Blog

ಆರೋಗ್ಯ ಇಲಾಖೆಯ ಅರೋಗ್ಯ ಕೆಡಿಸಿದ ಭೂಪ

ಆಲೂರು ತಾಲೂಕಿನ ರಾಯರ ಕೊಪ್ಪಲು ಗ್ರಾಮದ ಆರೋಗ್ಯ ಉಪ ಕೇಂದ್ರಕ್ಕೆ ಬೇಲಿ ಹಾಕಿದ ಭೂಪ.

ವಿಶೇಷ ವರದಿ : ನವೀನ್ ಬೈರಾ ಪುರ


ಆಲೂರು ತಾಲೂಕು ಗ್ರಾಮದ ಆರೋಗ್ಯ ಉಪ ಕೇಂದ್ರಕ್ಕೆ ವ್ಯಕ್ತಿಯೋರ್ವರು ನನಗೆ ಜಮೀನು ಬರಬೇಕೆಂದು ಆರೋಗ್ಯ ಉಪ ಕೇಂದ್ರಕ್ಕೆ ಬೇಲಿ ಹಾಕಿರುವ ಘಟನೆ ರಾಯರ ಕೊಪ್ಪಲು ಗ್ರಾಮದಲ್ಲಿ ಕಂಡು ಬಂದಿದೆ.


ಈ ಪ್ರಕರಣವು ಆಲೂರು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ ನಾಗೇಶ್ ಎಂಬಾತ ಅಕ್ರಮವಾಗಿ ಬೇಲಿ ಹಾಕಿ ದುಂಡ ವರ್ತನೆ ಮಾಡುತ್ತಿದ್ದಾರೆ ಎಂದು ಆಲೂರು ತಾಲೂಕಿನ ವೈದ್ಯಾಧಿಕಾರಿಯಾದ ಫಾತಿಮಾ ಅವರು ಹೇಳಿದ್ದಾರೆ.

ಈತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುಬೇಕೆಂದು ಮನವಿ ಮಾಡಿದ್ದಲ್ಲದೆ ಸ್ಥಳಕ್ಕೆ ಕಾರಗೋಡು ಗ್ರಾಮ ಪಂಚಾಯಿತಿಯ ಗ್ರಾಮ ಅಭಿವೃದ್ಧಿ ಅಧಿಕಾರಿ ಸಣ್ಣಪ್ಪ ಹಾಗೂ ರಾಜಸ್ವ ನಿರೀಕ್ಷಕರಾದ ಚಂದ್ರಶೇಖರ್ ಭೇಟಿ ನೀಡಿದ್ದಾರೆ.

ಈತನಿಗೆ ಆರೋಗ್ಯ ಉಪ ಕೇಂದ್ರದ ಸುತ್ತಮುತ್ತ ಯಾವುದೇ ಇವನ ಜಮೀನು ಇಲ್ಲ ಎಂದು ಧೃಡಪಡಿಸಿದಲ್ಲದೆ ಈತನಿಗೆ ನೋಟಿಸ್ ನೀಡಿದ್ದಾರೆ. ಅದಲ್ಲದೆ ಈತನ ವಿರುದ್ಧ ಕಂಪ್ಲೇಂಟ್ ನೀಡಿದ್ದಾರೆ. ಎಂಥಾ ಕಥೆ ಆಯ್ತು ನೋಡಿ ಸರ್ಕಾರಿ ಜಾಗಕ್ಕೆ ಬಂದು ಸರ್ಕಾರದ ಆರೋಗ್ಯ ಉಪ ಕೇಂದ್ರಕ್ಕೆ ಬೀಗ ಹಾಕಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕ ಪ್ರಶ್ನೆಯಾಗಿದೆ

Related posts

ವರ್ಧಮಾನ್ ಎಲೆಕ್ಟ್ರಾನಿಕ್ ನಲ್ಲಿ ಆಫರೋ ಆಫರ್

Bimba Prakashana

ಮಮತೆಯ ತೊಟ್ಟಿಲು

Bimba Prakashana

ಬಾಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More