Blog

ಮರ್ಕ ಹಳ್ಳಿಯಲ್ಲಿ ಮನೆ ಮೇಲೆ ದಾಳಿ ಮಾಡಿದ ಕಾಡಾನೆ

ತಡರಾತ್ರಿ   ಮರ್ಕಹಳ್ಳಿಯಲ್ಲಿ ಕಾಡಾನೆ ಮನೆಯ ಮೇಲೆ ದಾಳಿಮಾಡಿ ಹಂಚು ಹಾಗೂ ಮನೆಗೆ ಹಾನಿ ಮಾಡಿದೆ.

ಸಕಲೇಶಪುರ : ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಅತಿಯಾಗುತ್ತಿದ್ದು, ಪ್ರತಿನಿತ್ಯ ರೈತರು ಬೆಳೆದ ಗದ್ದೆ, ಕಾಫಿ ತೋಟಕ್ಕೆ ಲಗ್ಗೆ ಇಡುವ  ಕಾಡನೆಗಳು ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ . ಇದರಿಂದ ರೈತರು ತಾವು ಬೆಳೆದ ಬೆಳೆಗಳ ಜೊತೆಗೆ ಪ್ರಾಣವನ್ನು ರಕ್ಷಿಸಿಕೊಳ್ಳಲು ಪ್ರತಿನಿತ್ಯ ಹರ ಸಾಹಸ   ಪಡುವಂತಾಗಿದೆ.

ಮರ್ಕಹಳ್ಳಿಯ ಗೌರಮ್ಮ ಹರೀಶ್ ಅವರ ಮನೆಗೆ ನಿ ನ್ನೆ ರಾತ್ರಿ ಕಾಡನೆ ದಾಳಿ ಮಾಡಿ ಮನೆಯ ಹಂಚಿನ ಗಳಾಗಳನ್ನು ಎಳೆದು  ಹಂಚು ಗಳಿಗೆ ಹಾನಿ ಉಂಟುಮಾಡಿದೆ. ಇದರಿಂದ ಮನೆಯವರು  ರಾತ್ರಿ ಪೂರ್ತಿ ನಿದ್ದೆಮಾಡದೆ  ಹೆದರಿಕೆಯಿಂದ  ಮನೆಯಲ್ಲಿ  ಕೂರುವಂತಹ ಪ್ರಸಂಗ ನಡೆದಿದೆ.

ಪ್ರತಿನಿತ್ಯ ಕಾಡಾನೆಗಳ ಹಾವಳಿಗೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಇ ಟಿ ಎಸ್ ಸಿಬ್ಬಂದಿಗಳಿಗೆ ಸರಿಯಾದ ವಾಹನ ಹಾಗೂ ಪಟಾಕಿಗಳನ್ನು ಕೊಡದೆ ಕಾಡಾನೆಗಳನ್ನು ಕಾಡಿನತ್ತ  ಓಡಿಸಲು  ಸಾಧ್ಯವಾಗುತ್ತಿಲ್ಲ. ಕೂಡಲೇ ಇದರ ಬಗ್ಗೆ ಅರಣ್ಯ ಅಧಿಕಾರಿಗಳು ಕ್ರಮ ಕೊಳ್ಳಬೇಕೆಂದು ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಅಧ್ಯಕ್ಷರಾದ ದರ್ಶನ್ ಮರ್ಜನಹಳ್ಳಿ ಆಗ್ರಹಿಸಿದ್ದಾರೆ.

Related posts

ಇಂದು ಮಳಲಿಯಲ್ಲಿ ಚಿತ್ರಕಲಾ ಸ್ಪರ್ಧೆ

Bimba Prakashana

ನಾಳೆ ಶನಿವಾರ ರಾಧಮ್ಮ ಜನ ಸ್ಪಂದನೆಯಿಂದ ಪ್ರತಿಭಾ ಪುರಸ್ಕಾರ

Bimba Prakashana

ಬೈಕ್ ಅಪಘಾತದಲ್ಲಿ ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More