Blog

ಹುಟ್ಟುಹಬ್ಬದ ಶುಭಾಶಯಗಳು



ದಾಸರ ಹಾಡು ನೆನಪಾಯಿತು. ಪಕ್ಷಕ್ಕೆ ಅಧ್ಯಕ್ಷ ಸುಪ್ರೀಂ, ಸಂಘಕ್ಕೆ ಸರಸಂಘ ಚಾಲಕರು ಸುಪ್ರೀಂ, ಆದರೆ ಪಕ್ಷ ಹಾಗೂ ಸಂಘಕ್ಕೆ ಕೊಂಡಿಯಾಗಿ ಕೆಲಸ ಮಾಡುವಲ್ಲಿ ಸಂಘವೇ ಕಳಿಸಿಕೊಡುವ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸುಪ್ರೀಂ ಆಗಿರುತ್ತಾರೆ. ಪಕ್ಷದಲ್ಲಿ ಯಾವುದೇ ನಿರ್ಧಾರ ಆಗುವಲ್ಲಿ ಸಂಘಟನಾ ಕಾರ್ಯದರ್ಶಿಗಳ ಅನುಮತಿ ಹಾಗೂ ಸಲಹೆ ಕಡ್ಡಾಯ ಮತ್ತು ಅತೀ ಅವಶ್ಯಕ.

ದಾಸರು ಭಗವಂತನನ್ನು ವರ್ಣಿಸುತ್ತಾ “ಭಕುತ ಜನ ಮುಂದೆ, ನೀನವರ ಹಿಂದೆ” ಎಂದಿದ್ದಾರೆ. ಅಂತೆಯೇ ನಮ್ಮ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷ್ ಜೀ ಎಲ್ಲೂ ಮುಖ್ಯ ವೇದಿಕೆಯಲ್ಲಿ ಕಾಣಿಸಬೇಕೆಂಬ ಹಂಬಲ, ಅಪೇಕ್ಷೆ ತೋರಿಸದೆ ಸಂಘ ಹಾಗೂ ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ  ಅಪ್ರತಿಮ ನಾಯಕರು. ಕರಾವಳಿ ಮ‌ೂಲದ ಸಂಘದ ಪ್ರಚಾರಕ ಸಂತೋಷ್ ಜೀ ಇಂದು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಬೆಳೆದು ನಿಂತಿದ್ದರಾದರೂ ಯಾವುದೇ ಹಮ್ಮು ಬಿಮ್ಮಿಲ್ಲದೆ ಪಕ್ಷ ಸಂಘಟನೆ ಮಾಡುತ್ತಿದ್ದಾರೆ.

ಅನೇಕ ಬಾರಿ ಅವರನ್ನು ಮುಖ್ಯ ವೇದಿಕೆಗಳಲ್ಲಿ ನೋಡುವಾಗ ನನಗನಿಸಿದ್ದೇ ಇದೇ ಸಾಲುಗಳು. ಪಕ್ಷದ ಪರಿಧಿಯಲ್ಲಿ ಮೋದಿಯವರ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಸಮಾನ ತೂಕದ ಅಧಿಕಾರವನ್ನು ಪಡೆದಿದ್ದಾರಾದರೂ ಅವರೆಂದಿಗೂ ತನ್ನನ್ನು ತಾನು ವೈಭವೀಕರಿಸಲು ಹೋಗಿಯೇ ಇಲ್ಲ. ಸ್ವಲ್ಪ ಅವಕಾಶ ಸಿಕ್ಕರೂ ಫೋಟೋ ರೀಲ್ಸ್ ಎಂದು ಪ್ರಚಾರ ಪಡೆಯುವ ಈ ಕಾಲದಲ್ಲಿ ಅಷ್ಟು ಎತ್ತರಕ್ಕೇರಿದರೂ ಅವರ ನಡೆ ನುಡಿಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ ಎನ್ನುವಾಗ ಅಚ್ಚರಿ ಆಗುತ್ತದೆ.

ನೂತನ ರಾಷ್ಟ್ರೀಯ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಜೀ ಯವರನ್ನು ಕಂಡಾಗ ದಾಸರ ಹಾಡು ನನಗೆ ನೆನಪಾಯಿತು. ಹಾಗೆಯೇ ಹಲವು ಚಿತ್ರಗಳನ್ನು ಕಂಡಾಗ ನನಗನಿಸಿದ್ದು “ಬದುಕಿದರೆ ಹೀಗೆ ಬದುಕಬೇಕೆಂದು”…

ಹಾಸನ ಜಿಲ್ಲೆ ಆಲೂರು ರಾಧಮ್ಮ ಜನ ಸ್ಪಂದನದಿಂದ ಹುಟ್ಟುಹಬ್ಬದ ಶುಭಾಶಯಗಳು

Related posts

ಬೀದಿ ನಾಯಿಗಳ ಸಂತಾನ ಹರಣ ಕೇಂದ್ರ ನಿರ್ಮಾಣ ಮಾಡದಂತೆ ಆಗ್ರಹ

Bimba Prakashana

ಸಾರ್ವಜನಿಕ ಹಣ ದುರ್ಬಳಕೆ  – ಬಾಗೆ ಗ್ರಾಮ ಪಂಚಾಯತ್ ಪಿ ಡಿ ಓ ವಿರುದ್ಧ ಹೋರಾಟ ಆರಂಭ

Bimba Prakashana

ಪತ್ರಕರ್ತರಿಗೆ ಬಸ್ ಪಾಸ್ – ಉದಯ ಹೆಚ್ ಹೆಚ್ ಸಂತಸ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More