Blog

ಹಾನ್ ಬಾಳು ಚಿಕ್ಕಿ – 3 ನೇ ದಿನದ ವಿಶೇಷ

ಹಾನ್ ಬಾಳ್ ಚಿಕ್ಕಿ- ದೀಪಾವಳಿ ಚಿಕ್ಕಿ ಹಬ್ಬ-3ನೆೇ ದಿನದ ವಿಶೇಷತೆ*.
ಸ್ಥಳ : ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ + ಮಳಿಗೆ, ಗುಲಗಳಲೆ, ಸಕಲೇಶಪುರ
ದಿನಾಂಕ : 17-27 ಅಕ್ಟೋಬರ್ 2025.

ವಿಶೇಷ ಆಕರ್ಷಣೆ :
ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಚಿತ ಮದರಂಗಿ (ಮೆಹೆಂದಿ).

ಎಲ್ಲಾ ಉತ್ಪನ್ನಗಳ ಮೇಲೆ 15% ನೇರ ದರ ಕಡಿತ ಮಾರಾಟ.

ಇಂದು ಬೆಣ್ಣೆ ಚಕ್ಕುಲಿಗೆ ಅತೀ ಹೆಚ್ಚಿನ ಬೇಡಿಕೆ.

ದಿನ 3 : 19/10/25 ಭಾನುವಾರ:
ಆರೋಗ್ಯಕರ ಆಹಾರವಸ್ತುಗಳ ತಯಾರಕ ಸಂಸ್ಥೆ ಹಾನ್ ಬಾಳ್ ಚಿಕ್ಕಿ ತನ್ನ ದೀಪಾವಳಿ ಚಿಕ್ಕಿ ಹಬ್ಬದ 2 ನೆೇ ದಿನವನ್ನು ನಿನ್ನೆ ಅಭೂತಪೂರ್ವ ಯಶಸ್ಸಿನೊಂದಿಗೆ ಸಂಪನ್ನಗೊಳಿಸಿದೆ . ವಾರಾಂತ್ಯದಲ್ಲಿ ಪುಣ್ಯ ಕ್ಷೇತ್ರ ದರ್ಶನ, ಪ್ರವಾಸೀ ತಾಣಗಳ ಭೇಟಿ, ದೀಪಾವಳಿ ಮತ್ತು ರಜಾ ದಿನಗಳಿಗೆ ತಮ್ಮ ತವರೂರಿಗೆ ಪ್ರಯಾಣಿಸುತ್ತಿರುವ ಹೆದ್ದಾರಿ ಗ್ರಾಹಕರಿಗೆ ಮತ್ತು ಸ್ಥಳೀಯರಿಗೆ ಗುಲಗಳಲೆಯಲ್ಲಿರುವ ಹಾನ್ ಬಾಳ್ ಚಿಕ್ಕಿ ಒಂದು ನೆಚ್ಚಿನ ತಾಣವಾಗಿದೆ.

3ನೆೇ ದಿನವಾದ ಇಂದು ಬೆಣ್ಣೆ ಚಕ್ಕುಲಿಗೆ ಅತೀ ಹೆಚ್ಚಿನ ಬೇಡಿಕೆ*. ಗ್ರಾಹಕರ ಕಣ್ಣುಮುಂದೆಯೇ ಆಧುನಿಕ ಯಂತ್ರಗಳಲ್ಲಿ ತಯಾರಾಗುವ ಈ ಬೆಣ್ಣೆ ಚಕ್ಕುಲಿಗಳ ಸ್ಯಾಂಪಲ್ ಬಿಸಿ ಬಿಸಿಯಾಗಿ ಸವಿಯುವುದೇ ಒಂದು ಸಂಭ್ರಮವಾಗಿ ಮಾರ್ಪಟ್ಟಿದೆ. 200ಗ್ರಾಂ ಗಳ ಪ್ಯಾಕ್ ನಲ್ಲಿ ಮಾರಾಟವಾಗುವ, ಈ ಹೆಸರಿಗೆ ತಕ್ಕಂತೆ ಬೆಣ್ಣೆಯಂತೆ ಮೃದುವಾಗಿ ತಯಾರಾಗುವ ಈ ಚಕ್ಕುಲಿಗಳು ಸಾಂಪ್ರದಾಯಿಕ ರೀತಿಯಲ್ಲಿ ಅಕ್ಕಿ , ಉದ್ದಿನ ಬೇಳೆ , ಪುಟಾಣಿ , ನಂದಿನಿ ಬೆಣ್ಣೆಯನ್ನೂ ಒಳಗೊಂಡಂತೆ ಅತ್ಯುತ್ತಮ ಕಚ್ಚಾವಸ್ತುಗಳನ್ನು ಬಳಸಿ ತಯಾರಿಸಲಾಗುತ್ತದೆ . ಗ್ರಾಹಕರಿಗೆ ಆರೋಗ್ಯಕರ ಆಹಾರವನ್ನು ಪೂರೈಸುವ ಸಲುವಾಗಿ ಚಕ್ಕುಲಿಗಳನ್ನು ಕರಿಯುವ ಎಣ್ಣೆಯ ಗುಣಮಟ್ಟವನ್ನು ನಿಗದಿತ ಅವಧಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಟಿ ಪಿ ಎಂ ಟೆಸ್ಟರ್ ಗಳಲ್ಲಿ ಪರೀಕ್ಷಿಸಿ ಗ್ರಾಹಕರಿಗೆ ತಿಳಿಸಲು ಫಲಕಗಳಲ್ಲಿ ಪ್ರದರ್ಶಿಸಲಾಗುತ್ತದೆ. ಗ್ರಾಹಕರಿಗೆ ತಮ್ಮ ಮನೆಗಳಲ್ಲಿಯೇ ಬೆಣ್ಣೆ ಚಕ್ಕುಲಿ ತಯಾರಿಸಲು ಉತ್ತೇಜಿಸುವ ಸಲುವಾಗಿ “ಬೆಣ್ಣೆ ಚಕ್ಕುಲಿ ರೆಡಿ ಮಿಕ್ಸ್ ” ನ್ನು ಗ್ರಾಹಕರು ಖರೀದಿಸಬಹುದು .

Related posts

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ

Bimba Prakashana

ಬಸ್ ನಲ್ಲೆ ಉಳಿದು ಹೋಗಿದ್ದ ಮಗು ಮರಳಿ ತಾಯಿಗೆ

Bimba Prakashana

ಹೋಬಳಿ ಮಟ್ಟದ ಕ್ರೀಡೆಯಲ್ಲಿ ಬಾಳ್ಳುಪೇಟೆ ವಿದ್ಯಾರ್ಥಿಗಳ ಸಾಧನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More