Blog

ಆಲೂರುನಲ್ಲಿ ಉಪ ವಿಭಾಗ ಅಧಿಕಾರಿ ನ್ಯಾಯಾಲಯ



ಆಲೂರು: ಸಾರ್ವಜನಿಕರು ತಮ್ಮ ಸಮಸ್ಯೆಗಳ – ಪರಿಹಾರಕ್ಕಾಗಿ ಹಾಸನಕ್ಕೆ ತೆರಳುವುದರಿಂದ ಹೆಚ್ಚಿನ ಸಮಯ ಹಾಗೂ ಹಣ ವ್ಯಯವಾಗುವುದನ್ನು ಮನಗಂಡು, ಆಲೂರಿನಲ್ಲಿ ಪ್ರತಿ ಮಂಗಳವಾರ ಉಪ ವಿಭಾಗಾಧಿಕಾರಿ ನ್ಯಾಯಾಲಯ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಈ ವಿಭಾಗಾಧಿಕಾರಿ ಹುಮನಿ ಇಮ್ಮ ತಿಳಿಸಿದ್ದಾರೆ.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಉಪ ವಿಭಾಗಾಧಿಕಾರಿ ನ್ಯಾಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಹಣಿ, ಕಂದಾಯ ಸೇರಿದಂತೆ ವಿವಿಧ ಕಂದಾಯ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಸಾರ್ವಜನಿಕರು ದೂರದ ಹಾಸನಕ್ಕೆ ತೆರಳಬೇಕಾಗುತ್ತಿತ್ತು. ಇದರಿಂದ ಜ್ಞ ಸಮಯ ಮತ್ತು ಹಣ ವ್ಯರ್ಥವಾಗುತ್ತಿತ್ತು. ಇದನ್ನು ಮನಗಂಡು ಸಾರ್ವಜನಿಕರ ಅನುಕೂಲಕ್ಕಾಗಿ ಆಲೂರಿನ ಮಿನಿ ವಿಧಾನಸೌಧದಲ್ಲಿಯೇ – ಪ್ರತಿ ಮಂಗಳವಾರ ಉಪ ವಿಭಾಗಾಧಿಕಾರಿ – ನ್ಯಾಯಾಲಯ ನಡೆಸಲಾಗುವುದು ಎಂದು – ತಿಳಿಸಿದರು.

ಉಪ ವಿಭಾಗಾಧಿಕಾರಿ ನ್ಯಾಯಾಲಯ – ಆಲೂರಿನಲ್ಲಿಯೇ ನಡೆಯುವುದರಿಂದ ಈ ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ತಮ್ಮ ಕಂದಾಯ ಸಂಬಂಧಿತ ಸಮಸ್ಯೆಗಳಿಗೆ ಅಗತ್ಯ ದಾಖಲೆಗಳೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿ – ಪರಿಹಾರ ಪಡೆದುಕೊಳ್ಳುವಂತೆ ಅವರು ತಿಳಿಸಿದರು.

ವಾರಕ್ಕೊಮ್ಮೆ ತಾಲೂಕು ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ನ್ಯಾಯಾಲಯ ನಡೆಯುವುದ-ರಿಂದ ಸಾರ್ವಜನಿಕರು ದೂರದ ಹಾಸನಕ್ಕೆ ತೆರಳುವ ಅಗತ್ಯ ಕಡಿಮೆಯಾಗಲಿದೆ. ಇದ-ರಿಂದ ಸಾರ್ವಜನಿಕರಿಗೆ ಸಮಯ ಹಾಗೂ ಹಣದ ಉಳಿತಾಯವಾಗಲಿದೆ ಎಂದು ಅವರು  ಹೇಳಿದರು.

ಈ ಸಂದರ್ಭದಲ್ಲಿ ಸಕಲೇಶಪುರ ಉಪ ವಿಭಾಗಾಧಿಕಾರಿ, ಆಲೂರು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎಲ್. ಮಹೇಶ್ ಸೇರಿದಂತೆ ಅಧಿಕಾರಿಗಳು, ವಕೀಲರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related posts

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Bimba Prakashana

ಕಾರಗೋಡು ಗ್ರಾಮದಲ್ಲಿ ನಾಲ್ಕು ಕಡೆ ಕಳ್ಳತನ

Bimba Prakashana

ಬ್ಯಾಕರವಳ್ಳಿ ಮೊರಾರ್ಜಿ ಶಾಲೆ ಚಾಂಪಿಯನ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More