Blog

ಆಲೂರುನಲ್ಲಿ ರಕ್ತದಾನ ಶಿಬಿರ

ಲಯನ್ಸ್ ಸೇವಾ ಸಂಸ್ಥೆ ಹಲವು ಸೇವಾ ಕಾರ್ಯಕ್ರಮಗಳ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ಆಲೂರು ಲಯನ್ಸ್ ಸೇವಾ ಸಂಸ್ಥೆ ಅಧ್ಯಕ್ಷ ಬಿ. ಮಂಜೇಗೌಡ ತಿಳಿಸಿದರು.

ಆಲೂರಿನ ಎಸ್.ಬಿ.ಐ. ಪಕ್ಕದಲ್ಲಿ ಲಯನ್ಸ್ ಸೇವಾ ಸಂಸ್ಥೆ, ಹಾಸನ ಅಮ್ಮ ಕಣ್ಣಿನ ಆಸ್ಪತ್ರೆ ಮತ್ತು ಹಾಸನ ವಿ ಕೇರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಲಯನ್ಸ್‌ ಸೇವಾ ಸಂಸ್ಥೆ 2014 ರಿಂದ ಚೇತನ್‌ಗುರೂಜಿ ರವರ ಮಾರ್ಗದರ್ಶನದಲ್ಲಿ ಯೋಗ, ರಕ್ತದಾನ ಶಿಬಿರ, ಉಚಿತ ಕಣ್ಣು, ದಂತ ಪರೀಕ್ಷೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈವರೆಗೆ ಸುಮಾರು 4000 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಸಂಸ್ಥೆ ವತಿಯಿಂದ ಬಡವರಿಗೆ ಆಹಾರ ಕಿಟ್, ಸೂರಿಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಧನ ಸಹಾಯ, ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಲಾಗಿದೆ ಎಂದರು. ಲಯನ್ಸ್ ನಿರ್ದೇಶಕ ರಘುಪಾಳ್ಯ ರವರು ಮಾತನಾಡಿ, ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಪ್ರತಿ ವರ್ಷ ಜನಸಾಮಾನ್ಯರಿಗೆ ಅವಶ್ಯಕವಿರುವ ಬಸ್ ತಂಗುದಾಣ ಸೇರಿದಂತೆ ಹಲವು ಕೆಲಸಗಳನ್ನು ಸತತವಾಗಿ ಮಾಡಲಾಗುತ್ತಿದೆ. ನಾನು ಈವರೆಗೆ 53 ಬಾರಿ ರಕ್ತದಾನ ಮಾಡಿದ್ದೇನೆ. ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಸಬಹುದಲ್ಲಿ ಆರೋಗ್ಯವಂತರಾಗಿ ಬದುಕಬಹುದು ಎಂದರು.ಚೇತನ್ ಗುರೂಜಿಯವರು ಮಾತನಾಡಿ, ನಾನು ಜಿಲ್ಲೆಯ ಹಲವೆಡೆ ಯೋಗ ಶಿಬಿರಗಳನ್ನು ಏರ್ಪಡಿಸುವ ಸಂದರ್ಭದಲ್ಲಿ ರಕ್ತದಾನ, ಉಚಿತ ನೇತ್ರ, ದಂತ ಚಿಕಿತ್ಸೆ ಶಿಬಿರಗಳನ್ನು ಸಹ ಏರ್ಪಡಿಸುತ್ತೇನೆ. ಈವರೆಗೆ ಸಾವಿರಾರು ಜನ ರಕ್ತದಾನ ಮಾಡಿದ್ದಾರೆ. ಇಂತಹ ಶಿಬಿರಗಳನ್ನು ಏರ್ಪಡಿಸುವುದರಿಂದ ಮನುಷ್ಯ ಔಷಧಿ
ರಹಿತವಾಗಿ ಬದುಕಬಹುದು ಎಂದರು. ಶಿಬಿರದಲ್ಲಿ 55 ಜನರು ರಕ್ತದಾನ ಮಾಡಿದರು.

60 ಜನರಿಗೆ ದಂತ ತಪಾಸಣೆ, 150 ಜನರಿಗೆ ಕಣ್ಣು ತಪಾಸಣೆ ಮಾಡಿ, 60 ಜನರಿಗೆ ಕನ್ನಡಕ ವಿತರಣೆ ಮತ್ತು, 16 ಜನರಿಗೆ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮಾಡಿ ಕನ್ನಡಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಸೇವಾ ಸಂಸ್ಥೆ ಕಾರ್ಯದರ್ಶಿ ಶಾಂತಕುಮಾರ್, ಖಜಾಂಚಿ ಕಟ್ಟೆಗದ್ದೆ ನಾಗರಾಜ್, ಗೌರವಾಧ್ಯಕ್ಷ ರೇಣುಕಪ್ರಸಾದ್, ಡಾ. ಹರ್ಷ, ಗೃಹಲಕ್ಷ್ಮಿ ಮಾಲೀಕ ಟಿ. ಆರ್. ಆನಂದ್, ಇ. ವಿ. ಗಿರೀಶ್, ಡಿ. ಜೆ. ನವೀನ್, ಬಿ. ಆರ್. ಪ್ರವೀಣ್, ರಾಮಚಂದ್ರ, ಚಂದ್ರಶೇಖರ್ ಹೊಸೂರು, ಚಂದ್ರು, ಮಂಜುನಾಥ್, ನೂತನ್, ಪರಮೇಶ್, ಪ್ರಭು, ಕುಲದೀಪ್, ನಟರಾಜ್, ರಘುಪಾಳ್ಯ, ಇನ್ನಿತರರು ಇದ್ದರು.

Related posts

Wanted

Bimba Prakashana

ಡಾ. ಬಿ ಆರ್. ಅಂಬೇಡ್ಕರ್ ವಸತಿ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

Bimba Prakashana

ಜೆಡಿಎಸ್ ಸದಸ್ಯತ್ವ ಸಮಾವೇಶ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More