Blog

ಭೀಮ ಕೊರೆಂಗಾವ್ ವಿಜಯೋತ್ಸವ

ವರದಿ : ನಾಗೇಶ್ ಎಂ ಎಚ್ ಮಾಗೇರಿ.

ಸಕಲೇಶಪುರದಲ್ಲಿ ನಡೆದ 208ನೇ  ಭೀಮ ಕೋರೆಂಗಾವ್ ವಿಜಯೋತ್ಸವ(ಸಕಲೇಶಪುರದಲ್ಲಿ 9ನೇ ಬಾರಿಗೆ).

ಸಕಲೇಶಪುರ ರಾಜ ಬೀದಿ ಎಲ್ಲಿ ನೋಡಿದರು ನೀಲಿಮಯ.

ಸಕಲೇಶಪುರದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ  ಭೀಮ ಕೋರೆಂಗಾವ್ ವಿಜಯೋತ್ಸವ ಸಮಿತಿ ಹಾಗೂ ಪಬ್ಲಿಕ್ ಚಾರಿಟೇಬಲ್  ಟ್ರಸ್ಟ್(ರಿ)  ವತಿಯಿಂದ 9ನೇ  ಭೀಮ ಕೋರೆಂಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಲಕ್ಷ್ಮಣ ಕೀರ್ತಿಯವರು ವಹಿಸಿದ್ದರು.

ಮೊದಲಿಗೆ ಸಕಲೇಶಪುರದಲ್ಲಿ ಭೀಮ ಕೋರೆಂಗಾವ್  ವೇದಿಕೆ ಮೇಲೆ  ಬೌದ್ಧ ಬಿಕ್ಕು  *ಸುಗಥ ಪಾಲ* ಭಂತೇಜಿ ರವರಿಂದ ಧಮ್ಮ ದೀಕ್ಷಾ  ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಈ ಸಂದರ್ಭದಲ್ಲಿ ಬೌದ್ದ ಉಪಾಸಕ/ಉಪಾಸಕಿ ಬಂಧುಗಳಿಗೆ ಪಂಚಶೀಲವನ್ನು ಬೋಧಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಕ್ಷ್ಮಣ್ ಕೀರ್ತಿ ಹಾಗೂ ಲಕ್ಕಪ್ಪ ಗೊದ್ದು, ಜಯವರ್ಧನ್ ಮತ್ತು  ಟ್ರಸ್ಟಿನ ಅಧ್ಯಕ್ಷರಾದ ರಾಜಶೇಖರ್,
ನಿರ್ದೇಶಕರಾದ ಎನ್.ಆರ್ ಸ್ಟುಡಿಯೋ ನಾಗೇಶ್,
ಸಂದೀಪ್ ಸಿಡಗಳಲೆ,  ಮುಖಂಡರಾದ ಬೈಕೆರೆ ದೇವರಾಜ್, ಪ್ರಶಾಂತ್ ಕಲ್ಗಣೆ ಮುಂತಾದವರು ಭಾಗವಹಿಸಿದ್ದರು.

ಕಾರ್ಯಕ್ರಮ ಮುಂದುವರೆದಂತೆ
ಕೋರೆಂಗಾವ್ ವಿಜಯೋತ್ಸವದ ಮಾದರಿ ರಥವನ್ನು ಬೌದ್ಧ ಭಿಕ್ಕು  ಸುಗಥ ಪಾಲ ಭಂತೆಜೀ ಮತ್ತು ಹಿರಿಯರ ಸಮ್ಮುಖದಲ್ಲಿ ಚಾಲನೆ ಮಾಡಲಾಯಿತು.

ಪಟ್ಟಣದ ರಾಜ ಬೀದಿಯಲ್ಲಿ ಕೋರೆಂಗಾವ್ ವಿಜಯೋತ್ಸವದ ಮಾದರಿ ರಥವನ್ನು ಎಳೆಯುವುದರೊಂದಿಗೆ  ಸಕಲೇಶಪುರದ ಮೂಲೆ ಮೂಲೆಗಳಿಂದ ಬಂದಿದ್ದ ಸಾವಿರಾರು  ಜನರು  ಡಾ|| ಬಿ.ಆರ್ ಅಂಬೇಡ್ಕರ್ ರವರ ಹಾಡುಗಳಿಗೆ ಡಿಜೆ ಮತ್ತು ಡೊಳ್ಳು ಕುಣಿತಗಳ ಜೊತೆ  ಪಟಾಕಿ ಹೊಡೆದು ಕುಣಿದು ಕುಪ್ಪಳಿಸಿದರು.

