುಂದಿನ ನೂರಾರು ವರ್ಷಗಳ ಕಾಲ ಅಂತರ್
ರಾಷ್ಟ್ರೀಯ ಬಾಂದವ್ಯವನ್ನು ವೃದ್ದಿಸಲು ಸಂವಿದಾನದಲ್ಲಿ ಅವಕಾಶ ಮಾಡಿಕೊಟ್ಟರು.
ದೇಶದ ಪ್ರತಿಯೊಬ್ಬ ಪ್ರಜೆಯೂ ಅನುಭವಿಸುಬಹುದಾಂತಹ ಸಮಾನ ನಾಗರೀಕ ಹಕ್ಕುಗಳನ್ನು ಕೊಟ್ಟ ಮಹಾನ್ ಶಿಲ್ಪಿ ಸಂವಿದಾನ
ತಜ್ಞ ಡಾ ಬಾಬಾ ಸಾಹೇಬ್ ಅಂಬೆಡ್ಕರ್ ಎಂದು ಬಣ್ಣಿಸಿದರು.
ವಿಶ್ವದ ಎಲ್ಲಾ ದೇಶಗಳಲ್ಲೂ ಒಬ್ಬ
ವ್ಯೆಕ್ತಿಯ ಪ್ರತಿಮೆ ಇದೆ ಎಂದಾದರೆ
ಅದು ವಿಶ್ವಮಾನವನಂತೆ ವಿಜೃಂಬಿಸುತ್ತಿರುವ ಏಕೈಕ ವ್ಯೆಕ್ತಿ ಅಂಬೆಡ್ಕರ್ ಪ್ರತಿಮೆ ಆಗಿದೆ.
ಈ ಕಾರ್ಯಕ್ರಮದಲ್ಲಿ ನ್ಯಾಯದೀಶರು, ಹಿರಿಯ ಮತ್ತು ಕಿರಿಯ ವಕೀಲರು ಹಾಗೂ ನ್ಯಾಯಲಯದ ಸಿಬ್ಬಂದಿಗಳು ಹಾಜರಿದ್ದರು.




