Blog

ಮಲ್ಲಿಕಾರ್ಜುನ ಖರ್ಗೆಅವರಿಗೆ ಅವಮಾನ – ದಲಿತ ಸಂಘಟನೆಗಳ ಖಂಡನೆ

🔴ಖರ್ಗೆ ಅವರಿಗೆ ಅವಮಾನ: ಆಲೂರಿನಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ

, ಆಲೂರು: ಉತ್ತರಾಖಂಡದ ಹಲ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಕಾರ್ಯಕ್ರಮದ ಬಳಿಕ ಸ್ಥಳವನ್ನು ಗೋಮೂತ್ರ ದಿಂದ ಶುದ್ದೀಕರಿಸಿ ಶುದ್ದೀಕರಿಸಿ ಹೋಮ-ಹವನ ನಡೆಸಿದ ಘಟನೆ ಖಂಡಿಸಿ ಆಲೂರು ತಾಲೂಕು ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಾತಿ ಈ ಘಟನೆ ಅಸಮಾನತೆ ಹಾಗೂ ಅಸ್ಪೃಶ್ಯತೆ ಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನತೆ ಮತ್ತು ಗೌರವದ ಹಕ್ಕನ್ನು ನೀಡಿದ್ದು, ಇಂತಹ ಘಟನೆಗಳು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವಂತಿವೆ ಎಂದು ಹೇಳಿದರು.

ಘಟನೆಗೆ ಕಾರಣರಾದವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಮುಖಂಡರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರವಿ ಕಾರ್ಜುವಳ್ಳಿ, ರಂಗಯ್ಯ ಅಚ್ಚೇನಹಳ್ಳಿ, ಬಸವರಾಜು ಗೇಕರವಳ್ಳಿ, ದೇವರಾಜು ಜೆ. ತಿಮ್ಮನಹಳ್ಳಿ, ಸುರೇಶ್ ಕೊಂಗಳ್ಳಿ, ಲೋಕೇಶ್ ಅಚ್ಚೇನಹಳ್ಳಿ, ರವಿ ನಿಲುವಾಗಿಲು, ಲೋಹಿತ್ ಹಸಗನೂರು, ರಂಗನಾಥ್ ಬಸವೇಶ್ವರ, ಕಾಂತರಾಜ್ ಬ್ಯಾಬ, ಹರೀಶ್ ಬರತವಳ್ಳಿ, ಧರ್ಮಪ್ಪ ಬ್ಯಾಬ, ದೇವರಾಜ್ ಚಂದ್ರಶೇಖರ್ ತೊರೆಹಳ್ಳಿ, ಮಣಿಕಂಠಸ್ವಾಮಿ ಮುದಿಗೆರೆ, ನಂದೀಶ್ ಬ್ಯಾಬ ಸೇರಿದಂತೆ ಹಲವರು ಭಾಗವಹಿಸಿದ್ದರು.

Related posts

ಆಸ್ಪತ್ರೆಗೆ ಸೌಲಭ್ಯ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Bimba Prakashana

ಯಸಳೂರು : ದೇವರಾಜ್ ಮೇಲೆ ಕೇಸು ದಾಖಲು

Bimba Prakashana

ತಾಯಿ ಮಗು ಆತ್ಮಹತ್ಯೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More