Blog

ಬೊಬ್ಬನ ಹಳ್ಳಿ ಜಾತ ಹಳ್ಳಿಯ ಮಲ್ಲೇಶ್ವರ ಸ್ವಾಮಿ ಜಾತ್ರೆ

ಇತಿಹಾಸ ಪ್ರಸಿದ್ಧ ಬೊಬ್ಬನಹಳ್ಳಿ – ಜಾತಹಳ್ಳಿಯ ಶ್ರೀ ಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಜ್ಜಾಗುತ್ತಿರುವ ಗ್ರಾಮ.

ಸಕಲೇಶಪುರ :- ಮಲೆನಾಡಿನ ಧಾರ್ಮಿಕ ಪರಂಪರೆಯನ್ನು ಹೊತ್ತ ಜಾತಹಳ್ಳಿ ಬೊಬ್ಬನಹಳ್ಳಿಯ  ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವನ್ನು ದಿನಾಂಕ 25-01-2026 ರಿಂದ 27-01-2026ರವರೆಗೆ ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ತಾಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ಧವಾದ ಶ್ರೀ ಮಲ್ಲೇಶ್ವರ ಸ್ವಾಮಿ ಜಾತ್ರಾಮಹೋತ್ಸವ ದಿನಾಂಕ: 26.01.2026 ನೇ ಸೋಮವಾರ ದಂದು  ಹಾಗೂ ದಿನಾಂಕ: 27.01.2026 ನೇ ಮಂಗಳವಾರದಂದು ವಳಲಹಳ್ಳಿ “ಜಾತ್ರಾ ಮಹೋತ್ಸವ” ಜರುಗಲಿದೆ.


ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ: 25.01.2026 ರಂದು ರಾತ್ರಿ ಶ್ರೀ ಮಲ್ಲೇಶ್ವರ ಸ್ವಾಮಿಗೆ”ಕಳಸ ಪೂಜೆ” ಮತ್ತು “ಅನ್ನಸಂತರ್ಪಣೆ”  ನಡೆಯಲಿದೆ.

ದಿನಾಂಕ :-26. 01.2026ರಂದು ಸೋಮವಾರ ಶ್ರೀ ಮಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ, ಮಹಾ ಮಂಗಳಾರತಿ ಹಾಗೂ ಬೆಳಗ್ಗೆಯಿಂದ ಸಂಜೆಯವರೆಗೆ “ಜಾತ್ರಾ ಮಹೋತ್ಸವ”ಕಾರ್ಯಕ್ರಮವೂ ನಡೆಯಲಿದೆ.
ದಿನಾಂಕ: 27.01.2026 ನೇ ಮಂಗಳವಾರ ದಂದು ವಳಲಹಳ್ಳಿ”ಜಾತ್ರಾ ಮಹೋತ್ಸವ”  ನೆಡೆಯಲಿದೆ.


ಈ ಜಾತ್ರಾ ಮಹೋತ್ಸವವು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ,ಇದು ಗ್ರಾಮೀಣ ಸಂಸ್ಕೃತಿ, ಐಕ್ಯತೆ ಹಾಗೂ ಪರಂಪರೆಯ ಪ್ರತಿಬಿಂಬವಾಗಿದೆ. ಸುತ್ತಮುತ್ತಲ ಗ್ರಾಮಗಳಿಂದಲೂ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಎಲ್ಲರಿಗೂ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ.

ಗ್ರಾಮಸ್ಥರು, ಭಕ್ತಾದಿಗಳಿಗೆ ಈ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ಹಾಗೂ ಬೊಬ್ಬನಹಳ್ಳಿ, ಜಾತಹಳ್ಳಿ, ವಳಲಹಳ್ಳಿ, ಕರಡಿಗಾಲ, ಮರ್ಜನಹಳ್ಳಿ,ಮರ್ಕನಹಳ್ಳಿ, ಚಿನ್ನನಹಳ್ಳಿ, ಕಲ್ಲು ತೋಟ  ಹಾಗೂ ಸುತ್ತಮುತ್ತಲಿನ  ಗ್ರಾಮಸ್ಥರುಗಳು ವಿನಮ್ರವಾಗಿ ಮನವಿ ಮಾಡಿದ್ದಾರೆ.
ಸರ್ವರಿಗೂ ಆದರದ ಸುಸ್ವಾಗತ .

Related posts

ಗ್ರಾಮ ಲೆಕ್ಕಾಧಿಕಾರಿ ಮೋಹನ್ ಕುಮಾರ್ ಲೋಕಾಯುಕ್ತ ಬಲೆಗೆ

Bimba Prakashana

ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಗೆ ಪ್ರವೇಶ ಆರಂಭ

Bimba Prakashana

Wanted

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More