Blog

ಸಂಪೂರ್ಣ ಶಿಥಿಲವಾದ ಆಲೂರು ಪಾಳ್ಯ ನಾಡ ಕಚೇರಿ

ವಿಶೇಷ ವರದಿ : ನವೀನ್ ಬೈರಾಪುರ

ಜಿಟಿ ಜಿಟಿ ಮಳೆಗೆ 82 ಹಳ್ಳಿಗಳನ್ನ ಒಳಗೊಂಡಿರುವ ಪಾಳ್ಯ ನಾಡಕಚೇರಿ ಸಂಪೂರ್ಣ ಶಿಥಿಲ ವ್ಯವಸ್ಥೆ


  ~ಆಲೂರು:
ತಾಲೂಕಿನ ಪಾಳ್ಯ ನಾಡಕಚೇರಿ  ಜಿಟಿ ಜಿಟಿ ಮಳೆಗೆ ಸಂಪೂರ್ಣ ಕಟ್ಟಡ ಸೋರುತ್ತಿದ್ದು, ಶಿಥಿಲಾವಸ್ಥೆಯಲ್ಲಿದ್ದು ಬೀಳುವ ಹಂತದಲ್ಲಿದೆ. ಅಲ್ಲಿಯೇ ಕಚೇರಿ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

1943ರಲ್ಲಿ ಸ್ವಾತಂತ್ರ ಪೂರ್ವದ ಕಟ್ಟಡ ಇದಾಗಿದ್ದು, ಮೂರು ಕೊಠಡಿಗಳು ಇವೆ. ಮೂರು ಕೊಠಡಿಗಳು ಸಂಪೂರ್ಣವಾಗಿ ಸೋರುತ್ತಿದ್ದು, ಕಿಟಕಿಗೆ ಮುಚ್ಚಲು ವ್ಯವಸ್ಥೆ ಇಲ್ಲ. ಕಟ್ಟಡದ ಛಾವಣಿ ಹಂಚುಗಳಿಂದ ಇದ್ದು ಬೀಳುವ ಸ್ಥಿತಿಯಲ್ಲಿ ಇರುವುದರಿಂದ  ಕೋಲುಗಳನ್ನು ರಾಡುಗಳನ್ನು ಕೊಟ್ಟಿದ್ದಾರೆ . ಒಂದು ಕೊಠಡಿ ಮಾತ್ರ ಸೋರುತ್ತಿಲ್ಲ. ಅದರಲ್ಲಿಯೇ ಎಲ್ಲ ದಾಖಲೆಗಳನ್ನು  ಸಂರಕ್ಷಿಸಲಾಗಿದೆ.ದಾಖಲೆಗಳು ಹಾಳಾಗುವ ಭೀತಿ. ಸಂಪೂರ್ಣ ಹಳೆಯದಾದ ಕಟ್ಟಡದ ದುರಸ್ತಿಗೆ  ಸರ್ಕಾರ ಮುಂದಾಗಿಲ್ಲ


ಈ ಕಟ್ಟಡ ಆಲೂರು ತಾಲೂಕು ಪಾಳ್ಯ ಹೋಬಳಿಯ ಪಾಳ್ಯ ಗ್ರಾಮ ಪಂಚಾಯಿತಿಗೆ  ಸೇರಿದ್ದು, ಹೋಬಳಿಗೆ ಸಂಬಂಧಿಸಿದ  ಸಾರ್ವಜನಿಕರ ಆಸ್ತಿಯ ಎಲ್ಲ ದಾಖಲೆಗಳು ಇದರಲ್ಲಿವೆ. ಕಚೇರಿಯಲ್ಲಿ ಎಂಟು ಗ್ರಾಮಾಡಳಿತ ಅಧಿಕಾರಿಗಳು,ಗ್ರಾಮ ಸಹಾಯಕರು ರಾಜಸ್ವನಿರೀಕ್ಷಕರು, ಉಪ ತಹಸಿಲ್ದಾರ್ ,ಒಬ್ಬರು ಕಾರ್ಯ ನಿರ್ವಾಹಕರು    ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರಿಗೆ ಕೂರುವುದಕ್ಕೆ ಸ್ಥಳಗಳೆ ಇಲ್ಲ ತಮ್ಮ ಕೆಲಸಕ್ಕೆ ಬಂದ ಸಾರ್ವಜನಿಕರು ಗ್ರಾಮ ಆಡಳಿತ ಅಧಿಕಾರಿಗಳನ್ನು ಹುಡುಕಿಕೊಂಡು ಹೋಗುವ ಸ್ಥಿತಿ.

