Blog

ಹೋಬಳಿ ಮಟ್ಟದ ಕ್ರೀಡೆಯಲ್ಲಿ ಬಾಳ್ಳುಪೇಟೆ ವಿದ್ಯಾರ್ಥಿಗಳ ಸಾಧನೆ

ಶ್ರೀರಂಗನಾಥ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ


  ಸಕಲೇಶಪುರ ಸುಭಾಷ್ ಮೈದಾನದಲ್ಲಿ ನಡೆದ ಬೆಳಗೋಡು ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ   ಬಾಳ್ಳುಪೇಟೆಯ ಶ್ರೀರಂಗನಾಥ ಪ್ರೌಢಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ  ಬಾಲಕಿಯರ ತಂಡ  ಪ್ರಶಸ್ತಿ  ಯೊಂದಿಗೆ ವಿವಿಧ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ  ನೀಡಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ. 


  ಬಾಲಕರ ವಿಭಾಗದಲ್ಲಿ : ವಾಲಿಬಾಲ್ ಪ್ರಥಮ,   ಖೋ ಖೋ ಪ್ರಥಮ, 4×100 ರಿಲೇ ಪ್ರಥಮ, ಮಹೇಶ್ ಎ. ಆರ್ 800 ಮೀಟರ್ ಪ್ರಥಮ, ಆದಿತ್ಯ 1500 ಮೀ ದ್ವಿತೀಯ, ಭರಣಿ ಶಂಕರ್  100ಮೀ ದ್ವಿತೀಯ, ತ್ರಿವಿಧ ಜಿಗಿತ ತೃತೀಯ, ಉದ್ದ ಜಿಗಿತ ದ್ವಿತೀಯ, ಧನುಷ್ ಉದ್ದ ಜಿಗಿತ ದ್ವಿತೀಯ, ಹಾಗೂ ಜಾವೆಲಿನ್ ತೃತೀಯ, ಯಶವಂತ ತಟ್ಟೆ ಎಸೆತ ದ್ವಿತೀಯ  ಮತ್ತು ಹ್ಯಾಮರ್ ತೃತೀಯ, ಪ್ರೀತಮ್ ತ್ರಿವಿಧ ಜಿಗಿತ ದ್ವಿತೀಯ, ಪ್ರಮೋದ್ ಎತ್ತರ ಜಿಗಿತ ತೃತೀಯ,

ಬಾಲಕಿಯರ ವಿಭಾಗ :- *ವಾಲಿಬಾಲ್* ಪ್ರಥಮ. ಕಬ್ಬಡಿ ದ್ವಿತೀಯ
ಹರ್ಷಿತಾ O S. ಉದ್ದ ಜಿಗಿತ ಪ್ರಥಮ, ತ್ರಿವಿಧ ಜಿಗಿತ ಪ್ರಥಮ, ಲಾವಣ್ಯ ತಟ್ಟೆಎಸೆತ ಪ್ರಥಮ, ಪೂರ್ಣಿಮಾ  ಜಾವೆಲಿನ್ ಪ್ರಥಮ ಹಾಗೂ ಹ್ಯಾಮರ್ ಎಸೆತ ದ್ವಿತೀಯ, ಪ್ರೇರಣ  ತಟ್ಟೆ ಎಸೆತ ದ್ವಿತೀಯ ಮತ್ತು ಜಾವೆಲಿನ್ ದ್ವಿತೀಯ. ವರ್ಷಿಣಿ ತ್ರಿವಿಧ ಜಿಗಿತ ದ್ವಿತೀಯ ಮತ್ತು ಉದ್ದ ಜಿಗಿತ ತೃತೀಯ ಮತ್ತು ಹಾಗೂ ಎತ್ತರ ಜಿಗಿತ ತೃತೀಯ, ಪ್ರೇಕ್ಷಿತ H. P 1500ಮೀ ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ, ಹಾಗೂ ಮುಖ್ಯ ಶಿಕ್ಷಕರಾದ ಶ್ರೀಮತಿ ಲಲಿತಾ. ದೈಹಿಕ ಶಿಕ್ಷಣ ಶಿಕ್ಷಕರಾದ ಅನಿಲ್ ಕುಮಾರ್. ತಂಡ ವ್ಯವಸ್ಥಾಪಕ ಶಿಕ್ಷಕರಾದ   ಗುರುಪ್ಪ ಶೆಟ್ಟಿ,ಕರುಣಾಕರ್, ಕಮಲಮ್ಮ,ಮಲ್ಲೇಶ್, ಸಲ್ಮಾ, ರವೀಂದ್ರ,ಗಿರೀಶ್, ಅಭಿನಂದಿಸಿದರು.

Related posts

ನಾಡ ಪಟೇಲರ ಮನೆ ಧರಣೇoದ್ರ ಇನ್ನಿಲ್ಲ

Bimba Prakashana

ಮದುವೆ ಮುಗಿಸಿ ಬರುತ್ತಿದ್ದವರಿಗೆ ಅಪಘಾತ – 3 ಮೃತ್ಯು

Bimba Prakashana

ಕಾಫಿ ಆಚರಣೆಗೆ ಈ ಒಂದು ದಿನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More