ಈ ಸಂದರ್ಭದಲ್ಲಿ ಸಕಲೇಶಪುರದ ಶಾಸಕರಾದ ಸಿಮೆಂಟ್ ಮಂಜುರವರು ಸಹ ಅಭಿಮಾನಿಗಳ ಜೊತೆ ಕುಣಿದು ಕುಪ್ಪಳಿಸಿದರು. 

ಸಕಲೇಶಪುರ ವಿಧಾನಸಭಾ ಕ್ಷೇತ್ರದ
ಪರಾಜಿತ ಅಭ್ಯರ್ಥಿ ಮುರುಳಿ ಮೋಹನ್  ರವರು, ಯಡೇಹಳ್ಳಿ ಆರ್.ಮಂಜುನಾಥ್‍ರವರು , ಡಿ.ಸಿ ಸಣ್ಣಸ್ವಾಮಿರವರು  ಸಹ ಭಾಗಿಯಾಗಿದ್ದರು.

ಪ.ಜಾತಿ ಮತ್ತು ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೌಕರರು ಅಚ್ಚು ಕಟ್ಟಿನ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು.

ನಂತರ ಸಭಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾದ
ಡಾ “ಅನುಪಮಾ, ಸಾಹಿತಿಗಳು ಕವಿಗಳಾದ ಸುಬ್ಬು ಹೊಲೆಯಾರ್,
ವಕೀಲರಾದ ಸುಧೀರ್ ಕುಮಾರ್ ಮುರೋಳ್ಳಿ,
ಯಡೇಹಳ್ಳಿ ಆರ್.ಮಂಜುನಾಥ್,
ಭೀಮ ಕೋರೆಂಗಾವ್  ವಿಜಯೋತ್ಸವದ ಬಗ್ಗೆ ಜನರಿಗೆ ಮಾಹಿತಿ ನೀಡಿದರು.

*ಜನರಿಗೆ ಗೊಂದಲವಾಗಿದ್ದು ಸಹಜ*. 

ಸಕಲೇಶಪುರದಲ್ಲಿ ಇಂದು ನಡೆಯುತ್ತಿರುವುದು ಸಮುದಾಯದ ಭೀಮ ಕೋರೆಂಗಾವ್ ವಿಜಯೋತ್ಸವ  ಕಾರ್ಯಕ್ರಮನ ಅಥವಾ  ಕಾಂಗ್ರೆಸ್ ಸಮಾವೇಶ ನಡೆಯಿತಾ??

ಎಲ್ಲಿ ನೋಡಿದರೂ ಕಾಂಗ್ರೆಸ್ ಮುಖಂಡರ  ಪೋಸ್ಟರ್ ಬ್ಯಾನರ್ಗಳು ಕಾಣಿಸಿದ್ದು ಜನರಿಗೆ ಗೊಂದಲ ಮೂಡಿಸಿದೆ.

ಜೊತೆಗೆ ಮುಖ್ಯ ಅತಿಥಿಗಳ  ವೇದಿಕೆಯಲ್ಲಿ ಕೇವಲ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯಾದ ಮುರಳಿ ಮೋಹನ್ ರವರು  ಇದ್ದು   ಶಾಸಕರು ವೇದಿಕೆಯಲ್ಲಿ
ಇಲ್ಲದೆ ಇದ್ದದ್ದು  ಮತ್ತು ಟ್ರಸ್ಟಿನ ಅಧ್ಯಕ್ಷರ ಯಾವುದೇ ಪೋಸ್ಟರ್ ಬ್ಯಾನರ್ ಗಳಲ್ಲಿ ಕಾಣದಿರುವುದು ಟ್ರಸ್ಟಿನ ಪದಾಧಿಕಾರಿಗಳಲ್ಲಿ ಸಹ ಗೊಂದಲವನ್ನು ಸೃಷ್ಟಿಸಿತ್ತು.

ಈ ಕಾರ್ಯಕ್ರಮಕ್ಕೆ ಪೋಲಿಸ್ ಇಲಾಖೆ  ಮತ್ತು ಕೆಇಬಿ ಇಲಾಖೆ ಇಂದ ಉತ್ತಮ ಸಹಕಾರ ನೀಡಿದ್ದಾರೆ ಎಂದು ಜನರು ವ್ಯಕ್ತಪಡಿಸಿದ್ದಾರೆ.

Related posts

ಆಲೂರುನಲ್ಲಿ ಹೆಚ್ ಪಿ ವಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಧಮ್ಮ ಜನ ಸ್ಪಂದನೆ

Bimba Prakashana

ಸಕಲೇಶಪುರ ಪುರಸಭೆಯ ಕೊಠಡಿ ಯಲ್ಲಿ ಬೆಂಕಿ

Bimba Prakashana

ಸೆಪ್ಟೆಂಬರ್ 6 ಕ್ಕೆ ಎತ್ತಿನ ಹೊಳೆ ಚಾಲನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More