Blog

ಒಂದೇ ಬಾರಿಗೆ 35 ಶಿಕ್ಷಕರ ಸನ್ಮಾನ ಮಾಡಿ ಮಾದರಿ ಆದ ಕುನಿಗನ ಹಳ್ಳಿ ಗ್ರಾಮ ಪಂಚಾಯತ್

ರಾಜ್ಯದಲ್ಲೆ ಶಿಕ್ಷಕರಿಗೆ  ಮಾದರಿಯಾದ, ಕುನಿಗನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಕೆ.ಎಸ್.
ಪ್ರಕಾಶ್

ಕುನಿಗನಹಳ್ಳಿ:

ಸರ್ಕಾರಿ ಶಾಲೆಗಳ ಉಳಿವಿಕೆಗಾಗಿ ಹಾಗೂ ಶಿಕ್ಷಕರ ಶ್ರೇಯೋಭಿವೃದ್ಧಿಗಾಗಿ ಕುಣಿಗನಹಳ್ಳಿ ಗ್ರಾಮ ಪಂಚಾಯತ್ ಸದಾ ಸಿದ್ದ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಕಾಶ್ ರವರು ನುಡಿದರು.


ರಾಜ್ಯ ಹಂತದಲ್ಲೇ ಮೊಟ್ಟ ಮೊದಲ ಬಾರಿಗೆ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಶಿಕ್ಷಕಿಯರು ಹಾಗೂ ಸರ್ಕಾರಿ ಕಿರಿಯ ಹಿರಿಯ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ, ಶಿಕ್ಷಕರ ದಿನಾಚರಣೆಯ ಗೌರವಾರ್ಥವಾಗಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳ ಉಳಿವಿಕೆಯಲ್ಲಿ ಅಂಗನವಾಡಿ ಶಿಕ್ಷಕಿಯರ ಪಾತ್ರ ಬಹುಮುಖ್ಯವಾದದ್ದು.

ನೀವು ಶ್ರಮಪಟ್ಟು ಗ್ರಾಮದ ಮಕ್ಕಳನ್ನು ಉಳಿಸಿಕೊಂಡು ಸರ್ಕಾರಿ ಶಾಲೆಗೆ ಕಳುಹಿಸಿದಾಗ,  ಖಾಸಗಿ ಶಾಲೆಯ ವ್ಯಾಮೋಹ ಕಡಿಮೆಯಾಗಿ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಹೆಚ್ಚಳ ವಾಗುವುದರಲ್ಲಿ ಸಂಶಯವಿಲ್ಲ ಎಂದುನುಡಿದರು. ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಶಾಲೆಗಳು ಮುಚ್ಚಬಾರದು.ಆ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಅತೀ ಮುಖ್ಯ ಎಂದರು.


