Blog

ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ – ಧನುಷ್ ಪ್ರಥಮ

ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸಕಲೇಶಪುರ ವಿದ್ಯಾರ್ಥಿಗೆ ಪ್ರಥಮ ಬಹುಮಾನ

ಸಕಲೇಶಪುರ: ತಾಲೂಕಿನ ಕೆಪಿಎಸ್ ಹಾನುಬಾಳು ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಧನುಷ್ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಶಾಲೆಗೆ ಹಾಗೂ ತಾಲೂಕಿನಿಗೆ ಕೀರ್ತಿ ತಂದಿದ್ದಾನೆ.

ರಾಜ್ಯ ಮಟ್ಟದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರೂ, ತನ್ನ ಸೃಜನಾತ್ಮಕ ಚಿತ್ರಕಲೆ ಮೂಲಕ ಧನುಷ್ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಪ್ರಥಮ ಸ್ಥಾನ ಪಡೆದಿದ್ದಾನೆ.

ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು,ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ಶಾಲೆಯಿಗೂ ಹಾಗೂ ಸಮಾಜಕ್ಕೂ ಹೆಮ್ಮೆ ತರುವಂತೆ ಶಿಕ್ಷಕರು ಶುಭ ಹಾರೈಸಿದರು.

ಈ ಸಾಧನೆಯಿಂದ ಕೆಪಿಎಸ್ ಹಾನುಬಾಳು ಶಾಲೆ ಹಾಗೂ ಸಕಲೇಶಪುರ ತಾಲೂಕಿಗೆ ಗೌರವ ಹೆಚ್ಚಾಗಿದೆ.

Related posts

ಹಾನ್ ಬಾಳು ಚಿಕ್ಕಿ ಹಬ್ಬ

Bimba Prakashana

ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಗೆ ಪ್ರವೇಶ ಆರಂಭ

Bimba Prakashana

ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಹಲ್ಲೆ ಪ್ರಕರಣ – ಜೈಲಿನಲ್ಲಿರುವ ಕಾರ್ಯಕರ್ತರ ಭೇಟಿ ಮಾಡಿದ ಉಪ ಸಭಾಪತಿ ಹಾಗೂ ಶಾಸಕರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More