. ಸರ್ಕಾರ ಕಟ್ಟಡ ದುರಸ್ತಿ ಮಾಡ‌ದಿರುವುದರಿಂದ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಹಾಗೂ ಕಟ್ಟಡದ ಸುತ್ತಮುತ್ತಲು ಗಿಡ ಗಂಟೆಗಳು ಬೆಳೆದು ಹಾವು ಹಲ್ಲಿಗಳು ವಾಸ ಮಾಡಿ ಕಟ್ಟಡದ ಒಳಗೆ ಬಂದು ಅಧಿಕಾರಿಗಳಿಗೆ ತೊಂದರೆ ಕೊಡುತ್ತಿವೆ. ಮನೆಯಲ್ಲಿರುವ ದನದ ಕೊಟ್ಟಿಗೆ ಎಷ್ಟೋ ಸ್ವಚ್ಛವಾಗಿದೆ ಎನ್ನಬಹುದು.
ಹಲವು ಬಾರಿ ಸಾರ್ವಜನಿಕರು,  ಅಧಿಕಾರಿಗಳಿಗೆ ತಿಳಿಸಿದರೂ ಗಮನ ಹರಿಸಿರುವುದಿಲ್ಲ. ಅಲ್ಲಿನ ದಾಖಲೆಗಳು ಹಾಳಾದರೆ ಏನು ಮಾಡುವುದು ಎಂಬುದು ಸಾರ್ವಜನಿಕರ ಪ್ರಶ್ನೆ. ಸಾರ್ವಜನಿಕರು ತಮ್ಮ ಕೆಲಸಕ್ಕೆ ಕಚೇರಿಗೆ ಬಂದರೆ ಅವರಿಗೆ ಕೂರಲು ನಿಲ್ಲಲು ಕೂಡ ವ್ಯವಸ್ಥೆಗಳು ಇರುವುದಿಲ್ಲ ಎಂದರು. ಕಾಮತೀ ಗ್ರಾಮದ ನಿವಾಸಿಯಾದ ಅಶ್ವತ್ ಮಾತನಾಡಿ ಸರ್ಕಾರವು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬುದಾಗಿ ಈ ಆಫೀಸ್ ತೆರೆದಿದ್ದು ನಾಡಕಚೇರಿಗೆ ಯಾವುದೇ ಕಂಪ್ಯೂಟರ್ ಗಳನ್ನು ನೀಡದೆ ಅಧಿಕಾರಿಗಳು ತಿಂಗಳುಗಟ್ಟಲೆ ಫೈಲ್ಗಳನ್ನು ತಮ್ಮ ಟೇಬಲ್ ಗಳಲ್ಲಿ ಇಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿ ರೈತರು ಹಾಗೂ ಸಾರ್ವಜನಿಕರು ದಿನ ನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಈ ನಾಡ ಕಚೇರಿಯ ಅಭಿವೃದ್ಧಿಗೆ ಶ್ರಮಿಸಬೇಕೆಂಬುದು ಸಾರ್ವಜನಿಕರ ಒತ್ತಾಯ ಆಗಿದೆ.

Related posts

ವಿಶ್ವ ಪೌಷ್ಟಿಕ ಆಹಾರ ಸಪ್ತಾಹ

Bimba Prakashana

ಯಸಳೂರು ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Bimba Prakashana

ಮಮತೆಯ ತೊಟ್ಟಿಲು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More