ನಾನು ಸಹ ಸರ್ಕಾರಿ ಶಾಲೆಯ ಶಿಕ್ಷಕರ ಹಂತದಲ್ಲಿ ಕಲಿತು ಇಂದು ಈ ಮಟ್ಟಿಗೆ ಬೆಳೆದು ನಿಂತಿದ್ದೇನೆ,,, ಶಿಕ್ಷಕರ ಋಣವನ್ನು ಈ ನಿಟ್ಟಿರಲ್ಲಿ ತೀರಿಸುವ ಸಲುವಾಗಿ ನಾನು ವೈಯುಕ್ತಿಕವಾಗಿ ಶಿಕ್ಷಕರನ್ನು ಗೌರವಿಸುವ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಹಿರಿಯ ಕಿರಿಯ ಶಾಲೆಗಳ ಒಟ್ಟು 26 ಜನ ಶಿಕ್ಷಕರನ್ನು ಗೌರವಿಸಲಾಯಿತು. ಹಾಗೂ ಒಂಬತ್ತು ಜನ ಅಂಗನವಾಡಿ ಶಿಕ್ಷಕಿಯರನ್ನೂ  ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ತಮ್ಮಣ್ಣ ಶೆಟ್ಟರು ಮಾತನಾಡುತ್ತಾ ರಾಜ್ಯಕ್ಕೆ ಮಾದರಿಯಾದಂತಹ ಗ್ರಾಮ ಪಂಚಾಯಿತಿ ಅಧ್ಯಕ್ಷರು.. ಈ ಹಿಂದೆ ಪ್ರಪ್ರಥಮವಾಗಿ ಸರ್ಕಾರಿ ಶಾಲಾ ಶಿಕ್ಷಕರೆಲ್ಲರ  ಸಭೆ ಕರೆದು ಶಾಲಾ ಸಮಸ್ಯೆಗಳನ್ನು ಆಲಿಸಿ ಹಂತ ಹಂತವಾಗಿ ಶಾಲೆಯ ಸಮಸ್ಯೆಗಳನ್ನ ಬಗೆಹರಿಸುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳು.. ಅಧ್ಯಕ್ಷರು ಹಾಗೂ ಸದಸ್ಯರೊಡಗೂಡಿ ಪ್ರತಿ ಶಾಲೆಗೆ ಭೇಟಿ ನೀಡಿ ಅಕ್ಷರ ದಾಸೋಹವನ್ನು ಪರಿಶೀಲಿಸಿ ನೀಡಿದ ಸಲಹೆಗಳು.. ಅಕ್ಷರ ದಾಸೋಹದ ಮೊಟ್ಟೆ ವಿಚಾರದಲ್ಲಿ ರಾಜ್ಯಕ್ಕೆ ಗಮನ ಸೆಳೆಯುವಂತೆ ಮಾಡಿದ ಪ್ರಯತ್ನಗಳು.. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ದಾನಿಗಳ ಸಹಕಾರದಿಂದ ವಿಶೇಷವಾಗಿ ಸಮವಸ್ತ್ರ ಕೊಡಿಸಲು ಮಾಡಿದ ಪ್ರಯತ್ನಗಳು.. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪಂಚಾಯತ್ ವ್ಯಾಪ್ತಿಯ ಎಲ್ಲಾ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸಲ್ಲಿಸಿದ ಗೌರವ ಎಲ್ಲಾ ಕಾರ್ಯಗಳು ಸಹ ಪ್ರಶಂಸನೀಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಸಹ ಇದಕ್ಕೆ ಮಾದರಿಯಾದ ಈ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಮುಂದುವರಿಸಿಕೊಂಡು ಹೋಗುವ ಪ್ರಯತ್ನದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಶಶಿಕಲಾ. ರವಿಕುಮಾರ್. ಗೌರಮ್ಮ. ಸಂಗಪ್ಪ. ಸಾವಿತ್ರಿ ಜಗದೀಶ್. ತಾರಾ ಮಹೇಶ್.ಹಾಗೂ  ಪಂಚಾಯಿತಿ ಕಾರ್ಯದರ್ಶಿ ರಮೇಶ್ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಸರ್ವರನ್ನು ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎ.ಬಿ ಕೃಷ್ಣಯ್ಯ ಸ್ವಾಗತಿಸಿದರು ಕಾರ್ಯಕ್ರಮವನ್ನು ತುಂಬಾ ಉತ್ತಮವಾಗಿ ಗಾಳಿಗುಡ್ಡ ಶಾಲೆಯ ಶಿಕ್ಷಕರಾದ  ಹರೀಶ್ ರೈ ಅವರು ನಿರೂಪಿಸಿ ವಂದನಾರ್ಪಣೆ ನೆರವೇರಿಸಿದರು

Related posts

ಬೆಳಗೋಡು ಸರಕಾರಿ ಶಾಲೆಯಲ್ಲಿ ಇಂಗ್ಲಿಷ್ ಫೆಸ್ಟ್

Bimba Prakashana

ಜೆಡಿಎಸ್ ಸದಸ್ಯತ್ವ ಸಮಾವೇಶ

Bimba Prakashana

ರಾಷ್ಟೀಯ ಹೆದ್ದಾರಿ ರಸ್ತೆ ಪರಿಶೀಲನೆ ಮಾಡಿದ ಶಾಸಕ ಸಿಮೆಂಟ್ ಮಂಜುನಾಥ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More