ನಾಗೇಶ್ ಎಂ ಎಚ್ ಮಾಗೇರಿ
ಡಾ ||ಬಿ.ಆರ್. ಅಂಬೇಡ್ಕರ್ ರವರ ಪುತ್ಥಳಿ ಶಂಕು ಸ್ಥಾಪನಾ ಸಮಾರಂಭ
ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿ ಕೇಂದ್ರದಲ್ಲಿ ಬಾಬಾಸಾಹೇಬ್ ಡಾ||ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿ ನಿರ್ಮಿಸಲು ಈ ಹಿಂದೆ ಪಂಚಾಯತಿ ವತಿಯಿಂದ ನಿಗದಿ ಮಾಡಿದ್ದ ಜಾಗದಲ್ಲಿ ಡಾ||ಬಿ.ಆರ್ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ವತಿಯಿಂದ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಶಾಸಕರಾದ ಸಿಮೆಂಟ್ ಮಂಜು ರವರು ಹಾಗೂ ಮಾಜಿ ಸಚಿವರಾದ ಹೆಚ್.ಕೆ ಕುಮಾರಸ್ವಾಮಿ ರವರು ಭಾಗವಹಿಸಿ ಗುದ್ದಲಿ ಪೂಜೆ ನೆರವೇರಿಸಿದರು. ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ದೊಡ್ಡನಹಳ್ಳಿ ಈರಯ್ಯ ರವರು ವಹಿಸಿ, ಬೌದ್ಧ ಧಮ್ಮಚಾರಿಗಳಾದ ಜಯಸೇನ ರವರ ನೇತೃತ್ವದಲ್ಲಿ ನಡೆದ ಬುದ್ಧ ಪೂಜೆಯಲ್ಲಿ ನಾಗರೀಕರು ಮತ್ತು ಪದಾಧಿಕಾರಿಗಳೊಂದಿಗೆ ಭಾಗವಹಿಸಿ ಸಹಕರಿಸಿದರು. ಹಾಗೂ ಮುಖ್ಯ ಅತಿಥಿಗಳಾಗಿ ವೀರಶೈವ ಸಮುದಾಯದ ಮುಖಂಡರಾದ ಮುರುಗೇಂದ್ರರವರು ಹಾಗೂ ಮುಸ್ಲಿಂ ಮುಖಂಡರಾದ ಸಿರಾಜ್ ಅಹಮದ್ ರವರು, ಬಿ.ಎಸ್.ಪಿ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ್ ಕೀರ್ತಿರವರು, ಹಿರಿಯ ಮುಖಂಡರಾದ ನಲ್ಲುಲ್ಲಿ ಈರಪ್ಪ ರವರು, ಬೌದ್ಧ ಉಪಾಸಕರಾದ ಜಯವರ್ಧನ್ ರವರು, ಯಸಳೂರು ಪೊಲೀಸ್ ಅಧಿಕಾರಿಗಳಾದ ಪ್ರಕಾಶ್ ನಾಯಕ್ ರವರು ಸೇರಿದಂತೆ ಯಸಳೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು, ಸದಸ್ಯರುಗಳು ಉಪಸ್ಥಿತಿಯಲ್ಲಿದ್ದರು. ಹಾಗೂ ಯಸಳೂರು ಹೋಬಳಿ ವ್ಯಾಪ್ತಿಯ ಸುತ್ತ ಮುತ್ತಲಿನ ಗ್ರಾಮಸ್ಥರು, ವಿವಿಧ ಸಮುದಾಯದ ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


