ರಾತ್ರಿ ಗಸ್ತು ತಿರುಗುವ ವೇಳೆ ಆನೆಮಹಲ್ ನ ಬೆಂಗಳೂರು-ಮಂಗಳೂರು NH-75 ರಸ್ತೆಯಲ್ಲಿ ಗಾಡಿ ನಂ – KA-12 C 3545 ಅಕ್ರಮವಾಗಿ ಸಾಗಾಟವಾಗುತ್ತಿದ್ದ ಒಂದು ಲೋಡ್ ಕಾಡು ಜಾತಿಯ ಬಿಲೇಟ್ಸ್ ಅನ್ನು ದಾಳಿ ನಡೆಸಿ ಇಲಾಖೆ ಪರ ಅಮಾನತ್ತುಪಡಿಸಿಕೊಂಡು ಅರಣ್ಯ ಮೊಕದ್ದಮೆ ದಾಖಲಿಸಲಾಯಿತು.
ಕಾರ್ಯಾಚರಣೆಯಲ್ಲಿ ಸಕಲೇಶಪುರ ವಲಯ ಅರಣ್ಯ ಅಧಿಕಾರಿಗಳಾದ ಎಚ್ ಆರ್ ಹೇಮಂತ್ ಕುಮಾರ್ ಉಪವಲಯ ಅರಣ್ಯ ಅಧಿಕಾರಿಗಳಾದ ಅರ್ಜುನ್,ಮಂಜುನಾಥ್ ಅರಣ್ಯ ಪಾಲಕರಾದ ಲೋಕೇಶ್ ,ಉಮೇಶ್ ,ದೇವರಾಜ್ ಮತ್ತು ಅರಣ್ಯ ವೀಕ್ಷಕರಾದ ಲೋಕೇಶ್ ಹಾಗೂ ವಾಹನ ಚಾಲಕ ಆಶ್ರಯ ಭಾಗಿಯಾಗಿದ್ದರು.
