Blog

ಬೆಟ್ಟದ ಭೈರವೇಶ್ವರ ದೇವಾಲಯದ ರಕ್ಷಣೆಗೆ ಕ್ರಮ ಕೈ ಗೊಳ್ಳಿ



ಸಕಲೇಶಪುರ ತಾಲ್ಲೂಕಿನ ಭಕ್ತಿಯ ಮಹಾಸ್ಥಾನವಾದ ಬೆಟ್ಟದ ಭೈರವೇಶ್ವರ ದೇವಾಲಯ ಮತ್ತು ಅದರ ಬಳಿಯ ಐತಿಹಾಸಿಕ ಚೌಡಿಗುಡಿ ರಕ್ಷಣೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಮನವಿ ಸಲ್ಲಿಸಿದೆ.

ಇತ್ತೀಚೆಗೆ ಯಾರೋ ಚೌಡಿಗುಡಿಯ ಕಲ್ಲನ್ನು ಕೇಡಿನ ಉದ್ದೇಶದಿಂದ ತೆಗೆದುಕೊಂಡು ಹೋಗಿರುವ ಘಟನೆ ಭಕ್ತರಲ್ಲಿ ಕಳವಳ ಹುಟ್ಟಿಸಿದೆ. ಪ್ರವಾಸಿಗರ ಸಂಚಾರ ಹೆಚ್ಚಾಗಿರುವ ಸಂದರ್ಭದಲ್ಲೂ ಭದ್ರತಾ ವ್ಯವಸ್ಥೆಗಳ ಕೊರತೆ ದೇವಾಲಯದ ಗೌರವಕ್ಕೆ ಅಪಾಯ ಎಬ್ಬಿಸಿದೆ.

ವೇದಿಕೆಯ ಅಧ್ಯಕ್ಷರಾದ  ಗಗನ್ ಗೌಡ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ ಮುಖ್ಯವಾಗಿ
• ದೇವಾಲಯಕ್ಕೆ ಭದ್ರತಾ ಗಾರ್ಡ್ ನೇಮಕ
• ಗೇಟ್ ವ್ಯವಸ್ಥೆ
• ಚೌಡಿಗುಡಿ ಪ್ರದೇಶಕ್ಕೆ ನಿಗಾವ್ಯವಸ್ಥೆ
• ಸೌಕರ್ಯಗಳ ಸುಧಾರಣೆ ಸೇರಿದಂತೆ ಶೌಚಾಲಯ ನಿರ್ಮಾಣ
ಎನ್ನುವ ಬೇಡಿಕೆಗಳನ್ನೊಳಗೊಂಡಿದೆ.

ತಾಲೂಕು ತಹಸೀಲ್ದಾರ್ ರವರು ಈ ಮನವಿಯನ್ನು ಸ್ವೀಕರಿಸಿ, ಭಕ್ತರ ಭಾವನೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಮಿಕ ಘಟಕದ ಅಧ್ಯಕ್ಷರು ಸಂಗ್ರಾಮ್ ಹೊಡ್ಚಳ್ಳಿ, ನಗರ ಘಟಕದ ಅಧ್ಯಕ್ಷರು ಪ್ರಜ್ವಲ್,ಸಚಿನ್ ಕಸಬಾ ಹೋಬಳಿ ಅಧ್ಯಕ್ಷರು ಸಿದ್ದಂತ ಪಟೇಲ್, ತಾಲ್ಲೂಕು ಕಾರ್ಯದರ್ಶಿ ನವೀನ ನೆಲಗಳ್ಳಿ, ಯುವ ಘಟಕದ ಉಪಾಧ್ಯಕ್ಷ ರತನ್, ರೈತ ಘಟಕದ ಉಪಾಧ್ಯಕ್ಷರು ಸ್ವಾಗತ್ ಹಾಗೂ ಉಪಾಧ್ಯಕ್ಷ ಸುಧೀರ್, ವರುಣ ಸೇರಿದಂತೆ ಅನೇಕ ವೇದಿಕೆ ಕಾರ್ಯಕರ್ತರು ಹಾಜರಿದ್ದರು.

Related posts

ಸಕಲೇಶಪುರ ಕೆಂಪು ಹೊಳೆ ಬಳಿ ಭೀಕರ ಅಪಘಾತ

Bimba Prakashana

ಜಿಲ್ಲಾಧಿಕಾರಿ ಅತ್ಯುತ್ತಮ ಕಂದಾಯ ಅಧಿಕಾರಿ

Bimba Prakashana

ಬೈಕ್ ಅಪಘಾತದಲ್ಲಿ ಮೃತ ಪಟ್ಟ ರಘು – ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಿಮೆಂಟ್ ಮಂಜುನಾಥ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More